ಸ್ಥಳವನ್ನು ಆಯ್ಕೆ ಮಾಡಿ: ಮದುವೆಯನ್ನು ಮಾಡಲು ಉತ್ತಮ ಸ್ಥಳವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ರಾತ್ರಿ ವೇಳೆ ನಡೆಯುವ ಮದುವೆಗಳಲ್ಲಿ ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಅತಿಥಿಗಳಿಗೆ ಚಳಿಯಾಗಬಹುದು ಹೀಗಾಗಿ ಅಂತಹ ಪರಿಸ್ಥಿತಿಯಲ್ಲಿ ಮದುವೆಗೆ ಹೊರಾಂಗಣ ಸ್ಥಳವನ್ನು ಆಯ್ಕೆ ಮಾಡಬೇಡಿ. ಇದರಿಂದಾಗಿ ಮದುವೆಗೆ ಬರುವ ಎಲ್ಲಾ ಅತಿಥಿಗಳು ಆರಾಮದಾಯಕವಾಗಿರುತ್ತಾರೆ ಮತ್ತು ಮದುವೆಯಲ್ಲಿ ಖುಷಿಯಾಗಿರುತ್ತಾರೆ.
ಅಲಂಕಾರದತ್ತ ಗಮನಹರಿಸಿ: ಮದುವೆಯನ್ನು ಸ್ಮರಣೀಯವಾಗಿಸಲು, ಅದ್ಭುತವಾಗಿ ಅಲಂಕಾರ ಮಾಡುವುದು ಸಹ ಅಗತ್ಯವಾಗಿದೆ. ಹಾಗಾಗಿ ಮದುವೆಗೆ ಶಾಪಿಂಗ್ ಮಾಡುವಾಗ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮರೆಯಬೇಡಿ. ಅಲ್ಲದೇ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಬಜೆಟ್ ಅನ್ನು ನಿರ್ಧರಿಸಿ. ಜೊತೆಗೆ ಚೌಕಾಶಿ ಮಾಡುವ ಮೂಲಕ ನೀವು ಕಡಿಮೆ ಹಣದಲ್ಲಿ ಅತ್ಯುತ್ತಮವಾದ ಅಲಂಕಾರಿಕ ವಸ್ತುಗಳನ್ನು ಕೊಳ್ಳಬಹುದು.
ಸ್ವಾಗತ ಅತಿಥಿಗಳು: ಚಳಿಗಾಲದಲ್ಲಿ ಮದುವೆ ಮಾಡುತ್ತಿದ್ದರೆ, ಈ ವೇಳೆ ರೈಲುಗಳು ಮತ್ತು ವಿಮಾನದಿಂದ ಬರುವ ಅತಿಥಿಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ , ನೀವು ಅತಿಥಿಗಳಿಗಾಗಿ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಬೇಕು. ಇದರಿಂದ ಸರಿಯಾದ ಸಮಯಕ್ಕೆ ಅತಿಥಿಗಳನ್ನು ಸ್ವಾಗತಿಸಬಹುದು ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಲು ಕೂಡ ಸುಲಭವಾಗಿರುತ್ತದೆ. ಇದರಿಂದ ಅತಿಥಿಗಳಿಗೆ ನಿಮ್ಮ ಮೇಲೆ ವಿಶೇಷ ಭಾವನೆ ಮೂಡಿಸಬಹುದು.