ಪ್ರತಿದಿನವೂ ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ವಿಶೇಷ ಕ್ಷಣಗಳನ್ನು ಒಟ್ಟಿಗೆ ಕಳೆದರೆ ನಿಮ್ಮ ಬಂಧ ಗಟ್ಟಿಯಾಗುತ್ತದೆ. ಇಂತಹ ಅಮೂಲ್ಯ ಕ್ಷಣವನ್ನು ಕಳೆಯಲು ಪ್ರೇಮಿಗಳ ದಿನ, ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ವಿಶೇಷ ಸಂದರ್ಭಗಳ ಅಗತ್ಯವಿಲ್ಲ. ಇಂತಹ ಪ್ರತಿನಿತ್ಯದ ಮಾತುಕತೆ ನಿಮ್ಮ ದಾಂಪತ್ಯ ಜೀವನ ಅಥವಾ ಪ್ರೀತಿಯ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಸಂಬಂಧಗಳು ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಮೆಚ್ಚುಗೆಯ ಮೆಲೆ ನಿರ್ಮಿಸಲ್ಪಟ್ಟಿವೆ.
ಸಂಬಂಧದಲ್ಲಿ ಬಿರುಕು ಮೂಡದಂತೆ ತಡೆಯುವುದು ಹೇಗೆ? ಎಂಬುದರ ಬಗ್ಗೆ ಥೆರಪಿಸ್ಟ್ ಏನ್ ಹೇಳ್ತಾರೆ? ಇದನ್ನು ಉದ್ದೇಶಿಸಿ, ಥೆರಪಿಸ್ಟ್ ಇಸ್ರಾ ನಾಸಿರ್ ಅವರು “ನಿಮ್ಮ ಮನಸ್ಸಿನ ಭಾವನೆಗಳು ಸಂದೇಶವಾಹಕಗಳಾಗಿವೆ ಮತ್ತು ಅವು ಯಾವಾಗಲೂ ನಿಮ್ಮ ಪ್ರತಿರೂಪವಾಗಿರುತ್ತವೆ. ಜೀವನದಲ್ಲಿ ನಮಗೆ ಏನು ಬೇಕು ಅದನ್ನು ಪಡೆದುಕೊಳ್ಳಬೇಕೆಂದ್ರೆ, ನಾವು ನಮ್ಮ ಭಾವನೆಗಳ ಮೇಲೆ ಹಿಡಿತವನ್ನು ಹೊಂದಿರಬೇಕು. ನಮ್ಮ ಲಿಮಿಟ್ಸ್‌ಗಳನ್ನು ಮೊದ ಮೊದಲಿಗೆ ಗುರುತಿಸುವುದು ಕಷ್ಟವಾಗಬಹುದು. ಆದರೆ ಸಮಯ ಕಳೆದಂತೆ ಎಲ್ಲ ಸರಿ ಹೋಗುತ್ತದೆ.
ಕೆಲವು ಸಂಬಂಧಗಳಲ್ಲಿ ಸ್ವಂತ ಒಪ್ಪಿಗೆಗೆ ಯಾವುದೇ ಬೆಲೆಯೇ ಇರುವುದಿಲ್ಲ. ಇದರಿಂದ ನಾವು ಸಾಮಾನ್ಯವಾಗಿ ನೋವನ್ನು ಅನುಭವಿಸುತ್ತೆವೆ. ಇಲ್ಲದಿದ್ದರೆ ನನ್ನಿಂದ ಏನೋ ತಪ್ಪಾಗಿದೆ. ಅದಕ್ಕೆ ಅವರು ನನ್ನ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಪಶ್ಚಾತ್ತಾಪ ಪಡುತ್ತೆವೆ. ಆದ್ದರಿಂದ ನಿಮ್ಮ ಭಾವನೆಗಳ ಬಗ್ಗೆ ನೀವು ಯಾವಾಗಲೂ ಲಿಮಿಟ್‌ನಲ್ಲಿ ಇರಬೇಕು. ನಾವು ಜೀವನದಲ್ಲಿ ಎಷ್ಟು ಕೊಡುತ್ತೇವೆ, ಎಷ್ಟು ತೆಗೆದುಕೊಳ್ಳುತ್ತೇವೆ ಮತ್ತು ಎಷ್ಟನ್ನು ಮತ್ತು ಯಾವುದನ್ನು ತಿರಸ್ಕರಿಸುತ್ತೇವೆ ಎಂಬುದರ ನಡುವೆ ಜೀವನವನ್ನು ಬ್ಯಾಲನ್ಸ್ ಮಾಡುತ್ತೆವೆ ಎಂದು ಥೆರಪಿಸ್ಟ್ ಹೇಳುತ್ತಾರೆ.
ಸಂಬಂಧದಲ್ಲಿ ಬೌಂಡ್ರಿ ಕ್ರಾಸಿಂಗ್ ಅನ್ನು ಸೂಚಿಸುವ ನಾಲ್ಕು ಭಾವನೆಗಳು ಇವು: ಹೌದು, ಎಲ್ಲ ಓಕೆ. ಆದರೆ ಈ ಬೌಂಡ್ರಿ ಕ್ರಾಸಿಂಗ್ ಅಂದ್ರೇನು? ಎಂಬ ಪ್ರಶ್ನೆ ಸಹಜವಾಗಿ ತಲೆದೋರುತ್ತದೆ. ಬೌಂಡ್ರಿ ಕ್ರಾಸಿಂಗ್ ಅಥವಾ ಸಂಬಂಧದಲ್ಲಿ ನಮ್ಮ ಗಡಿಯನ್ನು ದಾಟುವುದು ಅಂದ್ರೆ ಅನುಮತಿಯಿಲ್ಲದೆ ಬೇರೊಬ್ಬರ ದೇಹವನ್ನು ಸ್ಪರ್ಶಿಸುವುದು, ಅಥವಾ ಮಾನಸಿಕ ಹಿಂಸೆ ನೀಡುವುದು ಹೀಗೆ ನಮಗೆ ಇಷ್ಟವಿಲ್ಲದೇ ಬೇರೊಬ್ಬ ವ್ಯಕ್ತಿ ನಮ್ಮ ಮೇಲೆ ತನ್ನ ಭಾವನೆಗಳನ್ನು ಹೇರುವುದು ಆಗಿದೆ. ಇದಕ್ಕೆ ಪೂರಕವಾಗಿ ಬೌಂಡ್ರಿ ಕ್ರಾಸಿಂಗ್ ಸೂಚಿಸುವ ನಾಲ್ಕು ಭಾವನೆಗಳು ಇಲ್ಲಿವೆ ನೋಡಿ..
ಭಯ: ಒಂದು ಸಂಬಂಧದಲ್ಲಿ ಪ್ರೀತಿ, ಕಾಳಜಿ ಇರಬೇಕೆ ಹೊರತು, ಅಲ್ಲಿ ಭಯವಿರಬಾರದು. ಭಯದಿಂದ ಒಬ್ಬ ವ್ಯಕ್ತಿಯ ಜೊತೆ ಸಂಬಂಧವನ್ನು ಹೊಂದಿದ್ದರೆ ಅದು ಬಹಳ ದಿನ ಉಳಿಯುವುದಿಲ್ಲ. ಭಯ ಇದ್ದರೆ ಆ ಸಂಬಂಧಕ್ಕೆ ಮುಕ್ತ ವಾತಾವರಣ ಇರೋದಿಲ್ಲ. ಆದ್ದರಿಂದ ಭಯ ಎಂಬ ಭಾವನೆ ಬೌಂಡ್ರಿ ಕ್ರಾಸಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಈ ಭಾವನೆಯಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಂಭವ ಹೆಚ್ಚು.