Sitting on the floor : ಹಿಂದಿನ ಕಾಲದಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆ ಹಾಕಿಕೊಂಡು ಊಟ ಮಾಡೋದು ಕಡ್ಡಾಯವಾಗಿತ್ತು. ಇಂದು ಕಾಲ ಬದಲಾಗಿದೆ. ಮನೆಗಳಲ್ಲಿ ಡೈನಿಂಗ್ ಟೇಬಲ್ಗಳು ಬಂದಿವೆ. ಇದರ ಜೊತೆಗೆ ಮನೆಯಲ್ಲಿ ಖುರ್ಚಿ, ಸೋಫಾಗಳು ಬಂದಿವೆ. ಹಾಗಾಗಿ ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸವೇ ಮರೆ ಆಗಿದೆ. ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿತ್ತು. (ಸಾಂದರ್ಭಿಕ ಚಿತ್ರ)
Best for Hip muscles : ನೆಲದ ಮೇಲೆ ಕುಳಿತುಕೊಳ್ಳುವರಿಂದ ನಿಮ್ಮ ಸೊಂಟದ ಸ್ನಾಯುಗಳು ಬಲವಾಗುತ್ತವೆ. ಹಿಪ್ ಫ್ಲೆಕ್ಸರ್ಗಳು ನಮ್ಮ ಸೊಂಟವನ್ನು ತೊಡೆ, ಕೆಳ ಬೆನ್ನು ಮತ್ತು ಸೊಂಟಕ್ಕೆ ಸಂಪರ್ಕಿಸುವ ಸ್ನಾಯುಗಳಾಗಿವೆ. ಇವು ದುರ್ಬಲವಾಗಿದ್ದರೆ, ಸರಿಯಾಗಿ ನಡೆಯಲು, ನಿಲ್ಲಲು ಸಾಧ್ಯವಾಗುವುದಿಲ್ಲ. ನೆಲದ ಮೇಲೆ ಕುಳಿತುಕೊಳ್ಳುವವರಿಗೆ ಈ ಸಮಸ್ಯೆ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)