ತ್ವಚೆಯ ಮೇಲೆ ತಕ್ಷಣದ ಹೊಳಪಿಗಾಗಿ: 1/2 ಕಪ್ ಮಾರಿಗೋಲ್ಡ್ ದಳಗಳು, 5 ಚಮಚ ರೋಸ್ ವಾಟರ್, 1/4 ಕಪ್ ಸಿಪ್ಪೆ ತೆಗೆದ ಸೇಬಿನ ತುಂಡುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಮುಖವನ್ನು ತೊಳೆಯಿರಿ.ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸುವುದರಿಂದ ನಿಮ್ಮ ಮುಖ ಕಾಂತಿಯತೆಯಿಂದ ಕೂಡಿರುತ್ತದೆ.
ಎಣ್ಣೆಯುಕ್ತ ಚರ್ಮ: 1 ಚಮಚ ಚೆಂಡು ಹೂವಿನ ಪೇಸ್ಟ್, 1 ಚಮಚ ಮೊಸರು, 1/2 ಚಮಚ ನಿಂಬೆ ರಸ, 1 ಚಮಚ ರೋಸ್ ವಾಟರ್ ಮಿಶ್ರಣ ಮಾಡಿ ನಯವಾದ ಪೇಸ್ಟ್ ಮಾಡಿ, ತಯಾರಿಸಿದ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಅನ್ವಯಿಸಿ. ಪ್ಯಾಕ್ ಸಂಪೂರ್ಣವಾಗಿ ಒಣಗಲು ಬಿಡಿ. ಫೇಸ್ ಪ್ಯಾಕ್ ಒಣಗಿದ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ ಎಣ್ಣೆಯುಕ್ತ ಚರ್ಮ ನಿವಾರಣೆ ಆಗುತ್ತದೆ.
ಸಾಮಾನ್ಯ ತ್ವಚೆಗೆ: 1 ಚಮಚ ಚೆಂಡು ಹೂವಿನ ಪೇಸ್ಟ್, 1 ಚಮಚ ಬೇಳೆ ಹಿಟ್ಟು, 1 ಚಮಚ ಹಸಿ ಹಾಲು ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪ್ಯಾಕ್ ಮಾಡಿ. ಈ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಸಮವಾಗಿ ಅನ್ವಯಿಸಿ. ಇದು ಸಂಪೂರ್ಣವಾಗಿ ಒಣಗಲು ಬಿಡಿ. ಪ್ಯಾಕ್ ಒಣಗಿದ ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಮೂರು ಬಾರಿ ಅನ್ವಯಿಸುವುದರಿಂದ ನಿಮ್ಮ ತ್ವಚೆ ಬೇಗ ಹೊಳೆಯುತ್ತದೆ.