Garlic Side Effects: ಬೆಳ್ಳುಳ್ಳಿ ಎಲ್ಲರಿಗೂ ಸುರಕ್ಷಿತವಲ್ಲ, ಈ ಸಮಸ್ಯೆಗಳಿದ್ದವರು ಸೇವಿಸಬಾರದು
Health Care : ಬಹುತೇಕ ಭಾರತೀಯ ಅಡುಗೆಗಳನ್ನು ಬೆಳ್ಳುಳ್ಳಿ ಬಳಸದೆ ಮಾಡಲು ಸಾಧ್ಯವೇ ಇಲ್ಲ. ಬೆಳ್ಳುಳ್ಳಿಯನ್ನು ಪ್ರಾಚೀನ ಕಾಲದಲ್ಲಿ ಔಷಧಿಯಾಗಿ ಬಳಸುತ್ತಿದ್ದರಂತೆ. ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಬೆಳ್ಳುಳ್ಳಿಯನ್ನು ಕೆಲವರು ಸೇವಿಸುವುದು ಒಳ್ಳೆಯದಲ್ಲ.
ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ವಿಟಮಿನ್ ಬಿ 1 ನಂತಹ ಪೋಷಕಾಂಶಗಳು ಇವೆ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಆ ಬಗ್ಗೆ ಮಾಹಿತಿ ಇಲ್ಲಿದೆ.
2/ 7
ಅತಿಯಾದರೆ ಬೆಳ್ಳುಳ್ಳಿಯೂ ವಿಷವೇ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಲೋ ಬಿಪಿ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಈ ಸಮಸ್ಯೆ ಇರುವವರು ಬೆಳ್ಳುಳ್ಳಿಯಿಂದ ದೂರವಿರಬೇಕು ಎನ್ನುತ್ತಾರೆ ವೈದ್ಯರು.
3/ 7
ಬೆಳ್ಳುಳ್ಳಿ ಗಾಢವಾದ ವಾಸನೆಯನ್ನು ಹೊಂದಿದೆ. ಚಟ್ನಿಗಳಲ್ಲಿ ಹಸಿ ಬೆಳ್ಳುಳ್ಳಿಯನ್ನೇ ಬಳಸಲಾಗುತ್ತದೆ. ಬೆಳಗಿನ ಆಹಾರದಲ್ಲಿ ಹಸಿ ಬೆಳ್ಳುಳ್ಳಿ ಇದ್ದರೆ, ನಿಮ್ಮ ಬಾಯಿಯಿಂದ ವಾಸನೆ ಬರಲು ಶುರುವಾಗತ್ತೆ. ಬೆವರು ವಾಸನೆ ಸಮಸ್ಯೆ ಇರುವವರು ಕೂಡ ಬೆಳ್ಳುಳ್ಳಿಯಿಂದ ದೂರ ಇರಬೇಕು.
4/ 7
ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಎದೆಯುರಿ ಉಂಟಾಗುತ್ತದೆ. ಈಗಾಗಲೇ ಅಸಿಡಿಟಿ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.
5/ 7
ಜೀರ್ಣಶಕ್ತಿ ಕಡಿಮೆ ಇರುವವರು ಕೂಡ ಬೆಳ್ಳುಳ್ಳಿಯಿಂದ ದೂರ ಇರಬೇಕು. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇವಿಸಿದರೆ ಅದು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
6/ 7
ಬ್ಲಡ್ ಪ್ಯೂರಿಫಿಕೇಷನ್ ಗಾಗಿ ನೀವು ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಬೆಳ್ಳುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗಳು ಇನ್ನಷ್ಟು ಹದಗೆಡಬಹುದು.
7/ 7
(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಇದು ಸಂಪೂರ್ಣವಾಗಿ ನಿಜವಾಗಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. )