Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

ಮಾನವರಿಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರಗಳಿವೆ ಎಂದು ಹಿಂದಿನವರು ಹೇಳುತ್ತಾರೆ. ಹಾಗಂತ ಇದು ಬರೀ ಮಾತಷ್ಟೇ ಅಲ್ಲ. ನಿಜವೂ ಹೌದು.. ಕೆಲವೊಮ್ಮೆ ಈ ಆಸ್ಪತ್ರೆಗಳಲ್ಲಿ ವೈದ್ಯರಿಗೆ ನಿವಾರಿಸಲಾಗದ ಆರೋಗ್ಯ ಸಮಸ್ಯೆಗಳು ಮನೆಮದ್ದಿನಿಂದ ವಾಸಿಯಾದ ಅದೆಷ್ಟೋ ಉದಾಹರಣೆಗಳು ಕೂಡ ಸಮಾಜದಲ್ಲಿದೆ. ಹಾಗಂತ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯವೂ ಸಲ್ಲದು. ಆಡುಸೋಗೆ ಗಿಡದ ಹೆಸರು ಅನೇಕರು ಕೇಳಿರುತ್ತಾರೆ. ಆಡುಸೋಗೆ ಸೊಪ್ಪು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಜನರು ದಿನನಿತ್ಯ ಎದುರಿಸುವ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಆಡುಸೋಗೆಯ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದಕ್ಕೆ ಇಲ್ಲಿದೆ ಉತ್ತರ.

First published:

  • 19

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಆಡುಸೋಗೆ ಗಿಡದ ಎಲೆಯ ರಸ, ಒಣದ್ರಾಕ್ಷಿ ಮತ್ತು ಅಳಲೆಕಾಯಿ ಹಣ್ಣಿನ ತಿರುಳನ್ನು ನೀರಿಗೆ ಹಾಕಿ ಕಷಾಯ ತಯಾರಿಸಿ ದಿನಕ್ಕೆ 2 ಬಾರಿ ಕುಡಿದರೆ ಮೂಗಿನಲ್ಲಿ ರಕ್ತ ಸೋರುವುದು ವಾಸಿಯಾಗುತ್ತದೆ.

    MORE
    GALLERIES

  • 29

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಪೀರಿಯಡ್ಸ್‌ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆ ಪುಡಿಗೆ ಅದರದೇ ಕಷಾಯ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

    MORE
    GALLERIES

  • 39

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಅಸ್ತಮಾ ಇದ್ದರೆ ಆಡುಸೋಗೆ ಎಲೆಯ ರಸಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಸೇರಿಸಿ ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಆಸ್ತಮಾ ನಿವಾರಣೆಯಾಗುತ್ತದೆ.

    MORE
    GALLERIES

  • 49

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಅಂಗೈ ಮತ್ತು ಅಂಗಾಲಿನಲ್ಲಿ ಉರಿ ಹೆಚ್ಚಿದ್ದರೆ ಆಡುಸೋಗೆ ಎಲೆಯ ಕಷಾಯ ಮಾಡಿ ಅದರಲ್ಲಿ ಅಂಗೈಮತ್ತು ಅಂಗಾಲನ್ನು 10 ರಿಂದ 15 ನಿಮಿಷ ಇಟ್ಟರೆ ಉರಿ ಬೇಗ ಶಮನವಾಗುತ್ತದೆ.

    MORE
    GALLERIES

  • 59

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ಆಡುಸೋಗೆ ಬೇರಿನ ಕಷಾಯವನ್ನು ಸೇವಿಸಿದರೆ ಪ್ರಯೋಜನವಿದೆ.

    MORE
    GALLERIES

  • 69

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆಗಳನ್ನು ಪೇಸ್ಟ್‌ ಮಾಡಿ ವಸಡುಗಳಿಗೆ ಲೇಪ ಮಾಡಿದರೆ ರಕ್ತ ನಿಲ್ಲುತ್ತದೆ.

    MORE
    GALLERIES

  • 79

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಮೊಣಕಾಲು, ಮಂಡಿಗಳಲ್ಲಿ ಊತ, ನೋವು ಮತ್ತು ಕೆಂಪಾಗಿದ್ದರೆ ಆಡುಸೋಗೆ ಎಲೆಯನ್ನು ಎಳ್ಳೆಣ್ಣೆಯಲ್ಲಿ ಬೇಯಿಸಿ ಬಟ್ಟೆಯಲ್ಲಿಟ್ಟು ಕಟ್ಟಿದರೆ ಊತ, ನೋವು ಬೇಗ ಕಡಿಮೆಯಾಗುತ್ತದೆ.

    MORE
    GALLERIES

  • 89

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಆಡುಸೋಗೆ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಸೇವಿಸಿದರೆ ಗಂಟಲು ಉರಿ, ಕೆಮ್ಮು ಮತ್ತು ಹಳದಿ ಅಥವಾ ಹಸಿರು ಕಫ ಇದ್ದರೆ ಬೇಗ ಶಮನವಾಗುತ್ತದೆ.

    MORE
    GALLERIES

  • 99

    Health Tips: ಆಡುಸೋಗೆ ಸೊಪ್ಪಿಗಿದೆ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ!

    ಹೊಟ್ಟೆಯಲ್ಲಿ ಹುಣ್ಣಾಗಿದ್ದು ಉರಿ, ನೋವಿದ್ದರೆ ಆಡುಸೋಗೆ ಎಲೆಯ ಪುಡಿಗೆ ಜೇಷ್ಠಮಧು ಪುಡಿ ಮತ್ತು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಹೊಟ್ಟೆ ಹುಣ್ಣು ಗುಣವಾಗುತ್ತದೆ.

    MORE
    GALLERIES