ವರ್ಷಗಳಿಂದ ಮನಸಲ್ಲಿ ಅದುಮಿಟ್ಟುಕೊಂಡ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಗಳ ದಿನಕ್ಕಾಗಿ ಕಾಯುವವರೇ ಹೆಚ್ಚು. ಇದರ ಆರಂಭ ಎಂಬಂತೆ ಫೆಬ್ರವರಿ 7 ರಿಂದ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಈ ವಾರವನ್ನು ಆಚರಿಸಿಕೊಳ್ಳುವುದು ಇದರ ವಿಶೇಷತೆ. ಪ್ರೇಮಿಗಳ ವಾರದ ಮೊದಲ ದಿನದಿಂದಲೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾ ಫೆ.14 ರ ವೇಳೆಗೆ ತನ್ನ ಸಂಗಾತಿಯ ಮನಗೆಲ್ಲಬಹುದು. ವ್ಯಾಲೆಂಟೈನ್ಸ್ ಡೇ ವೀಕ್ನ ಪ್ರತಿದಿನದಂದು ತನ್ನ ಕನಸಿನ ಹುಡುಗಿ ಅಥವಾ ಹುಡುಗನಿಗೆ ಒಂದೊಂದು ಗಿಫ್ಟ್ಗಳನ್ನು ನೀಡುತ್ತಾ ಮನದಲ್ಲಿರುವ ಭಾವನೆ ವ್ಯಕ್ತಪಡಿಸಬಹುದು. ಈ ವಾರದ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದ್ದು, ಪ್ರೇಮಿಗಳು ವ್ಯಾಲೆಂಟೈನ್ಸ್ ಡೇ ಸಂಭ್ರಮಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.