ತೆಂಗಿನ ಎಣ್ಣೆ: ಪ್ರತಿಯೊಬ್ಬರ ಮನೆಯಲ್ಲಿ ತೆಂಗಿನ ಎಣ್ಣೆ ಇದ್ದೇ ಇರುತ್ತದೆ. ತೆಂಗಿನೆಣ್ಣೆಯು ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ ಬೆಳವಣಿಗೆ ಹೆಚ್ಚುತ್ತದೆ ಮತ್ತು ಕೂದಲು ಕೂಡ ರೇಷ್ಮೆಯಂತಾಗುತ್ತದೆ. ತೆಂಗಿನೆಣ್ಣೆ ಆರೋಗ್ಯಕ್ಕೆ ಕೂಡ ಒಳ್ಳೆಯದು ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ತೆಂಗಿನೆಣ್ಣೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಈರುಳ್ಳಿ ರಸ: ಈರುಳ್ಳಿ ರಸ ಮತ್ತು ಎಣ್ಣೆಯು ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಿಂದಿನ ಕಾಲದಲ್ಲಿ, ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಹಲವರು ಈರುಳ್ಳಿ ರಸವನ್ನು ಬಳಸುತ್ತಿದ್ದರು. ಆದ್ದರಿಂದ, ಈ ಎಣ್ಣೆಯನ್ನು ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ. ಇದರೊಂದಿಗೆ ನಿತ್ಯವೂ ಈರುಳ್ಳಿ ಎಣ್ಣೆಯನ್ನು ಬಳಸಿದರೆ ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.