ತಂದೆಯಾಗಲು ಸರಿಯಾದ ವಯಸ್ಸು ಯಾವುದು? ಸಂಶೋಧನೆ ಏನು ಹೇಳುತ್ತೆ?
30 ವರ್ಷದ ಬಳಿಕ ವೀರ್ಯಾಣು ಗುಣಮಟ್ಟವು ಕಡಿಮೆಯಾಗುತ್ತದೆ. ನಿಧಾನವಾಗಿ ಪುರುಷತ್ವದ ಸಾಮರ್ಥ್ಯ ಕೂಡ ಕುಂಠಿತವಾಗುವುದು. ಇದರಿಂದಾಗಿ ಗರ್ಭಧರಿಸುವ ಸಾಧ್ಯತೆಯಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ.
ಸಾಮಾನ್ಯವಾಗಿ ಮಹಿಳೆರು ಗರ್ಭಧರಿಸಬೇಕಾದ ಸರಿಯಾದ ಸಮಯದ ಬಗ್ಗೆ ವೈದ್ಯರು ಹಲವು ಸಲಹೆಗಳನ್ನು ನೀಡುತ್ತಾರೆ. ಆದರೆ ಗಂಡಸರು ತಂದೆಯಾಗಲು ಉತ್ತಮ ವಯಸ್ಸು ಯಾವುದೆಂಬುದರ ಕುರಿತು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.
2/ 6
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ 40 ವರ್ಷ ದಾಟಿದ ಪುರುಷರಿಂದ ಸಂಗಾತಿ ಗರ್ಭಧರಿಸಿದರೆ ಹುಟ್ಟುವ ಮಕ್ಕಳಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಆದರೆ ಯೌವ್ವನದ ಸಮ್ಮಿಲನದಿಂದ ಶೀಘ್ರ ಮಕ್ಕಳ ಭಾಗ್ಯ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.
3/ 6
ಗಂಡಸರು ತಂದೆಯಾಗಲು ಸರಿಯಾದ ವಯಸ್ಸು 22 ರಿಂದ 25 ವರ್ಷವಾಗಿದ್ದು, ಆದರೆ ಭವಿಷ್ಯದ ಕಾಳಜಿಯಿಂದ 28-30 ವರ್ಷದವರೆಗೆ ಕಾಯುವುದು ಉತ್ತಮ ಎಂದು ಸಂಶೋಧಕರು ತಿಳಿಸಿದ್ದಾರೆ. 30 ವಯಸ್ಸಿನ ಬಳಿಕ ದೇಹ ಸಾಮರ್ಥ್ಯ ಕಡಿಮೆ ಆಗುವುದರಿಂದ ಮಕ್ಕಳಾಗುವ ಸಾಧ್ಯತೆಗಳಲ್ಲಿ ವ್ಯತ್ಯಾಸಗಳಾಗುತ್ತದೆ ಎಂದು ತಿಳಿಸಲಾಗಿದೆ.
4/ 6
30 ವರ್ಷದ ಬಳಿಕ ಪ್ರತಿ ವರ್ಷ ದೇಹದ ಟೆಸ್ಟೋಸ್ಟೇರಾನ್ ಮಟ್ಟವು ಇಳಿಮುಖವಾಗುತ್ತದೆ. ಇದರಿಂದ ಆರೋಗ್ಯದಲ್ಲೂ, ಸಾಮರ್ಥ್ಯದಲ್ಲೂ ಕೆಲ ಬದಲಾವಣೆಗಳು ಕಂಡು ಬರುತ್ತದೆ.
5/ 6
ಹಾಗೆಯೇ 30 ವರ್ಷದ ಬಳಿಕ ವೀರ್ಯಾಣು ಗುಣಮಟ್ಟವು ಕಡಿಮೆಯಾಗುತ್ತದೆ. ನಿಧಾನವಾಗಿ ಪುರುಷತ್ವದ ಸಾಮರ್ಥ್ಯ ಕೂಡ ಕುಂಠಿತವಾಗುವುದು. ಇದರಿಂದಾಗಿ ಸಂಗಾತಿ ಗರ್ಭಧರಿಸುವ ಸಮಯದಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ.
6/ 6
ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗಲು ಮತ್ತೊಂದು ಕಾರಣ ಜೀವನಶೈಲಿಯಾಗಿದೆ. ಜಂಕ್ಫುಡ್, ಧೂಮಪಾನ ಮತ್ತು ಪೋಷಕಾಂಶಗಳ ಕೊರತೆಯಿಂದ ವೀರ್ಯಾಣುಗಳ ಗುಣಮಟ್ಟವು ಇಳಿಕೆಯಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.