ಇದನ್ನು ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿದ್ದರೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು, ಹೊಟ್ಟೆ ಸಮಸ್ಯೆಗಳು ಸೇರಿದಂತೆ ಅನೇಕ ರೀತಿಯ ತೊಂದರೆಗಳಿಗೆ ಪರಿಹಾರ ಕಾಣಬಹುದು. ಹೀಗಾಗಿಯೇ ಕರಿ ಮೆಣಸನ್ನು ದಿವ್ಯೌಷಧ ಎನ್ನಲಾಗುತ್ತದೆ. ಈ ಸಂಬಾರ ಪದಾರ್ಥಗಳಿಂದ ಪಡೆಯ ಬಹುದಾದ ವಿಶೇಷ ಪ್ರಯೋಜನಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಶೀತ ಮತ್ತು ಕೆಮ್ಮು: ನಿಮಗೆ ಶೀತ ಕೆಮ್ಮು ಇದ್ದರೆ, ಚಹಾಕ್ಕೆ ಕರಿಮೆಣಸು ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಿರಿ. ಇದರಿಂದ ನಿಮ್ಮ ಶೀತ ಕೆಮ್ಮು ಮಾಯವಾಗುತ್ತದೆ. ಅಷ್ಟೇ ಅಲ್ಲದೆ ಬೆಲ್ಲದೊಂದಿಗೆ ಕಾಳು ಮೆಣಸನ್ನು ಮಿಶ್ರ ಮಾಡಿ ಸಣ್ಣ ಮಾತ್ರೆಗಳನ್ನಾಗಿಸಿ ಕೂಡ ಸೇವಿಸಬಹುದು. ಇದನ್ನು ನಿರಂತರ ಸೇವಿಸುವುದರಿಂದ ಕೆಮ್ಮು, ಗಂಟಲು ಕೆರೆತ, ಶೀತದ ಸಮಸ್ಯೆ ದೂರವಾಗುತ್ತದೆ.
ಕಫ ಮತ್ತು ಶೀತ: ಶೀತದಿಂದ ಉಂಟಾಗುವ ಕಫದಿಂದ ಮುಕ್ತಿ ಪಡೆಯಲು, ಚಿಟಿಕಿ ಕರಿಮೆಣಸಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಸೇವಿಸಿ. ಒಣ ಶುಂಠಿ, ಕರಿಮೆಣಸು, ಏಲಕ್ಕಿ ಮತ್ತು ಸಕ್ಕರೆಯನ್ನು ಪುಡಿ ಮಾಡಿ. ಅದಕ್ಕೆ ಒಣ ದ್ರಾಕ್ಷಿ ಮತ್ತು ತುಳಸಿ ಎಲೆಗಳ ಬೀಜಗಳನ್ನು ಪುಡಿಮಾಡಿ ಮಿಶ್ರಣ ಮಾಡಿ. ಈ ಮಿಶ್ರಣದ ಮಾತ್ರೆಗಳನ್ನು ತಯಾರಿಸಿ ಒಣಗಿಸಿ. ನಿಮಗೆ ಶೀತದ ಅಲರ್ಜಿ ಇದ್ದರೆ, ಬೆಳಿಗ್ಗೆ ಮತ್ತು ಸಂಜೆ ಬೆಚ್ಚಗಿನ ನೀರಿನಿಂದ ಈ ಮಾತ್ರೆಗಳನ್ನು ತೆಗೆದುಕೊಳ್ಳಿ. ಹಾಗೆಯೇ ಮೂಗಿನಿಂದ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ, ಅದನ್ನು ನಿಲ್ಲಿಸಲು, ಬೆಲ್ಲದೊಂದಿಗೆ ಕರಿ ಮೆಣಸನ್ನು ಮಿಶ್ರ ಮಾಡಿ ಸೇವಿಸಿ.
ಜೀರ್ಣಕ್ರಿಯೆ ಸಮಸ್ಯೆ: ಕರಿಮೆಣಸು ಮತ್ತು ಕಪ್ಪು ಉಪ್ಪನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗೆ ಗುಡ್ಬೈ ಹೇಳಬಹುದು. ಈ ರೀತಿಯ ಪಾನೀಯ ಕುಡಿಯುವುದರಿಂದ ಹೊಟ್ಟೆಯಲ್ಲಿ ಸೂಕ್ಷ್ಮಜೀವಿಗಳು ಸಾಯುತ್ತವೆ. ಹಾಗೆಯೇ ಹೊಟ್ಟೆ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಒಂದು ಕಪ್ ನೀರಿನಲ್ಲಿ ಅರ್ಧ ನಿಂಬೆ ರಸ, ಅರ್ಧ ಟೀಸ್ಪೂನ್ ಕರಿಮೆಣಸು ಮತ್ತು ಅರ್ಧ ಸ್ಪೂನ್ ಕಪ್ಪು ಉಪ್ಪು ಬೆರೆಸಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.