ಸಂಬಂಧಗಳೇ ಹಾಗೆ ಅಲ್ವಾ, ಕೆಲವೊಮ್ಮೆ ಪ್ರೀತಿ ಕಾಳಜಿ ತುಂಬಿದ ಮಾತುಗಳಿದ್ರೆ, ಮತ್ತೊಮ್ಮೆ ವಾದ ವಿವಾದಗಳ ಭಿನ್ನಾಭಿಪ್ರಾಯಗಳ ಮಹಾಪೂರವೇ ಇರುತ್ತದೆ. ಆದ್ರೆ ಇವತ್ತು ನಾವು ಇಲ್ಲಿ ಹೇಳಕ್ಕೆ ಹೋಗ್ತಾ ಇರೋದು ಯಾವುದೇ ಸಂಬಂಧದಲ್ಲಿ ವಾದಗಳು, ಜಗಳಗಳು ನಡೆದಾಗ ನಮ್ಮನ್ನು ನಾವು ಹೇಗೆ ಸಂತೈಸಿಕೊಳ್ಳಬೇಕು ಎಂಬುದರ ಕುರಿತು. ಯಾವುದೇ ಸಂಬಂಧದಲ್ಲಿ ಜಗಳಗಳು, ವಾದಗಳು ಆದಾಗ ಅದರಿಂದ ಹೆಚ್ಚಿನ ಜನರಿಗೆ ಟೆನ್ಷನ್ ಆಗೋದು ಸರ್ವೆ ಸಾಮಾನ್ಯ. ಆದರೆ ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಗೆ ಟೆನ್ಷನ್ನೇ ಆಗಲ್ಲ.
ಸಂಬಂಧದಲ್ಲಿ ವಾದ ಆದಾಗ ನಮ್ಮನ್ನು ಕಾಳಜಿ ವಹಿಸಿಕೊಳ್ಳುವ ಮಾರ್ಗಗಳು: ಅಳು: ಮನಸ್ಸಿನಲ್ಲಿ ಅಡಗಿ ಕುಳಿತಿರುವ ಭಾವನೆಗಳನ್ನು ಬಿಡುಗಡೆ ಮಾಡಲು ಮತ್ತು ಉದ್ವೇಗವನ್ನು ಕಡಿಮೆ ಮಾಡಲು ಅಳುವುದು ಒಂದು ಉತ್ತಮ ಮಾರ್ಗವಾಗಿದೆ. ನಿಮಗೆ ಇಷ್ಟವಿದ್ದರೆ ಆಗಾಗ ಅತ್ತು ಹಗುರಾಗಿ. ಇದು ನಿಮ್ಮನ್ನು ಟೆನ್ಸನ್ ನಿಂದ ದೂರ ಇರಿಸುತ್ತದೆ. ಇದು ನಿಮಗೆ ಮತ್ತಷ್ಟು ಉತ್ತಮವಾಗಲು ಮತ್ತು ನಿಮ್ಮ ಭಾವನೆಗಳನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ.
ದೈಹಿಕ ಚಟುವಟಿಕೆಯಲ್ಲಿ ತೊಡಗಿ: ವಾಕಿಂಗ್ ಅಥವಾ ಯೋಗ ಮಾಡುವಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅತಿ ಉತ್ತಮ. ಇದರಿಂದ ನಿಮ್ಮ ಮನಸ್ಸಿನಲ್ಲಿನ ಸುಪ್ತ ಭಾವನೆಗಳನ್ನು ಬಿಡುಗಡೆ ಮಾಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮನ್ನು ನೀವು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನೀವು ಹೆಚ್ಚು ವಿಶ್ರಾಂತಿ ಮತ್ತು ಕೆಲಸದಲ್ಲಿ ಪೋಕಸ್ ಆಗಿರಲು ಸಹಾಯ ಮಾಡುತ್ತದೆ.