Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

ಭಾರತೀಯರ ಬಹುತೇಕ ಅಡುಗೆಗಳು ಬೆಳ್ಳುಳ್ಳಿ ಇಲ್ಲದೆ ಅಪೂರ್ಣ ಅಂತಲೇ ಹೇಳಬಹುದು. ಬೆಳ್ಳುಳ್ಳಿ ಪ್ರತಿಯೊಂದು ಮನೆಯ ಕಾಯಂ ಸದಸ್ಯ ಎನ್ನಬಹುದು. ಅನೇಕ ಔಷಧಿಯ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿ ಎಲ್ಲಾ ಸಮಯದಲ್ಲೂ ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ.

First published:

  • 17

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ವಿಟಮಿನ್ ಬಿ 1 ನಂತಹ ಪೋಷಕಾಂಶಗಳು ಇವೆ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಆ ಬಗ್ಗೆ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಬೆಳ್ಳುಳ್ಳಿಯನ್ನು ಅನೇಕ ರೀತಿಯ ಫಾಸ್ಟ್ ಫುಡ್ ಗಳಲ್ಲಿ ಬಳಸಲಾಗುತ್ತದೆ. ಆದರೆ ಕೆಲವರು ಬೆಳ್ಳುಳ್ಳಿಯಿಂದ ದೂರವಿರುವುದು ಉತ್ತಮ.

    MORE
    GALLERIES

  • 37

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಅತಿಯಾದರೆ ಬೆಳ್ಳುಳ್ಳಿಯೂ ವಿಷವೇ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಲೋ ಬಿಪಿ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಈ ಸಮಸ್ಯೆ ಇರುವವರು ಬೆಳ್ಳುಳ್ಳಿಯಿಂದ ದೂರವಿರಬೇಕು ಎನ್ನುತ್ತಾರೆ ವೈದ್ಯರು.

    MORE
    GALLERIES

  • 47

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಬೆಳ್ಳುಳ್ಳಿ ಗಾಢವಾದ ವಾಸನೆಯನ್ನು ಹೊಂದಿದೆ. ಚಟ್ನಿಗಳಲ್ಲಿ ಹಸಿ ಬೆಳ್ಳುಳ್ಳಿಯನ್ನೇ ಬಳಸಲಾಗುತ್ತದೆ. ಬೆಳಗಿನ ಆಹಾರದಲ್ಲಿ ಹಸಿ ಬೆಳ್ಳುಳ್ಳಿ ಇದ್ದರೆ, ನಿಮ್ಮ ಬಾಯಿಯಿಂದ ವಾಸನೆ ಬರಲು ಶುರುವಾಗತ್ತೆ. ಬೆವರು ವಾಸನೆ ಸಮಸ್ಯೆ ಇರುವವರು ಕೂಡ ಬೆಳ್ಳುಳ್ಳಿಯಿಂದ ದೂರ ಇರಬೇಕು.

    MORE
    GALLERIES

  • 57

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಎದೆಯುರಿ ಉಂಟಾಗುತ್ತದೆ. ಈಗಾಗಲೇ ಅಸಿಡಿಟಿ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು.

    MORE
    GALLERIES

  • 67

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಜೀರ್ಣಶಕ್ತಿ ಕಡಿಮೆ ಇರುವವರು ಕೂಡ ಬೆಳ್ಳುಳ್ಳಿಯಿಂದ ದೂರ ಇರಬೇಕು. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇವಿಸಿದರೆ ಅದು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.

    MORE
    GALLERIES

  • 77

    Garlic: ಈ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ತಿನ್ನಲೇಬಾರದು

    ಬ್ಲಡ್ ಪ್ಯೂರಿಫಿಕೇಷನ್ ಗಾಗಿ ನೀವು ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಬೆಳ್ಳುಳ್ಳಿಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗಳು ಇನ್ನಷ್ಟು ಹದಗೆಡಬಹುದು.

    MORE
    GALLERIES