ಗಡ್ಡ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಿಸುತ್ತೆ: ನಮ್ಮ ದೇಹದ ಬಹುತೇಕ ಭಾಗಗಳನ್ನು ಬಟ್ಟೆ ಮುಚ್ಚಿರುತ್ತದೆ ಹೀಗಾಗಿ ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತೆ. ಆದರೆ ಮುಖ ಮಾತ್ರ ತೆರೆದಿರುತ್ತದೆ. ಮುಖದ ಚರ್ಮವು ಅಲ್ಟ್ರಾ ವಯಲೆಟ್ ಕಿರಣಗಳಿಗೆ ತೆರೆದಿಟ್ಟುಕೊಂಡಿರುವುದರಿಂದ ಚರ್ಮದ ಕಜ್ಜಿಗಳು ಅಥವಾ ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೂ ಗಡ್ಡವು ಮುಖದ ಕೆಳಭಾಗ ಮತ್ತು ಕುತ್ತಿಗೆಯನ್ನೂ ಮುಚ್ಚಿ ಬಿಸಿಲಿನಿಂದ ರಕ್ಷಿಸುತ್ತದೆ.
ನೈಸರ್ಗಿಕ ಮಾಯಿಶ್ಚರೈಸರ್: ವ್ಯಕ್ತಿ ನಿಯಮಿತವಾಗಿ ಶೇವ್ ಮಾಡುವುದರಿಂದ ಋತುಮಾನದ ಬದಲಾವಣೆಯಿಂದ ಉಷ್ಣತೆ, ಚರ್ಮದ ಶುಷ್ಕತೆ ಉಂಟಾಗಬಹುದು. ಅಲ್ಲದೇ ತ್ವಚೆಯಲ್ಲಿ ತೇವಾಂಶ ಉಳಿಯಬಹುದೆಂದು ಕಾಸ್ಮೆಟಿಕ್ಗಳನ್ನು ಹೆಚ್ಚಾಗಿ ಬಳಸುವುದರಿಂದ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ನಿಮ್ಮ ಮುಖದಲ್ಲಿ ಅಂತರ್ನಿರ್ಮಿತ ತೇವಾಂಶ ಕಾಪಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಅದು ಜಿಡ್ಡನ್ನು ಉತ್ಪಾದಿಸಿ ಚರ್ಮದ ತೇವವನ್ನು ಕಾಪಾಡುತ್ತದೆ. ಆದರೆ ನಿರಂತರ ರೇಜರ್ ಬಳಕೆಯಿಂದ ಈ ಗ್ರಂಥಿಗಳು ನಾಶವಾಗಬಹುದು. ಗಡ್ಡ ಬೆಳೆಸುವುದರಿಂದ ಈ ಗ್ರಂಥಿಗಳು ಸಹಜವಾಗಿ ಕೆಲಸ ಮಾಡುತ್ತವೆ ಮತ್ತು ನಿಮ್ಮ ಚರ್ಮ ಮೃದುವಾಗಿ ಯೌವನಭರಿತವಾಗಿ ಉಳಿಯುತ್ತದೆ.