Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

Heritage Villages: ಜನರು ಸಾಮಾನ್ಯವಾಗಿ ವಿದೇಶಕ್ಕೆ ಹೋಗಲು ಅಥವಾ ದೊಡ್ಡ ನಗರಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಕೆಲವೇ ಜನರು ಹಳ್ಳಿಗೆ ಹೋಗಲು ಬಯಸುತ್ತಾರೆ. ಅಂತಹವರಿಗಾಗಿಯೇ ಇಲ್ಲಿದೆ ಶಾಂತಿಯುತ, ಸುಂದರವಾದ ಸ್ಥಳಗಳನ್ನು ಹೊಂದಿರುವ ಬೆಸ್ಟ್​ ಹಳ್ಳಿಗಳು

First published:

  • 17

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

     ಭಾರತದಲ್ಲಿ ಹಲವಾರು ವಿಭಿನ್ನವಾದ ಹಳ್ಳಿಗಳಿವೆ. ಅಂತಹ ಪಟ್ಟಿಯಲ್ಲಿರುವ ಕೆಲವು ಹಳ್ಳಿಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಹಳ್ಳಿಗಳು ದೇಶದಲ್ಲಿ ಒಂದು ರೀತಿಯಲ್ಲಿ ವಿಶೇಷ ಅಂತಾನೇ ಹೇಳ್ಬಹುದು.

    MORE
    GALLERIES

  • 27

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ಪ್ರಯಾಣದ ವಿಷಯಕ್ಕೆ ಬಂದಾಗ, ಜನರು ಸಾಮಾನ್ಯವಾಗಿ ವಿದೇಶಕ್ಕೆ ಹೋಗಲು ಅಥವಾ ದೊಡ್ಡ ನಗರಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಕೆಲವೇ ಜನರು ಹಳ್ಳಿಗೆ ಹೋಗಲು ಬಯಸುತ್ತಾರೆ. ಆದಾಗ್ಯೂ, ಭಾರತದಲ್ಲಿ ನಗರದ ಶಬ್ದಗಳಿಂದ ತಪ್ಪಿಸಿಕೊಳ್ಳಲು ಮತ್ತು ಶಾಂತಿಯುತ, ಸುಂದರವಾದ ದೃಶ್ಯಾವಳಿಗಳನ್ನು ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಇವುಗಳು ಖಂಡಿತವಾಗಿಯೂ ಬಹಳ ಉತ್ತಮ ತಾಣಗಳಾಗಿವೆ.

    MORE
    GALLERIES

  • 37

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ಪ್ರಾಗ್ಪುರ್, ಹಿಮಾಚಲ ಪ್ರದೇಶ: ಪ್ರಾಗ್ಪುರ್ ಭಾರತದ ಮೊದಲ ಪಾರಂಪರಿಕ ಗ್ರಾಮ ಎಂದು ಹೇಳಿದ್ದಾರೆ. ಹೌದು, ಈ ಸಾಂಪ್ರದಾಯಿಕ ಗ್ರಾಮವನ್ನು 16 ನೇ ಶತಮಾನದ ಕೊನೆಯಲ್ಲಿ ಕಾಂಗ್ರಾ ಜಿಲ್ಲೆಯ ಜಸ್ವಾನ್ ರಾಜಮನೆತನದ ರಾಜಕುಮಾರಿ ಬ್ರಾಗ್ ಸ್ಥಾಪಿಸಿದರು. ನಂತರ ಪ್ರಗ್ರಾಜ್  ಗ್ರಾಮ ಅವಳ ಹೆಸರನ್ನು ಇಡಲಾಗಿದೆ. ಸುಂದರವಾದ ಅಂಗಡಿಗಳು, ಕಲ್ಲು ರಸ್ತೆಗಳು ಮತ್ತು ಕೋಟೆಯಂತಹ ಮನೆಗಳನ್ನು ನೋಡಲು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ.

    MORE
    GALLERIES

  • 47

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ಗಾರ್ಲಿ: ಹಿಮಾಚಲ ಪ್ರದೇಶದ ಪ್ರಾಗ್ಪುರದಿಂದ ಪ್ರವೇಶಿಸಬಹುದಾದ ಗಾರ್ಲಿ ಗ್ರಾಮವು ಅದರ ವಾಸ್ತುಶಿಲ್ಪಕ್ಕೆ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಗಾರ್ಲಿಯ ಸುಂದರ ಹವೇಲಿಗಳು ಒಂದು ಕಾಲದಲ್ಲಿ ಶ್ರೀಮಂತ ವ್ಯಾಪಾರಿಗಳ ನಿವಾಸವಾಗಿತ್ತು. ಇಲ್ಲಿನ ವಾಸ್ತುಶೈಲಿಯಲ್ಲಿ ಯುರೋಪಿಯನ್ ಪ್ರಭಾವವನ್ನು ಕಾಣಬಹುದು. ಇಲ್ಲಿನ ಅರಮನೆಯು ಪ್ರಸಿದ್ಧ ಪಾರಂಪರಿಕ ಹೋಟೆಲ್‌ಗಳಲ್ಲಿ ಒಂದಾಗಿದೆ.

    MORE
    GALLERIES

  • 57

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ಕಿಸಾಮಾ, ನಾಗಾಲ್ಯಾಂಡ್: ನಾಗಾಲ್ಯಾಂಡ್‌ನ ಕಿಸಾಮಾ ಗ್ರಾಮವು ದೇಶದ ಪ್ರಸಿದ್ಧ ಸಾಂಪ್ರದಾಯಿಕ ಹಳ್ಳಿಗಳಲ್ಲಿ ಒಂದಾಗಿದೆ. ಈ ಗ್ರಾಮವು ಹಾರ್ನ್‌ಬಿಲ್ ಹಬ್ಬಕ್ಕೆ ಹೆಸರುವಾಸಿಯಾಗಿದೆ. ರಾಜಧಾನಿ ಕೊಹಿಮಾದಿಂದ ಕೇವಲ 12 ಕಿ.ಮೀ. ದೂರದಲ್ಲಿದೆ. ಟೋಟೆಮ್ ಪೋಲ್‌ಗಳಿಂದ ಹಿಡಿದು ಮೊರಾಂಗ್‌ಗಳವರೆಗೆ ಎಲ್ಲವನ್ನೂ ಇಲ್ಲಿ ಕಾಣಬಹುದು.

    MORE
    GALLERIES

  • 67

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ಖಾಸಿ, ಮೇಘಾಲಯ: ಮೌಬ್ಲಾಂಗ್ ಅರಣ್ಯವು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ 25 ಕಿ.ಮೀ ದೂರದಲ್ಲಿದೆ. ಖಾಸಿ ಬೆಟ್ಟಗಳ ಪೂರ್ವ ಹಿಮಾಲಯ ಪ್ರದೇಶದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಜನಾಂಗೀಯ ಖಾಸಿ ಜನರು ಇಲ್ಲಿದ್ದಾರೆ. ಈ ಬುಡಕಟ್ಟು ಜನಾಂಗದ ಖಾಸಿಯ ಸಾಂಪ್ರದಾಯಿಕ ಗ್ರಾಮವು ಇದರ ಹತ್ತಿರದಲ್ಲಿದೆ. ಇದು ಹಚ್ಚಹಸಿರಿನಿಂದ ಆವೃತವಾದ ಶಾಂತಿಯುತ ಗ್ರಾಮವಾಗಿದೆ.

    MORE
    GALLERIES

  • 77

    Heritage Villages: ಬೇಸಿಗೆಯಲ್ಲಿ ದೇಶದ ಈ ಸ್ಥಳಗಳಿಗೆ ಹೋದ್ರೆ ಉರಿ ಬಿಸಿಲು ಅನ್ನೋ ಮಾತೇ ಇಲ್ಲ

    ರಿಕ್, ಮಿಜೋರಾಂ: ರಿಕ್ ಥ್ಲಾಂಗ್ ಅಥವಾ ರಿಕ್ ಸಾಂಪ್ರದಾಯಿಕ ಗ್ರಾಮವು ಮಿಜೋರಾಂನ ಮಮಿತ್ ಜಿಲ್ಲೆಯಲ್ಲಿದೆ. ಪ್ರಕೃತಿಯಿಂದ ಸುತ್ತುವರಿದ ಸುಂದರ ಕಣಿವೆಗಳ ಮಡಿಲಲ್ಲಿ ನೆಲೆಸಿರುವ ರಿಕ್ ವಿಲೇಜ್ ಸಾಂಪ್ರದಾಯಿಕ ಮಿಜೋ ಗುಡಿಸಲುಗಳನ್ನು ಹೊಂದಿದೆ ಮತ್ತು ಮಿಜೋ ಜನರ ಸ್ಥಳೀಯ ಜೀವನವನ್ನು ಅನುಭವಿಸುತ್ತಾರೆ.

    MORE
    GALLERIES