Life Hacks: ಮದುವೆಯ ನಂತರ ಹುಡುಗಿಯರು ಮಿಸ್ ಮಾಡದೇ ಈ ಕೆಲಸ ಮಾಡ್ಬೇಕು
After Marriage Things: ಮಹಿಳೆಯರಿಗೆ ಮದುವೆಯ ಅರ್ಥವೇ ಬೇರೆ. ಮದುವೆಯ ನಂತರ, ಹುಡುಗಿ ಹೊಸ ಜೀವನ ಮತ್ತು ಹೊಸ ಮನೆಗೆ ಪ್ರವೇಶಿಸುತ್ತಾಳೆ. ಆದರೆ ಮದುವೆಯ ನಂತರ ಮಹಿಳೆಯರು ನಮಗಾಗಿ ಕೆಲ ವಿಚಾರಗಳನ್ನು ಮಿಸ್ ಮಾಡದೇ ಫಾಲೋ ಮಾಡಬೇಕು. ಆ ವಿಚಾರಗಳು ಯಾವುವು ಎಂಬುದು ಇಲ್ಲಿದೆ.
ಮಹಿಳೆಯರೂ ಅಪ್ಪಿ-ತಪ್ಪಿ ಮದುವೆಯ ನಂತರ ಕೆಲಸ ಬಿಡಬಾರದು. ಇದು ಆರ್ಥಿಕವಾಗಿ ನಿಮ್ಮನ್ನ ಸದೃಢವಾಗಿಡಲು ಇದು ಬಹಳ ಅವಶ್ಯಕ ಎಂಬುದು ನೆನಪಿರಲಿ. ಇದು ನಿಮಗೆ ವಿವಿಧ ರೀತಿಯಲ್ಲಿ ಸಹ ಸಹಾಯ ಮಾಡುತ್ತದೆ ಎಂಬುದು ಮುಖ್ಯ.
2/ 8
ಮದುವೆಯ ನಂತರ ಹೊಸ ಮನೆಗೆ ಹೋಗುವುದರಿಂದ, ಜನ ಕೂಡ ಹೊಸಬರೇ ಆಗಿರುತ್ತಾರೆ. ಅವರ ಜೊತೆ ಕೆಲ ಸಮಯ ಕಳೆಯುವುದು, ನಿಮ್ಮ ಹೊಸ ಕುಟುಂಬದವರನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಮತ್ತು ಅವರ ಸಂಬಂಧ ಗಟ್ಟಿಯಾಗುತ್ತದೆ.
3/ 8
ಮದುವೆಯ ರಿಜಿಸ್ಟ್ರೇಷನ್ ಮಾಡುವುದು ಎಲ್ಲದಕ್ಕಿಂತ ಬಹಳ ಮುಖ್ಯ ಎಂಬುದನ್ನ ಮರೆಯಬೇಡಿ. ಇದು ಕಾನೂನಾತ್ಮಕವಾಗಿ ಹಾಗೂ ವಿವಿಧ ರೀತಿಯಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಮುಖ್ಯವಾಗುತ್ತದೆ.
4/ 8
ಮದುವೆಯ ನಂತರ ಸಾಮಾನ್ಯವಾಗಿ ಮಹಿಳೆಯರು ತಮ್ಮ ಸ್ನೇಹಿತರಿಂದ ದೂರವಾಗುತ್ತಾರೆ. ಆದರೆ ಇದು ತಪ್ಪು. ಎಂದಿಗೂ ಈ ಕೆಲಸ ಮಾಡಬೇಡಿ. ಆಗಾಗ ಅವರ ಜೊತೆ ಸಂಪರ್ಕದಲ್ಲಿರುವುದು ಬಹಳ ಒಳ್ಳೆಯದು. ಇದು ನಿಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳಲು ಒಂದು ಹೆಗಲು ಸಿಗುತ್ತದೆ.
5/ 8
ಹಾಗೆಯೇ ಮದುವೆಯಾದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಇದರಿಂದ ಪೋಷಕರ ಜೊತೆ ಮಾತನಾಡಲು ಪ್ರತಿದಿನ ಸಮಯ ಸಿಗುವುದಿಲ್ಲ. ಈ ತಪ್ಪು ಮಾಡಬಾರದು. ಅನಿವಾರ್ಯ ಇದ್ದಾಗ ಮಾತ್ರ ಫೋನ್ ಮಾಡದಿರುವುದು ಒಪ್ಪಬಹುದು, ಆದರೆ ಸಾಧ್ಯವಾದಷ್ಟು ನೀವು ನಿಮ್ಮ ಪೋಷಕರ ಜೊತೆ ಪ್ರತಿದಿನ ಸಂಪರ್ಕದಲ್ಲಿರಿ.
6/ 8
ಹುಡುಗಿಯರು ಮದುವೆಯಾದ ನಂತರ ಮಾಡುವ ಮೊದಲ ತಪ್ಪು ಎಂದರೆ ಮನೆಯ ಕೆಲಸವನ್ನು ವಹಿಸಿಕೊಳ್ಳುವುದು. ಇದು ಸುಲಭದ ಮಾತಲ್ಲ. ಮನೆಯ ಕೆಲಸ ಹಾಗೂ ಆಫೀಸ್ ಒಟ್ಟಿಗೆ ನಿಭಾಯಿಸುವುದು ಮದುವೆಯಾದ ಆರಂಭದಲ್ಲಿ ಕಷ್ಟವಾಗುತ್ತದೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ.
7/ 8
ನಿಮ್ಮ ಪಾಲಿಸಿ ಹಾಗೂ ಆರ್ಥಿಕ ವ್ಯವಹಾರದಲ್ಲಿ ಕೆಲ ಬದಲಾವಣೆಗಳು ಉಂಟಾಗುತ್ತದೆ. ಈ ಬಗ್ಗೆ ಆಫೀಸ್ನಲ್ಲಿ ಚರ್ಚಿಸಿ, ಪಾಲಿಸಿ ಬದಲಾವಣೆ ಮಾಡಬೇಕಾಗುತ್ತದೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ.
8/ 8
ಸಾಮಾನ್ಯವಾಗಿ ಮದುವೆಯ ಮೊದಲು ಸಹ ಜೋಡಿ ಆರ್ಥಿಕ ವ್ಯವಸ್ಥೆಯ ಬಗ್ಗೆ ಚರ್ಚೆ ಮಾಡಿರಬೇಕು. ಹಾಗೆಯೇ ಮದುವೆಯ ನಂತರ ಕೂಡ ಒಂದು ಬಜೆಟ್ ಹಾಕಿಕೊಳ್ಳುವುದು ನಿಮಗೆ ಸಹಾಯ ಮಾಡುತ್ತದೆ. ಇದು ಆರ್ಥಿಕ ಹೊರೆಯನ್ನು ತಪ್ಪಿಸಬಹುದು.