Skipping Benefits: ಪ್ರತಿದಿನ 10 ನಿಮಿಷ ಸ್ಕಿಪ್ಪಿಂಗ್ ಮಾಡಿ ಸಾಕು, ತೆಳ್ಳ ಆಗೋದು ಗ್ಯಾರಂಟಿ
Health Benefits of Skipping: ಸ್ಕಿಪ್ಪಿಂಗ್ ಅತ್ಯುತ್ತಮ ಏರೋಬಿಕ್ ಮತ್ತು ಕಾರ್ಡಿಯೋ ವ್ಯಾಯಾಮ ಎಂದು ಸಾಬೀತಾಗಿದೆ. ತುಂಬಾ ಸುಲಭವಾದ ರೀತಿಯಲ್ಲಿ ದೇಹದ ತೂಕವನ್ನು ನಿಯಂತ್ರಿಸಲು ಸಹ ಇದು ಸಹಕಾರಿ. ಈ ಸ್ಕಿಪ್ಪಿಂಗ್ ಮಾಡುವುದರಿಂದ ಏನೆಲ್ಲಾ ಲಾಭಗಳಿದೆ ಎಂಬುದು ಇಲ್ಲಿದೆ.
ಸ್ಕಿಪ್ಪಿಂಗ್ ಮಾಡುವುದರಿಂದ ಹಲವಾರು ಪ್ರಯೋಜನಗಳಿದೆ. ಇದು ತುಂಬಾ ಸುಲಭವಾದ ರೀತಿಯಲ್ಲಿ ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಸ್ಕಿಪ್ಪಿಂಗ್ ಮಾಡುವುದು ನಿಮಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ.
2/ 8
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಹೃದಯದ ಆರೋಗ್ಯಕ್ಕೆ ಸ್ಕಿಪ್ಪಿಂಗ್ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮ ಎಂದು ಹೇಳಲಾಗುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಬರದಂತೆ ತಡೆಯಬಹುದು ಎನ್ನುತ್ತಾರೆ ತಜ್ಞರು.
3/ 8
ಏಕಾಗ್ರತೆ ಹೆಚ್ಚಿಸುತ್ತದೆ ಸ್ಕಿಪ್ಪಿಂಗ್ ಮಾಡುವಾಗ ನಿರ್ದಿಷ್ಟ ಸಂಖ್ಯೆಯತ್ತ ಗಮನ ಕೊಡಿ. 100 ಎಂದರೆ 100 ಹೀಗೆ ನಂಬರ್ ನೆನಪಿರಬೇಕು. ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಮನಸ್ಸು ಮತ್ತು ದೇಹವು ಸಾಮರಸ್ಯದಿಂದ ಇದ್ದರೆ, ಮಾನಸಿಕ ಶಾಂತಿ ಮತ್ತು ದೈಹಿಕ ಶಕ್ತಿ ಹೆಚ್ಚಾಗುತ್ತದೆ.
4/ 8
ಸ್ನಾಯುಗಳ ಶಕ್ತಿ ಹೆಚ್ಚಾಗುತ್ತದೆ ಸ್ಕಿಪ್ಪಿಂಗ್ ಮಾಡುವಾಗ ದೇಹದ ಸ್ನಾಯುಗಳು ಹಗುರವಾಗುತ್ತವೆ. ಇದರಿಂದ ದೇಹಕ್ಕೆ ಒಳ್ಳೆಯ ರಿಲೀಫ್ ಸಿಗುತ್ತದೆ. ಸರಿಯಾದ ರಕ್ತ ಪರಿಚಲನೆಯಿಂದಾಗಿ, ಇಡೀ ದೇಹವು ಶಕ್ತಿಯುತವಾಗಿರುತ್ತದೆ.
5/ 8
ಹೊಟ್ಟೆಯನ್ನು ಕಡಿಮೆ ಮಾಡುತ್ತದೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಸಿಕ್ಕ ಸಿಕ್ಕ ಡಯೆಟ್ ಮಾಡುವುದು ಬೇಡ, ಇದಕ್ಕೆ ಸ್ಕಿಪ್ಪಿಂಗ್ ಉತ್ತಮ ಆಯ್ಕೆಯಾಗಿದೆ. ನಿಮ್ಮ ದೇಹವನ್ನು ಫಿಟ್ ಆಗಿಡಲು ಇದು ಸಹಾಯ ಮಾಡುತ್ತದೆ.
6/ 8
ಮೂಳೆಗಳ ಆರೋಗ್ಯಕ್ಕೆ ಮೂಳೆಯ ಸಾಂದ್ರತೆ ಮತ್ತು ಬಲವನ್ನು ಹೆಚ್ಚಿಸಲು ಸ್ಕಿಪ್ಪಿಂಗ್ ಉತ್ತಮ ವ್ಯಾಯಾಮ. ಹೀಗೆ ಮಾಡುವುದರಿಂದ ಮೂಳೆ ಸಮಸ್ಯೆಗಳು ಬರುವುದಿಲ್ಲ. ಅಲ್ಲದೇ ಯಾವುದೇ ರೀತಿಯ ನೋವು ಸಹ ಬರುವುದಿಲ್ಲ.
7/ 8
ಶ್ವಾಸಕೋಶದ ಆರೋಗ್ಯ, ಸ್ನಾಯುಗಳನ್ನು ಬಲಪಡಿಸಲು ಮತ್ತು ದೇಹದ ತೂಕವನ್ನು ಕಾಪಾಡಿಕೊಳ್ಳಲು ಸ್ಕಿಪ್ಪಿಂಗ್ ಉತ್ತಮ ಆದರೂ ಸಹ ಇದನ್ನು ಅತಿಯಾಗಿ ಮಾಡಬಾರದು. ಒಂದು ಮಿತಿಯಲ್ಲಿ ಮಾಡುವುದು ಸೂಕ್ತ.
8/ 8
ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಕನ್ನಡ ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ