Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

ಆಹಾರ ಮತ್ತು ಪಾನೀಯ ಸೇವನೆ ವೇಳೆ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗಲು ಮೊದಲ ಕಾರಣ ಆಹಾರ ಮತ್ತು ಪಾನೀಯವೇ ಆಗಿರುತ್ತದೆ. ಹಾಗಾಗಿ ಆಹಾರದ ಗುಣಮಟ್ಟ, ಸಮಯ ಮತ್ತು ಯಾವ ಪದಾರ್ಥಗಳನ್ನು ಯಾವ ಪದಾರ್ಥಗಳ ಜೊತೆ ಸೇವಿಸಬೇಕು ಮತ್ತು ಸೇವಿಸಬಾರದು ಎಂಬ ಜ್ಞಾನ ಇರುವುದು ಮುಖ್ಯ. ಇಲ್ಲಿ ತಜ್ಞರು ಯಾವ ಪದಾರ್ಥಗಳನ್ನು ಯಾವ ಪದಾರ್ಥದ ಜೊತೆ ಸೇರಿಸಿ ತಿನ್ನಬಾರದು ಎಂದು ತಿಳಿಸಿದ್ದಾರೆ. ಅವುಗಳ ಬಗ್ಗೆ ನೋಡೋಣ ಬನ್ನಿ.

First published:

  • 18

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಆಹಾರ ತಜ್ಞರಾದ ಶಿಖಾ ಅಗರ್ವಾಲ್ ಅವರು ಹಣ್ಣುಗಳ ಸೇವನೆ ವೇಳೆ ಕೆಲವು ತಪ್ಪು ಮಾಡದಂತೆ ಎಚ್ಚರಿಸಿದ್ದಾರೆ. ಅಂದರೆ ಹಣ್ಣುಗಳನ್ನು ಯಾವ ಆಹಾರ ಪದಾರ್ಥಗಳ ಜೊತೆ ಸೇವನೆ ಮಾಡಿದರೆ ಅದು ಆರೋಗ್ಯ ಕೆಡಿಸುತ್ತದೆ ಎಂದು ತಿಳಿಸಿದ್ದಾರೆ. ಹೀಗೆ ಪದಾರ್ಥಗಳನ್ನು ಮಿಕ್ಸ್ ಮಾಡಿ ಸೇವಿಸುವುದು ಜೀರ್ಣಕ್ರಿಯೆ ಸಮಸ್ಯೆ ತಂದೊಡ್ಡುತ್ತದೆ. ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ.

    MORE
    GALLERIES

  • 28

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಕಿತ್ತಳೆ ಜೊತೆಗೆ ಕ್ಯಾರೆಟ್ ಸೇವನೆ ತಪ್ಪಿಸಿ. ಇವೆರಡೂ ಪದಾರ್ಥಗಳ ಸಂಯೋಜನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜ್ಯೂಸ್ ಕುಡಿಯುವವರು ಕಿತ್ತಳೆ ಮತ್ತು ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಸೇವಿಸುತ್ತಿದ್ದರೆ ಇದನ್ನು ತಪ್ಪಿಸಿ. ಇದು ಹೀಟ್‌ ಬರ್ನ್ ಸಮಸ್ಯೆ ತಂದೊಡ್ಡುತ್ತದೆ ಅಂತಾರೆ ತಜ್ಞರು. ಜೊತೆಗೆ ಇದು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.

    MORE
    GALLERIES

  • 38

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಮತ್ತು ನಿಂಬೆ ಮಿಕ್ಸ್ ಮಾಡಿ ಸೇವಿಸುವುದನ್ನು ತಪ್ಪಿಸಿ. ಹಣ್ಣುಗಳ ಮೇಲೆ ನಿಂಬೆ ರಸ ಹಿಂಡಿ ಸೇವಿಸುವವರು ಎಚ್ಚರಿಕೆ ವಹಿಸಿ. ಯಾಕಂದ್ರೆ ಪಪ್ಪಾಯಿ ಜೊತೆ ನಿಂಬೆ ರಸ ಸೇವಿಸುವುದು ಆರೋಗ್ಯ ಕೆಡಿಸುತ್ತದೆ. ಇದು ಮಾರಣಾಂತಿಕ ಸಂಯೋಜನೆ ಅಂತಾರೆ ತಜ್ಞರು. ಇದು ರಕ್ತಹೀನತೆ ಮತ್ತು ಹಿಮೋಗ್ಲೋಬಿನ್ ಅಸಮತೋಲ ಉಂಟು ಮಾಡುತ್ತದೆ.

    MORE
    GALLERIES

  • 48

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಪೇರಲ ಮತ್ತು ಬಾಳೆಹಣ್ಣು ಒಟ್ಟಿಗೆ ತಿನ್ನುವುದನ್ನು ತಪ್ಪಿಸಿ. ನೀವು ಹಣ್ಣಿನ ಸಲಾಡ್ ಸೇವಿಸುವಾಗ ಬಾಳೆಹಣ್ಣು ಮತ್ತು ಪೇರಲ ಹಣ್ಣನ್ನು ಒಟ್ಟಿಗೆ ತಿನ್ನುವುದನ್ನು ತಪ್ಪಿಸಿ. ಇದು ಆರೋಗ್ಯ ಕೆಡಿಸುತ್ತದೆ. ಎರಡು ಹಣ್ಣುಗಳನ್ನು ಒಟ್ಟಿಗೆ ತಿಂದರೆ ಆಮ್ಲವ್ಯಾಧಿ, ವಾಕರಿಕೆ, ಗ್ಯಾಸ್ ಮತ್ತು ಆಗಾಗ್ಗೆ ತಲೆನೋವು ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 58

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಹಣ್ಣು ಮತ್ತು ತರಕಾರಿ ಒಟ್ಟಿಗೆ ಸೇವನೆ ತಪ್ಪಿಸಿ. ಹಣ್ಣುಗಳು ಸಕ್ಕರೆ ಮಟ್ಟ ಹೆಚ್ಚಿರುತ್ತದೆ. ಇದು ಜೀರ್ಣಿಸಿಕೊಳ್ಳಲು ಕಷ್ಟ. ಹಣ್ಣುಗಳ ಜೊತೆ ತರಕಾರಿ ಸೇವನೆಯು ಹೊಟ್ಟೆಯಲ್ಲಿ ವಿಷಕಾರಿ ಪದಾರ್ಥ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಇದು ಅತಿಸಾರ, ತಲೆನೋವು, ಸೋಂಕು ಮತ್ತು ಹೊಟ್ಟೆ ನೋವು ಸಮಸ್ಯೆ ಉಂಟು ಮಾಡುತ್ತದೆ.

    MORE
    GALLERIES

  • 68

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಕಿತ್ತಳೆ ಮತ್ತು ಹಾಲು ಸಂಯೋಜನೆ ಜೀರ್ಣಕ್ರಿಯೆ ಹದಗೆಡಿಸುತ್ತದೆ. ಹಾಗಾಗಿ ಎರಡೂ ಸಂಯೋಜನೆ ತಪ್ಪಿಸಿ. ಹಾಲು ಮತ್ತು ಕಿತ್ತಳೆ ಮಿಶ್ರಣವು ಜೀರ್ಣಕ್ರಿಯೆ ಕೆಡಿಸುತ್ತದೆ. ಕಿತ್ತಳೆಯಲ್ಲಿರುವ ಆಮ್ಲವು ಧಾನ್ಯಗಳಲ್ಲಿರುವ ಪಿಷ್ಟವನ್ನು ಜೀರ್ಣಿಸಿಕೊಳ್ಳಲು ಕಾರಣವಾದ ಕಿಣ್ವಗಳನ್ನು ನಾಶ ಮಾಡುತ್ತದೆ. ಇದು ರೋಗಗಳಿಗೆ ಆಹ್ವಾನ ನೀಡಿದಂತೆ. ಹಾಗಾಗಿ ಈ ಸಂಯೋಜನೆ ತಪ್ಪಿಸಿ.

    MORE
    GALLERIES

  • 78

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಅನಾನಸ್ ಜೊತೆ ಹಾಲು ಸೇವನೆಯು ಆರೋಗ್ಯ ಕೆಡಿಸುತ್ತದೆ. ಯಾಕಂದ್ರೆ ಅನಾನಸ್ ನಲ್ಲಿ ಬ್ರೊಮೆಲೈನ್ ಅಂಶವಿದೆ. ಈ ಅಂಶ ಅನಾನಸ್ ರಸದಿಂದ ಹೊರ ಬರುವ ಕಿಣ್ವ. ಇದರ ಹಾಲಿನ ಸಂಪರ್ಕಕ್ಕೆ ಬಂದರೆ ಹೊಟ್ಟೆಯಲ್ಲಿ ಗ್ಯಾಸ್, ವಾಕರಿಕೆ, ಸೋಂಕು, ತಲೆನೋವು ಸೇರಿದಂತೆ ಅನೇಕ ಕಾಯಿಲೆಗಳು ಮುತ್ತಿಕ್ಕುತ್ತವೆ.

    MORE
    GALLERIES

  • 88

    Fruits Mixing: ಹಣ್ಣುಗಳ ಜೊತೆ ಈ ತರಕಾರಿಗಳನ್ನು ಮಿಕ್ಸ್ ಮಾಡಬೇಡಿ, ನಿಮ್ಮ ಹೊಟ್ಟೆಗೆ ಇದು ಸಿಕ್ಕಾಪಟ್ಟೆ ಡೇಂಜರ್​!

    ಹಾಗಾಗಿ ಆರೋಗ್ಯದ ಕಾಳಜಿಯಿಂದಾಗಿ ಈ ಮೇಲಿನ ಪದಾರ್ಥಗಳ ಸಂಯೋಜನೆ ಮತ್ತು ಸೇವನೆ ಎರಡನ್ನೂ ತಪ್ಪಿಸಿ. ನಿಮ್ಮ ಆರೋಗ್ಯ ಸುಧಾರಣೆಗೆ ಮತ್ತು ಚೆನ್ನಾಗಿಡಲು ಪದಾರ್ಥಗಳ ಸಂಯೋಜನೆಗಿಂತ ಒಂದೊಂದೇ ಪದಾರ್ಥ ಸೇವನೆ ಆರೋಗ್ಯಕರ ಆಯ್ಕೆ ಆಗಿದೆ. ಅಸ್ವಸ್ಥತೆ ತಪ್ಪಿಸಲು ಪದಾರ್ಥಗಳನ್ನು ಮಿಕ್ಸ್ ಮಾಡುವುದುನ್ನು ತಪ್ಪಿಸಿ.

    MORE
    GALLERIES