ಫ್ರೆಂಚ್ ಫ್ರೈಸ್ ಹೆಸರು ಕೇಳಿದ ತಕ್ಷಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಲ್ಲಿ ನೀರೂರುತ್ತದೆ. ಕಳೆದ ಕೆಲವು ವರ್ಷಗಳಿಂದ ಫ್ರೆಂಚ್ ಫ್ರೈಸ್ ತುಂಬಾ ಫೇಮಸ್ ಆಗಿದೆ. ಈ ಖಾದ್ಯವನ್ನು ಬೀದಿ ಬದಿಯಲ್ಲಿ ಕೂಡ ಮಾರಾಟ ಮಾಡಲಾಗುತ್ತದೆ. ಅಲ್ಲದೇ ಹೆಚ್ಚಾಗಿ ಇದನ್ನು ಜನ ರೆಸ್ಟೋರೆಂಟ್ನಲ್ಲಿ ತಿನ್ನುತ್ತಾರೆ. ಆದರೆ ಟೇಸ್ಟಿ ಆಗಿರುವ ಈ ಫ್ರೆಂಚ್ ಫ್ರೈಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ.