Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

ಕೂದಲು ಉದುರುವಿಕೆ ಸಮಸ್ಯೆ ತಡೆಗೆ ನೀವು ನೈಸರ್ಗಿಕವಾಗಿ ಹೇರ್ ಪ್ಯಾಕ್ ಮಾಡಿರುತ್ತೀರಿ. ಮನೆಯಲ್ಲಿಯೇ ಹೇರ್ ಪ್ಯಾಕ್ ಮಾಡುವುದು ಅಡ್ಡ ಪರಿಣಾಮ ತಡೆಯುತ್ತದೆ. ನಿಮ್ಮ ಕೂದಲು ಆರೋಗ್ಯಕರ, ಬಲಶಾಲಿ ಮತ್ತು ಸುಂದರವಾಗಿರಲು ತಜ್ಞರು ಹೇಳಿದ ಈ ಸ್ಪ್ರೇ ಸಹಾಯ ಮಾಡುತ್ತದೆ.

First published:

  • 18

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಸತ್ತ ಅಥವಾ ನಿಷ್ಕ್ರಿಯ ಕೂದಲು ಬಾಚಣಿಗೆಯಲ್ಲಿ ಬರುತ್ತವೆ. ಈ ಸ್ಥಿತಿಯನ್ನು ಅಲೋಪೆಸಿಯಾ ಅಥವಾ ಕೂದಲು ಉದುರುವಿಕೆ ಎನ್ನುತ್ತಾರೆ. ವಿವಿಧ ವಯೋಮಾನದ ಪುರುಷರು ಮತ್ತು ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಹ ಕೂದಲು ಉದುರುವಿಕೆ ಸಮಸ್ಯೆ ಮೇಲೆ ಪ್ರಭಾವ ಬೀರುತ್ತದೆ.

    MORE
    GALLERIES

  • 28

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಕೂದಲು ಉದುರುವುದು ನೆತ್ತಿಯನ್ನು ಬೋಳಾಗಿಸುತ್ತದೆ. ಕೂದಲು ಉದುರುವಿಕೆ ಸಮಸ್ಯೆಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಪೌಷ್ಟಿಕಾಂಶದ ಕೊರತೆ, ಹಾರ್ಮೋನು ಅಸಮತೋಲನ, ಥೈರಾಯ್ಡ್ ಸಮಸ್ಯೆ, ಒತ್ತಡ ಮತ್ತು ಇತರ ಹಲವು ಅಂಶಗಳು ಕೂದಲು ಉದುರಲು ಕಾರಣವಾಗಿವೆ.

    MORE
    GALLERIES

  • 38

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರಗಳು ಉತ್ತಮ ಎಂದು ತಜ್ಞರು ಹೇಳ್ತಾರೆ. ಕೂದಲು ಉದುರುವಿಕೆ ತಡೆಗೆ ಸರಿಯಾದ ಕೂದಲ ರಕ್ಷಣೆಯ ದಿನಚರಿ ಫಾಲೋ ಮಾಡುವುದು, ಸಮತೋಲಿತ ಮತ್ತು ಪೌಷ್ಟಿಕಾಂಶದ ಆಹಾರ ಸೇವಿಸುವುದು ಮತ್ತು ಒತ್ತಡ ನಿರ್ವಹಿಸುವುದು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಕಾರಿ.

    MORE
    GALLERIES

  • 48

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಕೂದಲು ಉದುರುವಿಕೆ ಸಮಸ್ಯೆ ತಡೆಗೆ ನೀವು ಹಲವು ಪದಾರ್ಥಗಳಿಂದ ನೈಸರ್ಗಿಕವಾಗಿ ಹೇರ್ ಪ್ಯಾಕ್ ಮಾಡಿರುತ್ತೀರಿ. ಮನೆಯಲ್ಲಿಯೇ ಹೇರ್ ಪ್ಯಾಕ್ ಮಾಡುವುದು ಅಡ್ಡ ಪರಿಣಾಮ ತಡೆಯುತ್ತದೆ. ನಿಮ್ಮ ಕೂದಲು ಆರೋಗ್ಯಕರ, ಬಲಶಾಲಿ ಮತ್ತು ಸುಂದರವಾಗಿರಲು ತಜ್ಞರು ಹೇಳಿದ ಈ ಸ್ಪ್ರೇ ಸಹಾಯ ಮಾಡುತ್ತದೆ.

    MORE
    GALLERIES

  • 58

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಪೌಷ್ಟಿಕ ತಜ್ಞರಾದ ನೇಹಾ ರಂಗ್ಲಾನಿ, ನೈಸರ್ಗಿಕ ಪದಾರ್ಥಗಳಿಂದ ಮಾಡಿದ ಹೇರ್ ಸ್ಪ್ರೇ ಪಾಕವಿಧಾನ ಶೇರ್ ಮಾಡಿದ್ದಾರೆ. ಇದು ಕೂದಲು ಉದುರುವಿಕೆಯ ಸಮಸ್ಯೆ ತಡೆಗೆ ಸಹಾಯ ಮಾಡುತ್ತದೆ. ಇದು ಕೂದಲು ತುದಿ, ನೆತ್ತಿಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ನೆತ್ತಿಯ ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 68

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಹೇರ್ ಸ್ಪ್ರೇ ತಯಾರಿಸಲು ಬೇಕಾದ ಪದಾರ್ಥಗಳು ಹೀಗಿವೆ. 2 ಕಪ್ ನೀರು, 1/4 ನೇ ಕಪ್ ಮೆಂತ್ಯ ಬೀಜಗಳು, 3 ಚಮಚ ಕಲೋಂಜಿ ಬೀಜದ ಪುಡಿ, 10 ಕರಿಬೇವಿನ ಎಲೆಗಳು, ಮಸ್ಲಿನ್ ಬಟ್ಟೆ, 8 ರೋಸ್ಮರಿ ಸಾರಭೂತ ತೈಲ ಮತ್ತು ಸ್ಪ್ರೇ ಬಾಟಲ್ ಬೇಕು.

    MORE
    GALLERIES

  • 78

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಹೇರ್ ಸ್ಪ್ರೇ ತಯಾರಿಸುವ ವಿಧಾನ ಹೀಗಿದೆ. 1/4 ಕಪ್ ಮೆಂತ್ಯ ಬೀಜಗಳು, 3 ಚಮಚ ಕಲೋಂಜಿ ಬೀಜದ ಪುಡಿ, ಮತ್ತು 10 ಕರಿಬೇವಿನ ಎಲೆಗಳನ್ನು 2 ಕಪ್ ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ರೋಸ್ಮರಿ ಸಾರಭೂತ ತೈಲದ 8 ಹನಿ ಹಾಕಿರಿ. ನಂತರ ಮಸ್ಲಿನ್ ಟವೆಲ್ನಿಂದ ಮುಚ್ಚಿ. ಸ್ಪ್ರೇ ಬಾಟಲಿಗೆ ಹಾಕಿ.

    MORE
    GALLERIES

  • 88

    Hair Spray: ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಹೇರ್ ಸ್ಪ್ರೇ ಬಳಸಿ, ಮನೆಯಲ್ಲೇ ಹೀಗೆ ತಯಾರಿಸಿ

    ಇದನ್ನು ನಿಮ್ಮ ನೆತ್ತಿಗೆ ಮತ್ತು ಕೂದಲು ತುದಿಗೆ ಸ್ಪ್ರೇ ಮಾಡಿ, ಹಚ್ಚಿರಿ. ಮೂರು ಗಂಟೆ ಹಾಗೇ ಬಿಡಿ. ನಂತರ ಸೌಮ್ಯವಾದ ಶಾಂಪೂ ಹಾಕಿ ತೊಳೆಯಿರಿ. ಸ್ಪ್ರೇ ತಯಾರಿಸಲು ಬಳಸಿದ ಪದಾರ್ಥಗಳು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ. ನೆತ್ತಿಯ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ.

    MORE
    GALLERIES