ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ...ಅಂದರೆ ಪ್ರೀತಿಯನ್ನು ವ್ಯಕ್ತಪಡಿಸುವ ಸುದಿನ. ಪ್ರೀತಿ ಎಂಬುದೇ ಸುಂದರ ಅನುಭವ, ಈ ಭಾವನೆಯನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ತಯಾರಿಗಳಿರಬೇಕು. ಅವರನ್ನು ಮೆಚ್ಚಿಸಲು ಸಕಲ ಪ್ರಯತ್ನ ಮಾಡಬೇಕಾಗುತ್ತದೆ. ಅದೆಷ್ಟೋ ಮಂದಿಗೆ ಮನದಲ್ಲಿರುವ ಪ್ರೀತಿಯನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಲಾಗದೇ ಕೊರಗುವವರೇ ಹೆಚ್ಚು. ಹಾಗಾಗಿಯೇ ಪ್ರೇಮಿಗಳ ದಿನ ಎಂಬುದು ಒಂದರ್ಥದಲ್ಲಿ ತಮ್ಮ ಮನದಾಳವನ್ನು ತೆರೆದಿಡಲು ಸಿಗುವಂತಹ ಅವಕಾಶ.
ಹರೆಯ ಉಕ್ಕಿ ಹರಿಯುವಾಗ ಎದುರು ಬಂದೆ ನೀನು..ಸ್ನೇಹ ಮಾಡಿ ಪ್ರೀತಿ ನೀಡಿ ತಿನಿಸಿ ಹೋದೆ ಜೇನು..ನನ್ನ ನಿನ್ನ ಪ್ರೀತಿ ನೋಡಿ ನಾಚಿತಮ್ಮ ಬಾನು..ತಿಳಿಯದಂತೆ ಸೇರಿ ಬಿಟ್ಟೆ ಹೃದಯದೊಳಗೆ ನೀನು..ಹೃದಯ ಒಡೆದ ನೋವಿನಲ್ಲಿ ನರಳುತಿರುವೆ ನಾನು. ಅದೇನು ತಪ್ಪು ಆಯಿತೆಂದು ಬಿಟ್ಟು ಹೋದೆ ನೀನು...ತಿಳಿಯದಂಧ ಕಾರಣವನು ಹುಡುಕುತಿರುವೆ ನಾನು...ನಿನ್ನ ನೆನಪಿನಲ್ಲೆ ಸತ್ತು ಬದುಕುತಿರುವೆ ನಾನು. - ಶೇಖ್(ಸ್ಪಿಯ)ರ್