Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

ನೀವು ತೂಕ ಇಳಿಸುವ ಪ್ರಯಾಣದಲ್ಲಿದ್ದರೆ, ಬೊಜ್ಜಿನಿಂದ ಮುಕ್ತಿ ಪಡೆಯಲು ಡಯಟ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ತಪ್ಪದೇ ಬಾದಾಮಿ ಹಿಟ್ಟಿನ ಉಪ್ಪಿಟ್ಟು ಸೇರಿಸಿ. ರೆಸಿಪಿ ನೋಡೋಣ.

First published:

  • 18

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ತೂಕ ನಷ್ಟದ ಜರ್ನಿಯಲ್ಲಿದ್ದರೂ ಸಹ ಕೆಲವೊಮ್ಮೆ ಆಹಾರದ ಕ್ರೇವಿಂಗ್ಸ್ ಹೆಚ್ಚಾಗುತ್ತದೆ. ಮಸಾಲೆಯುಕ್ತ ಮತ್ತು ವಿಭಿನ್ನ ಮತ್ತು ಚಟ್ ಪಟ್ ಆಹಾರ ಸೇವನೆಗೆ ಮನಸ್ಸಾಗುತ್ತದೆ.

    MORE
    GALLERIES

  • 28

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ತೂಕ ನಷ್ಟಕ್ಕೆ ನೀವು ಬಾದಾಮಿಯನ್ನು ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿರಬಹುದು. ಬೆಳಗ್ಗೆ ಮತ್ತು ಸಂಜೆ ಬಾದಾಮಿ ಹಾಲು ಕುಡಿಯಬಹುದು. ಆದರೆ ಅದರ ಖಾದ್ಯ ಮಾಡಿ ತಿಂದಿದ್ದೀರಾ?

    MORE
    GALLERIES

  • 38

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ಬಾದಾಮಿಯಿಂದ ನೀವು ಉಪ್ಪಿಟ್ಟು ಮಾಡಿ ತಿನ್ನುವ ಮೂಲಕ ಅದನ್ನು ನಿಮ್ಮ ತೂಕ ನಷ್ಟದ ಜರ್ನಿಯಲ್ಲಿ ಸೇರಿಸಬಹುದು. ಬಾದಾಮಿ ಹಿಟ್ಟಿನ ಉಪ್ಪಿಟ್ಟು ಮಾಡಿ ಬೆಳಗಿನ ತಿಂಡಿಗೆ ಸೇವಿಸಿ. ಇದು ನಿಮಗೆ ಸಹಾಯ ಮಾಡುತ್ತದೆ.

    MORE
    GALLERIES

  • 48

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ಬಾದಾಮಿ ಉಪ್ಪಿಟ್ಟು ಪಾಕವಿಧಾನ ನಿಮ್ಮ ವೇಟ್ ಲಾಸ್ ಜರ್ನಿಗೆ ಉತ್ತಮ ಆಯ್ಕೆಯಾಗಿದೆ. ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳಲ್ಲಿ ಬಾದಾಮಿ ಸಮೃದ್ಧವಾಗಿದೆ.

    MORE
    GALLERIES

  • 58

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ಇದು ದೀರ್ಘಕಾಲ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ನಿಮಗೆ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಈ ಮಸಾಲೆಯುಕ್ತ ಮತ್ತು ಟೇಸ್ಟಿ ಬಾದಾಮಿ ಹಿಟ್ಟಿನ ಉಪ್ಪಿಟ್ಟು ರೆಸಿಪಿ ಮಾಡುವ ವಿಧಾನದ ಬಗ್ಗೆ ನೋಡೋಣ.

    MORE
    GALLERIES

  • 68

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ಬಾದಾಮಿ ಹಿಟ್ಟಿನ ಉಪ್ಪಿಟ್ಟು ರೆಸಿಪಿಗೆ ಬೇಕಾಗುವ ಪದಾರ್ಥಗಳು ಹೀಗಿವೆ. ½ ಕಪ್ ಬಾದಾಮಿ ಹಿಟ್ಟು, ½ ಕಪ್ ನೀರು, 1/4 ಕಪ್ ಈರುಳ್ಳಿ, ಸಣ್ಣಗೆ ಕತ್ತರಿಸಿದ ಎರಡು ಟೊಮೆಟೊಗಳು, 1/4 ಕಪ್ ಕತ್ತರಿಸಿದ ಕ್ಯಾರೆಟ್, 1/4 ಕಪ್ ಬಟಾಣಿ, 1/4 ಕಪ್ ಕ್ಯಾಪ್ಸಿಕಂ, 1 ಹಸಿರು ಮೆಣಸಿನಕಾಯಿ,

    MORE
    GALLERIES

  • 78

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    1 ಚಮಚ ಕತ್ತರಿಸಿದ ಗೋಡಂಬಿ, 1 ಚಮಚ ಹುರಿದ ಕಡಲೆಕಾಯಿ, 1 ಇಂಚಿನ ಶುಂಠಿ ಪೇಸ್ಟ್ 4 ರಿಂದ 5 ಕರಿಬೇವಿನ ಎಲೆಗಳು, ಅರ್ಧ ಟೀಚಮಚ ಜೀರಿಗೆ, ಅರ್ಧ ಟೀಚಮಚ ಸಾಸಿವೆ, ಒಂದು ಪಿಂಚ್ ಕರಿಮೆಣಸು, ರುಚಿಗೆ ಉಪ್ಪು ಬೇಕು. ತಯಾರಿಸುವ ವಿಧಾನ ಹೀಗಿದೆ. ಮೊದಲು ಬಾಣಲೆಗೆ ಎರಡು ಚಮಚ ಆಲಿವ್ ಎಣ್ಣೆ ಹಾಕಿ.

    MORE
    GALLERIES

  • 88

    Morning Breakfast: ತೂಕ ಇಳಿಕೆಗಾಗಿ ಮಾಡ್ಕೊಳ್ಳಿ ಬಾದಾಮಿ ಉಪ್ಪಿಟ್ಟು

    ನಂತರ ಜೀರಿಗೆ, ಕರಿಬೇವಿನ ಸೊಪ್ಪು ಮತ್ತು ಸಾಸಿವೆ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಪ್ಯೂರಿ, ತರಕಾರಿ ಹಾಕಿ ಬೇಯಿಸಿ. ಬಿಸಿ ನೀರು ಹಾಕಿ. ನೀರು ಕುದಿಯುವಾಗ ಈಗ ಅರ್ಧ ಕಪ್ ಬಾದಾಮಿ ಹಿಟ್ಟು ಸೇರಿಸಿ ಮತ್ತು ಮಿಶ್ರಣ ಮಾಡಿ, ನೀರು ಬತ್ತಿದ ನಂತರ ಗ್ಯಾಸ್ ಆಫ್ ಮಾಡಿ ಸರ್ವ್ ಮಾಡಿ.

    MORE
    GALLERIES