Hanuman Jayanti 2022: ನಂಬಿದವರ ಕೈ ಬಿಡಲ್ಲ ಈ ಮಾರುತಿ, ಹನುಮ ಜಯಂತಿಯ ಮಹತ್ವ ಹೀಗಿದೆ ನೋಡಿ
Hanuman Jayanti 2022: ಇಂದು ರಾಜ್ಯದ ವಿವಿಧ ಭಾಗದಲ್ಲಿ ಹನುಮಾನ್ ಜಯಂತಿ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಆಚರಣೆ ಮಾಡಲಾಗುತ್ತದೆ. ಈ ಆಚರಣೆಯ ಹಿಂದಿನ ಮಹತ್ವವೇನು? ಹೇಗೆ ಆಚರಣೆ ಮಾಡಬೇಕು ಎಂಬುದು ಇಲ್ಲಿದೆ.
ಇತ್ತೀಚೆಗಷ್ಟೇ ಹನುಮಾನ ಜಯಂತಿ ಆಚರಣೆಯಾಗಿತ್ತು, ಇದೇನಿದು ಮತ್ತೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊಂದಲ ಉಂಟಾಗುತ್ತದೆ. ಆದರೆ ಅದು ಉತ್ತರ ಭಾರತೀಯ ಹನುಮಾನ್ ಜಯಂತಿ ಆಗಿದ್ದು, ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಆಚರಣೆ ಮಾಡಲಾಗುತ್ತದೆ.
2/ 8
ಹನುಮ ಜಯಂತಿಯ ಮಹತ್ವ: ಹನುಮ ಶ್ರೀರಾಮನ ಅಪ್ರತಿಮ ಭಕ್ತ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹನುಮನಿಗೆ ಭಜರಂಗ ಬಲಿ, ಆಂಜನೇಯ, ಮಾರುತಿ ಹೀಗೆ ವಿವಿಧ ಹೆಸರುಗಳಿದೆ. ಅಲ್ಲದೇ ಧೈರ್ಯಕ್ಕೆ ಮಂತೊಂದು ಹೆಸರೇ ಈ ಹನುಮ.
3/ 8
ಧರ್ಮ ಗ್ರಂಥಗಳ ಪ್ರಕಾರ ಇಂದು ಹನುಮ ಜನಿಸಿದ ದಿನ. ಈ ಹನುಮನನ್ನ ಶಿವನ 11ನೇ ಅವತಾರ ಎಂದು ಸಹ ನಂಬಲಾಗುತ್ತದೆ. ರಾಮನಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಹನುಮ, ದುಷ್ಟ ಶಕ್ತಿಗಳಿಗೆ ದು:ಸ್ವಪ್ನನಾಗಿ ಕಾಡಿದ್ದ ಎನ್ನಬಹುದು.
4/ 8
ಹನುಮ ಜಯಂತಿ ಪೂಜಾ ವಿಧಿ ವಿಧಾನ: ಈ ದಿನ ಹನುಮ ಭಕ್ತರು ನೆಚ್ಚಿನ ದೇವರಿಗೆ ಹೂವು, ವೀಳ್ಯದೆಲೆ ಹಾರಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಅಲ್ಲದೇ ವಿಶೇಷ ದಿನದಂದು ಹನುಮಾನ್ ಚಾಲೀಸವನ್ನು ತಪ್ಪದೇ ಪಠಣೆ ಮಾಡುತ್ತಾರೆ.
5/ 8
ಹನುಮ ಜಯಂತಿ ಪೂಜಾ ವಿಧಿ ವಿಧಾನ: ಅಲ್ಲದೇ ಈ ದಿನ ತುಪ್ಪದಲ್ಲಿ ಅಥವಾ ಸಾಸಿವೆ ಎಣ್ಣೆಯಲ್ಲಿ ದೀಪಗಳನ್ನು ಹಚ್ಚಿ, ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ವಿಶೇಷವಾಗಿ ಹನುಮ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುತ್ತಾರೆ.
6/ 8
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಈ ದಿನ ಹನುಮಾನ್ ಚಾಲೀಸ್ ಜೊತೆಗೆ ಜಾತಕದಲ್ಲಿ ಶನಿ ದೋಷ ಇದ್ದರೆ, ಸುಂದರಕಾಂಡವನ್ನು ಸಹ ಪಠಿಸಬೇಕು ಎಂದು ಹಿರಿಯರು ಹೇಳುತ್ತಾರೆ.
7/ 8
ಹನುಮ ಜಯಂತಿಯಂದು ಮಲ್ಲಿಗೆ ಎಣ್ಣೆ ಹಾಗೂ ತುಪ್ಪದಲ್ಲಿ ಕುಂಕುಮವನ್ನು ಮಿಶ್ರಣ ಮಾಡಿ ಹನುಮನಿಗೆ ಹಚ್ಚಿದರೆ, ನಿಮ್ಮ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಹಾಗೆಯೇ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತಾನೆ ಎನ್ನುತ್ತಾರೆ.
8/ 8
ಹನುಮ ಜಯಂತಿಯಂದು ತಪ್ಪದೇ ಮತ್ತೊಂದು ಕೆಲಸ ಮಾಡಬೇಕು. ಕೇವಲ 11 ಅರಳಿ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ನಂತರ ಅದಕ್ಕೆ ಶ್ರೀಗಂಧ, ಕುಂಕುಮ ಮಿಶ್ರಣ ಮಾಡಿ, ಅದರಲ್ಲಿ ಶ್ರೀ ರಾಮ ಎಂದು ಬರೆದು ಒಣಗಿಸಿ. ಈ ರೀತಿ ಬರೆದ ಎಲೆಗಳ ಮಾಲೆಯನ್ನು ಮಾಡಿ, ಹನುಮನಿಗೆ ಹಾಕಿ.