Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

Patience: ಎಂಥಹಾ ಟೆನ್ಷನ್​ ಇದ್ರೂ ಕೂಡ ಈ ಜನರು ಮಾತ್ರ ಸಖತ್​ ಕೂಲ್​ ಆಗಿ ಇರ್ತಾರಂತೆ. ಯಾಕೆ ಗೊತ್ತಾ?

First published:

  • 111

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    ಎಷ್ಟೋ ಜನರು ಪ್ರತಿಯೊಂದು ಸಣ್ಣ ಪುಟ್ಟ ವಿಷಯಕ್ಕೂ ತುಂಬಾನೇ ಒತ್ತಡ ತೆಗೆದುಕೊಳ್ಳುವುದು, ಭಯ ಪಡುವುದು ಮತ್ತು ಆತಂಕ ಪಡುವುದೆಲ್ಲವನ್ನೂ ಮಾಡುತ್ತಿರುತ್ತಾರೆ.

    MORE
    GALLERIES

  • 211

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    ಆದರೆ ಇನ್ನೂ ಕೆಲವರು ಇರ್ತಾರೆ, ಅವರು ಎಂತಹದೇ ಒತ್ತಡದ ಪರಿಸ್ಥಿತಿಯಲ್ಲೂ ತಮ್ಮ ಶಾಂತತೆಯನ್ನು ಕಳೆದುಕೊಳ್ಳುವುದಿಲ್ಲ ಮತ್ತು ಸ್ವಲ್ಪವೂ ವಿಚಲಿತರಾಗುವುದಿಲ್ಲ. ಇಂತಹ ಕೂಲ್ ಆಗಿರುವ ಜನರನ್ನು ನಾವು ನೋಡಿದಾಗ ‘ಹೇಗಪ್ಪಾ ಇಂತಹ ಒತ್ತಡದ ಸಮಯದಲ್ಲೂ ಇಷ್ಟೊಂದು ಕೂಲ್ ಆಗಿರುತ್ತಾರೆ, ಸ್ವಲ್ಪವೂ ಒತ್ತಡಕ್ಕೆ ಒಳಗಾಗುವುದಿಲ್ಲ’ ಅಂತ ನಮಗೆ ಅನ್ನಿಸಿರುತ್ತದೆ.

    MORE
    GALLERIES

  • 311

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    1. ತಮ್ಮ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡುತ್ತಾರೆ: ಸದಾ ಶಾಂತವಾಗಿರುವ ಜನರು ತಮ್ಮನ್ನು ತಾವು ತುಂಬಾನೇ ಗೌರವಿಸುತ್ತಾರೆ. ಅವರು ಸರಳವಾಗಿ ಮತ್ತು ಸದಾ ಶಾಂತವಾಗಿರಲು ಬಯಸುತ್ತಾರೆ. ಅವರು ಈ ಪ್ರಪಂಚದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವು ಪ್ರೀತಿಸಿಕೊಳ್ಳುತ್ತಾರೆ, ಎಂದರೆ ಸ್ವಾರ್ಥ ಅಥವಾ ಬೇಜವಾಬ್ದಾರಿಯುತ ರೀತಿಯಲ್ಲಿ ಅಲ್ಲ. ಅವರು ಮೊದಲು ತಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ.

    MORE
    GALLERIES

  • 411

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    2. ಒತ್ತಡದ ಸಂದರ್ಭದಲ್ಲಿ ಅವರು ಒಂಟಿಯಾಗಿಲ್ಲ ಅಂತ ನೆನಪಿಸಿಕೊಳ್ಳುತ್ತಾರೆ: ಈ ಒತ್ತಡಕ್ಕೆ ಜಾಸ್ತಿ ಒಳಗಾಗುವ ಜನರು ಇಡೀ ಪ್ರಪಂಚದ ಜಾವಾಬ್ದಾರಿ ತಮ್ಮ ಮೇಲಿದೆ ಅಂತ ಅಂದುಕೊಳ್ಳುವವರು. ಈ ಕೂಲ್ ಆಗಿರುವ ಜನರು ಒತ್ತಡದ ಸಂದರ್ಭದಲ್ಲಿ ತಾವು ಒಂಟಿಯಲ್ಲ, ಅವರ ಜೊತೆಯಲ್ಲಿ ಅವರ ಸ್ನೇಹಿತರು ಮತ್ತು ಆಪ್ತರು ಇರುತ್ತಾರೆ ಅಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಸಹಜವಾಗಿಯೇ ಒತ್ತಡದ ಸಂದರ್ಭ ಎದುರಾದಾಗ ತುಂಬಾನೇ ಏಕಾಂಗಿಯಾಗಿರುವುದು ಇನ್ನಷ್ಟು ಒತ್ತಡಕ್ಕೆ ನಿಮ್ಮನ್ನು ದೂಡುತ್ತದೆ.

    MORE
    GALLERIES

  • 511

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    3. ಅವರು ಯಾವುದನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ: ನಮ್ಮ ಸುತ್ತಲೂ ಏನಾಗುತ್ತಿದೆ ಎಂಬುದು ಗೊತ್ತಿದ್ದರೂ ಸಹ ಎಷ್ಟೋ ಬಾರಿ ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದರೆ ಆ ಸಂದರ್ಭಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮಾತ್ರ ನಮ್ಮ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಶಾಂತವಾಗಿರುವ ಜನರು ಒತ್ತಡದ ಸಂದರ್ಭಗಳಲ್ಲಿ ಈ ಬುದ್ಧಿವಂತಿಕೆಯ ಮಾತನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಾರೆ ಮತ್ತು ಇದನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ.

    MORE
    GALLERIES

  • 611

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    4. ‘ಇದು ತುಂಬಾ ಮುಖ್ಯವಾದದ್ದೇ’ ಅಂತ ಅವರು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ: ಸದಾ ಶಾಂತವಾಗಿರಲು ಬಯಸುವ ಜನರು ಸಣ್ಣ ವಿಷಯಗಳಿಗೆ ಬೆವರುವುದಿಲ್ಲ, ಎಂದರೆ ವಿಷಯ ಕೇಳಿದ ತಕ್ಷಣ ಭಯ ಅಥವಾ ಆತಂಕ ಪಡುವುದಿಲ್ಲ. ಎಂತಹದೇ ವಿಷಯವಾದರೂ, ಸ್ವಲ್ಪ ಸಮಯ ತೆಗೆದುಕೊಂಡು ಅದರ ಬಗ್ಗೆ ಯೋಚಿಸಿ ನೋಡಿದರೆ, ಅದು ತುಂಬಾನೇ ಸಣ್ಣ ವಿಷಯ ಅಂತ ನಮಗೆ ಅರ್ಥವಾಗುತ್ತದೆ.

    MORE
    GALLERIES

  • 711

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    5. ಯಾವುದರ ಬಗ್ಗೆಯೂ ಅತಿಯಾಗಿ ಯೋಚನೆ ಮಾಡುವುದಿಲ್ಲ: ಶಾಂತ ಜನರು ಒಂದು ಚಿಕ್ಕ ಇರುವೆ ಹೋಯ್ತು ಎಂದರೆ ಅಲ್ಲಿ ಇರುವೆ ಹೋಗಿದೆ ಅಂತಾನೆ ಹೇಳುತ್ತಾರೆ. ಆದರೆ ಇನ್ನೂ ಕೆಲವರು ಎಂದರೆ ಒತ್ತಡದಲ್ಲಿ ಇರುವವರು ಇರುವೆ ಹೋದರೆ, ಆನೆ ಹೋದ ರೀತಿಯಲ್ಲಿ ಭಯ ಪಡ್ತಾರೆ. ಅವರು ಡಾಕ್ಟರ್ ಬಳಿಗೆ ಹೋದಾಗ ಅವರ ಬಾಯಲ್ಲಿ ಒಂದು ಸಣ್ಣ ಗಡ್ಡೆ ತರಹ ಆಗಿದೆ ಅಂತ ಹೇಳಿದರೆ, ಅವರ ಗಮನ ಆ ಗಡ್ಡೆಯ ಮೇಲೆಯೇ ಇರುತ್ತದೆ.

    MORE
    GALLERIES

  • 811

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    6. ಎಲ್ಲವೂ ತಾತ್ಕಾಲಿಕ ಅಂತ ತಮಗೆ ತಾವೇ ಹೇಳಿಕೊಳ್ಳುತ್ತಾರೆ: ಶಾಂತವಾಗಿರುವ ಜನರು ಸಾಮಾನ್ಯವಾಗಿ ಎಲ್ಲವೂ ತಾತ್ಕಾಲಿಕ ಎಂದು ತಮಗೆ ತಾವೇ ಅನೇಕ ಬಾರಿ ಒತ್ತಡದ ಸಂದರ್ಭಗಳಲ್ಲಿ ನೆನಪಿಸಿಕೊಳ್ಳುತ್ತಾರೆ. ನೀವು ನೋಡಿ, ಭೂಮಿಯ ಮೇಲಿನ ನಿಮ್ಮ ಸಮಯವು ಸೀಮಿತವಾಗಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರುವಾಗ, ನೀವು ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಚಿಂತಿಸುವ ಅವಶ್ಯಕತೆ ಇಲ್ಲ.

    MORE
    GALLERIES

  • 911

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    7. ಅವರು ಸ್ವಯಂ ಪರಿಹಾರ ಹುಡುಕಲು ಬಯಸುತ್ತಾರೆ: ಶಾಂತವಾಗಿರುವ ಎಲ್ಲಾ ಜನರು ತಮ್ಮ ಹುಟ್ಟಿನಿಂದಲೇ ಶಾಂತವಾಗಿರಲಿಕ್ಕೆ ಸಾಧ್ಯವಿಲ್ಲ. ಕೆಲವರು ತಾವು ಚಿಕ್ಕವರಿದ್ದಾಗ ತುಂಬಾ ಆತಂಕಕ್ಕೊಳಗಾಗಿರಬಹುದು ಆದರೆ ಅವರು ತಮ್ಮನ್ನು ಶಾಂತಗೊಳಿಸಲು ನಿಭಾಯಿಸುವ ತಂತ್ರಗಳನ್ನು ಜೀವನದಲ್ಲಿ ಹಂತ ಹಂತವಾಗಿ ಕಲಿತುಕೊಂಡಿರಬಹುದು. ಶಾಂತ ಜನರು ತಮ್ಮನ್ನು ಶಾಂತಗೊಳಿಸುವ ಕೆಲಸಗಳನ್ನು ಮಾಡುವ ಮೂಲಕ ತಮ್ಮನ್ನು ತಾವು ನಿರಂತರವಾಗಿ ಶಮನಗೊಳಿಸಿಕೊಳ್ಳುತ್ತಾರೆ, ವಿಶೇಷವಾಗಿ ಒತ್ತಡದ ಸಂದರ್ಭಗಳಲ್ಲಿ.

    MORE
    GALLERIES

  • 1011

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    8. ತಾವು ಮಾಡುವ ಕೆಲಸಕ್ಕಿಂತ ಅವರೇ ಹೆಚ್ಚಿನವರು ಅಂತ ತಮಗೆ ತಾವೇ ಹೇಳಿಕೊಳ್ಳುತ್ತಾರೆ: ನಾವು ಮಾಡುವ ಕೆಲಸದ ಮೇಲೆ ನಮ್ಮ ಮೌಲ್ಯವನ್ನು ಹಾಕಿದಾಗ, ಅದು ತುಂಬಾನೇ ಕಡಿಮೆ ಅಂತ ಅನ್ನಿಸುತ್ತದೆ. ನಾವು ಸಾಕಷ್ಟು ಒಳ್ಳೆಯವರಾಗಿದ್ದೇವೆಯೇ ಎಂದು ನಾವು ನಿರಂತರವಾಗಿ ಚಿಂತೆ ಮಾಡುತ್ತೇವೆ ಮತ್ತು ನಾವು ಇತರರ ಅನುಮೋದನೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ.

    MORE
    GALLERIES

  • 1111

    Cool People: ತಲೆ ಮೇಲೆ ತಲೆ ಬೀಳಲಿ, ಇವ್ರು ಮಾತ್ರ ಕೂಲ್​ ಆಗಿರ್ತಾರೆ! ಯಾಕೆ ಹೀಗೆ?

    10. ಇವರು ಒಂದರ ಮೇಲೆ ಅವಲಂಬಿತರಾಗಿರುವುದಿಲ್ಲ: ನಾವು ಕೇವಲ ಒಂದು ವಿಷಯದ ಮೇಲೆ ಅವಲಂಬಿತವಾಗಿದ್ದರೆ, ಅದು ನಮ್ಮ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ನಾವು ಅವಲಂಬಿಸಿರುವ ಜನರಿಗೆ ನಾವು ಗುಲಾಮರಾಗುತ್ತೇವೆ. ಆದ್ದರಿಂದ ಉದಾಹರಣೆಗೆ, ನಾವು ಕೇವಲ ಒಂದು ಆದಾಯದ ಮೂಲವನ್ನು ಹೊಂದಿದ್ದರೆ, ನಾವು ಯಾವುದೋ ಕಾರಣಕ್ಕೆ ಕೆಲಸ ಕಳೆದುಕೊಂಡಾಗ ಸಹಜವಾಗಿಯೇ ನಾವು ಭಯಭೀತರಾಗುತ್ತೇವೆ. ಹಾಗೆಯೇ ನಮಗೆ ಕೇವಲ ಒಬ್ಬ ಒಳ್ಳೆಯ ಸ್ನೇಹಿತನಿದ್ದು, ಆತ ನಮ್ಮಿಂದ ಸ್ವಲ್ಪ ದೂರ ಹೋಗಲು ಪ್ರಾರಂಭಿಸಿದಾಗ ಸಹ ನಾವು ಭಯಭೀತರಾಗುತ್ತೇವೆ.

    MORE
    GALLERIES