Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

ಇಂದಿನ ಜೀವನಶೈಲಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಸಾಕಷ್ಟು ಹೆಚ್ಚಿವೆ. ಅದರಲ್ಲಿ ಪಿತ್ತಕೋಶ ಕಲ್ಲಿನ ಸಮಸ್ಯೆ ಕೂಡ ಒಂದಾಗಿದೆ. ತುಂಬಾ ಜನರು ಕಿಡ್ನಿ ಮತ್ತು ಪಿತ್ತಕೋಶ ಕಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಿತ್ತಕೋಶ ಕಲ್ಲಿನ ಸರ್ಜರಿ ನಂತರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಯೋಣ.

First published:

  • 18

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಇಂದಿನ ದಿನಗಳಲ್ಲಿ ಅಶುಚಿಯಾದ ಆಹಾರ ಸೇವನೆ ಮತ್ತು ಕಡಿಮೆ ನೀರು ಸೇವನೆಯು ಪಿತ್ತಕೋಶದಲ್ಲಿ ಮತ್ತು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಉಂಟು ಮಾಡುತ್ತದೆ. ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆಯಾದಾಗ ಅದು ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವನ್ನು ಉಂಟು ಮಾಡುತ್ತವೆ.

    MORE
    GALLERIES

  • 28

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಪಿತ್ತಕೋಶದಲ್ಲಿ ಕಲ್ಲು ಆದಾಗ ಆ ಭಾಗದಲ್ಲಿ ಊತ ಉಂಟಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ಸಹ ಕಲ್ಲು ಸಮಸ್ಯೆ ಆಗುತ್ತದೆ. ಇದು ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತದೆ. ಔಷಧಗಳು ಮತ್ತು ನೀರಿನ ಪ್ರಮಾಣ ಹೆಚ್ಚಳ ಕಲ್ಲು ತೆಗೆದು ಹಾಕುತ್ತದೆ.

    MORE
    GALLERIES

  • 38

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಪಿತ್ತಕೋಶದಲ್ಲಿ ಕಲ್ಲುಗಳ ಸಮಸ್ಯೆ ತೆಗೆದು ಹಾಕಲು ಆಪರೇಷನ್ ಮೂಲಕ ಪಿತ್ತಕೋಶವನ್ನು ಹೊರಗೆ ತೆಗೆಯಲಾಗುತ್ತದೆ. ಪಿತ್ತಕೋಶವು ನಮ್ಮ ದೇಹದ ಅತ್ಯಗತ್ಯ ಅಂಗವಾಗಿದೆ. ಹೀಗೆ ಪಿತ್ತಕೋಶವನ್ನು ತೆಗೆದು ಹಾಕಿದರೆ ಇದು ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತದೆ ನೋಡೋಣ.

    MORE
    GALLERIES

  • 48

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ದೇಹದಲ್ಲಿ ಪಿತ್ತಕೋಶದ ಕಾರ್ಯವೇನು ಎಂಬುದನ್ನು ಮೊದಲು ತಿಳಿಯಬೇಕು. ಪಿತ್ತಕೋಶವು ದೇಹದ ಅತ್ಯಗತ್ಯ ಭಾಗ. ಇದು ಯಕೃತ್ತಿನ ಕೆಳಭಾಗದಲ್ಲಿದೆ. ಯಕೃತ್ತಿನಿಂದ ಹೊರಬರುವ ಪಿತ್ತರಸವನ್ನು ಸಂಗ್ರಹಿಸುತ್ತದೆ. ಆಹಾರ ಜೀರ್ಣವಾಗುವಾಗ ಸಣ್ಣ ಕರುಳಿನಲ್ಲಿ ಪಿತ್ತರಸ ತಲುಪುವ ಮೂಲಕ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ.

    MORE
    GALLERIES

  • 58

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಪಿತ್ತಕೋಶದ ಕಲ್ಲುಗಳು ಉಂಟಾಗಲು ಪ್ರಮುಖ ಕಾರಣಗಳು ಹೀಗಿವೆ. ಪಿತ್ತಕೋಶದಲ್ಲಿ ಕಲ್ಲುಗಳ ಉಪಸ್ಥಿತಿ ಮೊದಲು ಪತ್ತೆ ಆಗಲ್ಲ. ಕಲ್ಲಿನ ಗಾತ್ರವು ಹೆಚ್ಚಾದಂತೆ ತೀವ್ರವಾದ ನೋವು ಉಂಟಾಗುತ್ತದೆ. ಅಲ್ಟ್ರಾಸೌಂಡ್ನಿಂದ ಇದನ್ನು ಕಂಡು ಹಿಡಿಯಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯು ಪಿತ್ತಕೋಶದಲ್ಲಿ ಕಲ್ಲು ಉಂಟು ಮಾಡುತ್ತದೆ.

    MORE
    GALLERIES

  • 68

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಪಿತ್ತಕೋಶದ ದೀರ್ಘಾವಧಿಯ ಕಲ್ಲುಗಳ ಸಮಸ್ಯೆಯು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಇದು ನಮ್ಮ ದೇಹದ ಮೇಲೆ ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಯಾವುದೇ ದೀರ್ಘಕಾಲೀನ ಪರಿಣಾಮ ಬೀರಲ್ಲ. ಪಿತ್ತಕೋಶ ಶಸ್ತ್ರಚಿಕಿತ್ಸೆಯ ನಂತರ ಕೆಲವು ಸಂಗತಿಗಳತ್ತ ಗಮನಹರಿಸಬೇಕಾಗುತ್ತದೆ.

    MORE
    GALLERIES

  • 78

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಪಿತ್ತಕೋಶ ತೆಗೆಯುವ ಶಸ್ತ್ರಚಿಕಿತ್ಸೆಯ ನಂತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆ ಉಂಟಾಗುತ್ತವೆ. ಈ ಸಮಸ್ಯೆಗಳು ಅಲ್ಪಾವಧಿಗೆ ಮಾತ್ರ ಇರುತ್ತವೆ. ದೀರ್ಘಾವಧಿ ಹಾನಿಯಾಗಲ್ಲ. ದೇಹದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

    MORE
    GALLERIES

  • 88

    Gallbladder Stone Problem: ಪಿತ್ತಕೋಶ ಕಲ್ಲಿನ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಆದರೆ ಪಿತ್ತಕೋಶ ತೆಗೆದ ನಂತರ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಹೆಚ್ಚು ಕರಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆ ತಪ್ಪಿಸಬೇಕು. ಕೆಫೀನ್ ಸೇವನೆ ತಪ್ಪಿಸಿ. ಭಾರವಾದ ಊಟ ತಪ್ಪಿಸಿ. ಸಣ್ಣ ಪ್ರಮಾಣದ ಊಟ ಮಾಡಿ.

    MORE
    GALLERIES