Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

ಸ್ಥೂಲಕಾಯ ಹಾಗೂ ತೂಕ ಹೆಚ್ಚಳ ಅಥವಾ ಅಧಿಕ ತೂಕವು ಒಂದು ಗಂಭೀರ ಸಮಸ್ಯೆ ಆಗಿದೆ. ಇದು ಹಲವು ಕಾಯಿಲೆಗಳು ಆವರಿಸುವಂತೆ ಮಾಡುತ್ತದೆ. ಜೊತೆಗೆ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ, ಯಕೃತ್ತು ಸಮಸ್ಯೆ, ಕಿಡ್ನಿ, ಕರುಳಿನ ಚಲನೆ, ಕ್ಯಾನ್ಸರ್ ಮತ್ತು ಕೊರೋನಾ ವೈರಸ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇದನ್ನು ನಿಯಂತ್ರಿಸಲು ಕಡಿಮೆ ಕ್ಯಾಲೋರಿ ಪದಾರ್ಥ ಸೇವನೆ ಮುಖ್ಯ.

First published:

  • 18

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ತೂಕ ಕಡಿಮೆ ಮಾಡಲು ಹಾಗೂ ತೂಕ ನಿಯಂತ್ರಿಸಲು ನಿಮ್ಮ ಡಯಟ್ ನಲ್ಲಿ ನೀವು ಕಡಿಮೆ ಕ್ಯಾಲೋರಿ ಪದಾರ್ಥಗಳ ಸೇವನೆಗೆ ಹೆಚ್ಚು ಗಮನಹರಿಸಿ. ನೀವು ವ್ಯಾಯಾಮ ಮಾಡುವುದರ ಜೊತೆಗೆ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿದರೆ ತೂಕ ನಷ್ಟ ಬೇಗ ಆಗುತ್ತದೆ.

    MORE
    GALLERIES

  • 28

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಕಸರತ್ತು ಮಾಡಿ ಬಂದು ಅಧಿಕ ಕ್ಯಾಲೋರಿ ಪದಾರ್ಥ ಸೇವಿಸಿದರೆ ಅದು ತೂಕ ನಿಯಂತ್ರಣಕ್ಕೆ ಹಾಗೂ ತೂಕ ಇಳಿಕೆಗೆ ಅಡ್ಡಿ ಮಾಡುತ್ತದೆ. ಹಾಗಾಗಿ ಡಯಟ್ ಹಾಗೂ ಕಡಿಮೆ ಕ್ಯಾಲೋರಿ ಪದಾರ್ಥ ಸೇವನೆ ಮಾಡಿ. ಸ್ಟ್ರಾಬೆರಿ ಸೇವನೆ ಮಾಡಿ. ಇದು ಉತ್ಕರ್ಷಣ ನಿರೋಧಕವಾಗಿದೆ. ಕೇವಲ 33 ಕ್ಯಾಲೋರಿ ಹೊಂದಿವೆ. ದೇಹದ ಅಂಗಾಂಶ ಹಾನಿಯಿಂದ ರಕ್ಷಿಸುತ್ತದೆ.

    MORE
    GALLERIES

  • 38

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಕೆಂಪು ಕ್ಯಾಪ್ಸಿಕಂ ಕಡಿಮೆ ಕ್ಯಾಲೋರಿ ಹೊಂದಿದೆ. ಇದನ್ನು ಡಯಟ್ ನಲ್ಲಿ ಸೇರಿಸಿ. ಕೆಂಪು ಕ್ಯಾಪ್ಸಿಕಂ ನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದು 100 ಗ್ರಾಂ ಕೆಂಪು ಕ್ಯಾಪ್ಸಿಕಂನಲ್ಲಿ 31 ಕ್ಯಾಲೋರಿಗಳಿವೆ. ಇದನ್ನು ಪ್ರತಿದಿನ ಸೇವಿಸಿದರೆ, ವಿಟಮಿನ್ ಸಿ ಸಿಗುತ್ತದೆ. ಇದು ತೂಕ ನಷ್ಟಕ್ಕೆ ಸಹಕಾರಿ.

    MORE
    GALLERIES

  • 48

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಗೋವಿನಜೋಳ ಸೇವನೆ ಮಾಡಿ. ಗೋವಿನಜೋಳವನ್ನು ಬೆಣ್ಣೆ ಜೊತೆ ಸೇವನೆ ಮಾಡಬೇಡಿ. ಇದು ತೂಕ ಹೆಚ್ಚಿಸುವ ಅಪಾಯವಿದೆ. ಗೋವಿನಜೋಳದ ಹಿಟ್ಟು, ಫ್ಲೇಕ್ಸ್ ಮತ್ತು ಕಾಳುಗಳನ್ನು ವಿವಿಧ ಖಾದ್ಯಗಳ ಮೂಲಕ ಸೇವನೆ ಮಾಡಿ. ಇದು ಆರೋಗ್ಯಕರ ಆಯ್ಕೆ ಆಗಿದೆ. ಒಂದು ಕಪ್ ಜೋಳದಲ್ಲಿ ಕೇವಲ 32 ಕ್ಯಾಲೋರಿಯಿದೆ.

    MORE
    GALLERIES

  • 58

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಅಣಬೆ ಸೇವನೆ ಮಾಡಿ. ಇದನ್ನು ಡಯಟ್ ನಲ್ಲಿ ಸೇರಿಸಿ. ಮಧ್ಯಮ ಗಾತ್ರದ ಮಶ್ರೂಮ್ 4 ಕ್ಯಾಲೋರಿ ಹೊಂದಿದೆ. ಊಟದ ಮೊದಲು ನೀವು ಚಿಂತೆಯಿಲ್ಲದೇ ಮಶ್ರೂಮ್ ಸೇವನೆ ಮಾಡಬಹುದು. ಮಶ್ರೂಮ್ ನಿಮಗೆ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಬೆಣ್ಣೆ ಜೊತೆ ಸೇವನೆ ಮಾಡಬೇಡಿ.

    MORE
    GALLERIES

  • 68

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಹಸಿರು ಚಹಾ ಮತ್ತು ದ್ರಾಕ್ಷಿ ಸೇವಿಸಿ. ಹಸಿರು ಚಹಾವು ಹೃದ್ರೋಗಗಳ ಅಪಾಯ ಕಡಿಮೆ ಮಾಡುತ್ತದೆ. ಇದು ಕ್ಯಾಲೋರಿ ಸೇವನೆ ನಿಯಂತ್ರಿಸುತ್ತದೆ. ಹಸಿರು ಚಹಾ ಸೇವನೆಯು ತೂಕ ನಷ್ಟಕ್ಕೆ ಪರಿಣಾಮಕಾರಿ. ಹಸಿರು ಚಹಾ ವ್ಯಕ್ತಿಯ ತೂಕ ನಿಯಂತ್ರಿಸಲು ಸಹ ಪರಿಣಾಮಕಾರಿ ಆಗಿದೆ.

    MORE
    GALLERIES

  • 78

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ನಿಮ್ಮ ಆಹಾರದಲ್ಲಿ ದ್ರಾಕ್ಷಿ ಸೇರಿಸಿ. ಇದು ಸಾಕಷ್ಟು ವಿಟಮಿನ್ ಸಿ ಹೊಂದಿದೆ. ಇದು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಹಾಗೂ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಕಾರಿ. ಸೌತೆಕಾಯಿ, ಹೂಕೋಸು, ಬ್ರೊಕೋಲಿ ಕಡಿಮೆ ಕ್ಯಾಲೋರಿ ಪದಾರ್ಥಗಳಾಗಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಿ.

    MORE
    GALLERIES

  • 88

    Weight Loss: ತೂಕ ನಿಯಂತ್ರಣಕ್ಕೆ ಕಡಿಮೆ ಕ್ಯಾಲೋರಿ ಆಹಾರ ಸೇವನೆ ಎಷ್ಟು ಅಗತ್ಯ?

    ಹೂಕೋಸು ಮತ್ತು ಬ್ರೊಕೋಲಿ ಹಾಗೂ ಸೌತೆಕಾಯಿಯನ್ನು ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಇವುಗಳು ಕಡಿಮೆ ಕ್ಯಾಲೋರಿ ಹೊಂದಿವೆ. ಹಾಗೂ ಸೌತೆಕಾಯಿಯು 96 ಪ್ರತಿಶತ ನೀರಿನ ಅಂಶ ಹೊಂದಿದೆ. ಇದು ಡಯಟ್ ಗೆ ಉತ್ತಮ ಪದಾರ್ಥ. ವಿಟಮಿನ್ ಸಿ ಹೊಂದಿದೆ.

    MORE
    GALLERIES