ಬಿರುಸಾದ ನಡಿಗೆಯು ದೇಹದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೇ, ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ತೆಳುವಾದ ದೇಹ ಸೌಂದರ್ಯವನ್ನು ಪಡೆಯಬೇಕು ಎನ್ನುವವರು ಪ್ರತಿನಿತ್ಯ ಬಿರುಸಾದ ವಾಕಿಂಗ್ ಮಾಡುವುದು ಅತಿ ಮುಖ್ಯ. ಹಾಗೆಯೇ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದನ್ನು ಮರೆಯಬೇಡಿ. ಏಕೆಂದರೆ ದೇಹ ದಂಡನೆ ಮತ್ತು ಆಹಾರ ಇವೆರಡೂ ಒಂದೇ ರೀತಿಯ ಫಲಿತಾಂಶವನ್ನು ನೀಡುತ್ತವೆ.