ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿ ತಿಂದು ಸಿಪ್ಪೆ ಎಸೆಯುತ್ತೇವೆ. ಆದರೆ ಇದೇ ಸಿಪ್ಪೆಯಿಂದ ನೀವು ಫೇಸ್ ಪ್ಯಾಕ್ ಮಾಡಬಹುದು. ಹಣ್ಣು ಮತ್ತು ತರಕಾರಿ ಸಿಪ್ಪೆಯಲ್ಲಿ ಹಲವು ಪೋಷಕಾಂಶಗಳಿವೆ. ಇವು ಚರ್ಮಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಚರ್ಮದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಹೊಳಪು ನೀಡುತ್ತದೆ. ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡುತ್ತದೆ.
ದಾಳಿಂಬೆ ಸಿಪ್ಪೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಸುಕ್ಕು ಮತ್ತು ಮೊಡವೆ ತೊಡೆದು ಹಾಕುತ್ತದೆ. ಬಿಸಿಲಿನಲ್ಲಿ ಒಣಗಿದ ದಾಳಿಂಬೆ ಸಿಪ್ಪೆ ಪುಡಿ ತಯಾರಿಸಿ, ನಿಂಬೆ ರಸ ಅಥವಾ ರೋಸ್ ವಾಟರ್ ಹಾಕಿ ಬೆರೆಸಿ, ಚರ್ಮಕ್ಕೆ ಹಚ್ಚಿರಿ. ಅರ್ಧ ಗಂಟೆ ನಂತರ ತೊಳೆಯಿರಿ. ಎಣ್ಣೆಯುಕ್ತ ಚರ್ಮದ ಸಮಸ್ಯೆ ತಡೆಗೆ ಕಂದು ಸಕ್ಕರೆ ಮತ್ತು ಜೇನುತುಪ್ಪ ಹಾಕಿ ಫೇಸ್ ಪ್ಯಾಕ್ ಹಾಕಿ.