Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಉದಾಹರಣೆಗೆ ಎಣ್ಣೆಯುಕ್ತ ಮತ್ತು ಸಿಹಿ ಆಹಾರ ಸೇವಿಸುವುದು. ಸದ್ಯ ನಾವಿಂದು ತೂಕವನ್ನು ಸುಲಭವಾಗಿ ಇಳಿಸುವುದೇಗೆ ಎಂದು ತಿಳಿಸುತ್ತೇವೆ. ತೂಕ ಇಳಿಸಿಕೊಳ್ಳಲು ಈ ಅಭ್ಯಾಸಗಳನ್ನು ತಪ್ಪದೇ ಫಾಲೋ ಮಾಡಿ.

First published:

  • 17

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!
    ನಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರು ತಾವು ಸ್ಲಿಮ್ ಆ್ಯಂಡ್ ಫಿಟ್ ಆಗಿ ಕಾಣಬೇಕೆಂದು ಇಷ್ಟಪಡುತ್ತಾರೆ. ಆದರೆ ಸ್ವಲ್ಪವೆನಾದರೂ ದಪ್ಪ ಆದರೆ ಸಾಕು ಆಕಾಶನೇ ತಲೆ ಮೇಲೆ ಬಿದ್ದಂತೆ ಆಡುತ್ತಾರೆ. ತೂಕವನ್ನು ಕಳೆದುಕೊಳ್ಳಲು ನಾನಾ ವಿಧಾನಗಳಿದೆ. ಇದಕ್ಕಾಗಿ ಕಠಿಣವಾದ ಆಹಾರಕ್ರಮ ಮತ್ತು ಹೆಲ್ದೀ ಲೈಫ್ಸ್ಟೈಲ್ ಫಾಲೋ ಮಾಡಬೇಕಾಗಿರುತ್ತದೆ.

    MORE
    GALLERIES

  • 27

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಉದಾಹರಣೆಗೆ ಎಣ್ಣೆಯುಕ್ತ ಮತ್ತು ಸಿಹಿ ಆಹಾರ ಸೇವಿಸುವುದು. ಸದ್ಯ ನಾವಿಂದು ತೂಕವನ್ನು ಸುಲಭವಾಗಿ ಇಳಿಸುವುದೇಗೆ ಎಂದು ತಿಳಿಸುತ್ತೇವೆ. ತೂಕ ಇಳಿಸಿಕೊಳ್ಳಲು ಈ ಅಭ್ಯಾಸಗಳನ್ನು ತಪ್ಪದೇ ಫಾಲೋ ಮಾಡಿ.

    MORE
    GALLERIES

  • 37

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ಬೆಳಗ್ಗೆ ಬಿಸಿ ನೀರು ಕುಡಿಯಿರಿ: ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದು ತೂಕ ಇಳಿಸಲು ಸುಲಭವಾದ ಮಾರ್ಗವಾಗಿದೆ. ಇಂದಿನಿಂದಲೇ ಈ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಹೊಟ್ಟೆಯು ಸ್ವಚ್ಛವಾಗುತ್ತದೆ ಮತ್ತು ಚಯಾಪಚಯವು ಉತ್ತಮಗೊಳ್ಳುತ್ತದೆ. ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲೂ ಉಲ್ಲೇಖಿಸಲಾಗಿದೆ. ನೀವು ಪ್ರತಿದಿನ 2 ಗ್ಲಾಸ್ ಉಗುರುಬೆಚ್ಚನೆಯ ನೀರನ್ನು ಕುಡಿದರೆ, ನಿಮ್ಮ ದೇಹವು ಯಾವಾಗಲೂ ಶಕ್ತಿಯುತವಾಗಿರುತ್ತದೆ. ನೀವು ಜೇನುತುಪ್ಪದೊಂದಿಗೆ ಬೆರೆಸಿದ ಉಗುರುಬೆಚ್ಚಗಿನ ನೀರನ್ನು ಸಹ ಕುಡಿಯಬಹುದು. ಇದು ತೂಕವನ್ನು ಕಳೆದುಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ.

    MORE
    GALLERIES

  • 47

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ಬೆಳಗ್ಗೆ ಆರೋಗ್ಯಕರ ಆಹಾರ ಸೇವಿಸಿ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ದಿನದ ಮೊದಲ ಬ್ರೇಕ್ ಫಾಸ್ಟ್ನಿಂದಲೇ ನಿಯಮಗಳನ್ನು ಪಾಲಿಸಬೇಕು. ನೀವು ಬೆಳಗಿನ ಉಪಾಹಾರದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು. ವಿಶೇಷವಾಗಿ ಪ್ರೋಟೀನ್ ಮತ್ತು ಫೈಬರ್ ಹೊಂದಿರುವ ಆಹಾರಗಳು. ಈ ಲಿಸ್ಟ್ನಲ್ಲಿ ನೀವು ಮೊಟ್ಟೆ, ಹಾಲು, ಡ್ರೈ ಫ್ರೂಟ್ಸ್, ಹಣ್ಣುಗಳು, ಹಣ್ಣಿನ ಜ್ಯೂಸ್ಗಳು ಅಥವಾ ತರಕಾರಿ ಜ್ಯೂಸ್ಗಳನ್ನು ತೆಗೆದುಕೊಳ್ಳಬಹುದು.

    MORE
    GALLERIES

  • 57

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ವ್ಯಾಯಾಮವನ್ನು ಮಾಡಬೇಕು: ತೂಕವನ್ನು ಇಳಿಸಿಕೊಳ್ಳಲು, ನೀವು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ಇದರಿಂದ ಸೊಂಟ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಜೊತೆಗೆ ತೂಕವನ್ನು ಕಳೆದುಕೊಳ್ಳುವುದು ಸುಲಭವಾಗುತ್ತದೆ. ಹಾಗಾಗಿ ಬೆಳಗ್ಗೆ ಬೇಗನೆ ಎದ್ದು ವಾಕಿಂಗ್, ಜಾಗಿಂಗ್, ಯೋಗ, ಜಿಮ್ನಲ್ಲಿ ಬೆವರಿಳಿಸುವುದು ಬಹಳ ಮುಖ್ಯ. ವ್ಯಾಯಾಮದ ಮೂಲಕ ಚಯಾಪಚಯವನ್ನು ಹೆಚ್ಚಿಸಬಹುದು ಮತ್ತು ರೋಗಗಳನ್ನು ತಪ್ಪಿಸಬಹುದು.

    MORE
    GALLERIES

  • 67

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    ದೇಹದಲ್ಲಿ ನೀರಿನ ಕೊರತೆ ಇರಬಾರದು: ದೇಹದಲ್ಲಿ ನೀರಿನ ಕೊರತೆಯಾದರೆ ಅದು ನಮ್ಮ ಮೆಟಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ. ಮಾನವ ದೇಹದ ಬಹುಪಾಲು ಭಾಗವು ನೀರಿನಿಂದ ಮಾಡಲ್ಪಟ್ಟಿದೆ, ಆದ್ದರಿಂದ ದೇಹವು ಹೈಡ್ರೇಟೆಡ್ ಆಗಿ ಉಳಿಯದಿದ್ದರೆ, ನಂತರ ದೇಹದ ಕಾರ್ಯಚಟುವಟಿಕೆಯಲ್ಲಿ ತೊಂದರೆಗಳು ಉಂಟಾಗುತ್ತವೆ ಮತ್ತು ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ.

    MORE
    GALLERIES

  • 77

    Weight Loss: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಂದೇ ತಿಂಗಳಿನಲ್ಲಿ ಸಣ್ಣ ಆಗ್ತೀರಾ!

    (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES