ಆಹಾರ ಪ್ರಿಯರು ತುಪ್ಪವನ್ನು ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೆಷ್ಟೋ ಮಂದಿ ಬಿಸಿ ಅನ್ನಕ್ಕೆ ತುಪ್ಪ ಹಾಕದಿದ್ದರೆ ಮುಟ್ಟುವುದಕ್ಕೂ ಇಷ್ಟಪಡುವುದಿಲ್ಲ. ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೇ ಹಲವಾರು ಪ್ರಯೋಜನಗಳು ತುಪ್ಪದಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಭಾರತದಲ್ಲಿ ತುಪ್ಪ ತಿನ್ನುವ ಪದ್ಧತಿ ಯುಗ ಯುಗಗಳಿಂದಲೂ ನಡೆದುಕೊಂಡು ಬಂದಿದೆ. ತುಪ್ಪದ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.(ಸಾಂಕೇತಿಕ ಚಿತ್ರ)
ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ: ತುಪ್ಪದಲ್ಲಿರುವ ವಸ್ತುಗಳು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜೀವಕೋಶಗಳು ಮತ್ತು ಅಂಗಾಂಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ತುಪ್ಪವನ್ನು ತಿನ್ನುವುದು ಜೀವಕೋಶಗಳ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ, ಇದು ನಮ್ಮ ದೇಹದ ಗುಣಪಡಿಸುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.(ಸಾಂಕೇತಿಕ ಚಿತ್ರ)