Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

ಚರ್ಮ ಮತ್ತು ಕೂದಲ ಸೌಂದರ್ಯಕ್ಕಾಗಿ ಹಲವು ರೀತಿ ಕಂಪನಿಯ ಅಲೋವೆರಾ ಜೆಲ್ ಬಳಕೆ ಮಾಡ್ತಾರೆ. ಆದರೆ ಅದೆಷ್ಟು ಶುದ್ಧ ಅಲೋವೆರಾ ಎಂಬುದು ಗೊತ್ತಾಗಲ್ಲ. ಹಾಗಾಗಿ ನೀವು ಮನೆಯಲ್ಲೇ ಬೆಳೆದ ಅಲೋವೆರಾದಿಂದ ಜೆಲ್ ತಯಾರಿಸಿಕೊಳ್ಳಬಹುದು.

First published:

  • 18

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಅಲೋವೆರಾ ತ್ವಚೆಗೆ ಆರೋಗ್ಯಕರ ಮತ್ತು ಅತ್ಯಂತ ಪ್ರಯೋಜನಕಾರಿ ಸಸ್ಯ. ಅಲೋವೆರಾದಿಂದ ಬರುವ ಜೆಲ್ ತ್ವಚೆಯನ್ನು ತಂಪಾಗಿಸುತ್ತದೆ. ಜೊತೆಗೆ ತ್ವಚೆ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಹಾಗಾಗಿ ಅಲೋವೆರಾವನ್ನು ಕೇವಲ ತ್ವಚೆ ಮತ್ತು ಕೂದಲಿಗೆ ಹಚ್ಚಲು ಮಾತ್ರವಲ್ಲದೇ, ಸೇವನೆ ಮಾಡ್ತಾರೆ. ತಿನ್ನಲು ಆಗದವರು ಕೂದಲಿಗೆ ಮತ್ತು ತ್ವಚೆಗೆ ಹೆಚ್ಚು ಹಚ್ಚುತ್ತಾರೆ.

    MORE
    GALLERIES

  • 28

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಈಗೆಲ್ಲಾ ಮಾರುಕಟ್ಟೆಗಳಲ್ಲಿ ಹಲವು ಕಂಪನಿಯ ಅಲೋವೆರಾ ಜೆಲ್ ಸಿಗುತ್ತದೆ. ಆದರೆ ಅದೆಷ್ಟು ಶುದ್ಧ ಅಲೋವೆರಾ ಎಂಬುದು ಗೊತ್ತಾಗಲ್ಲ. ಹಾಗಾಗಿ ನೀವು ಮನೆಯಲ್ಲಿ ಪಾಟ್ ನಲ್ಲಿ ಅಲೋವೆರಾ ಬೆಳೆದು ಅದನ್ನೇ ತ್ವಚೆಗೆ ಬಳಕೆ ಮಾಡುವುದು ಉತ್ತಮ.

    MORE
    GALLERIES

  • 38

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಮನೆಯಲ್ಲಿ ಅಲೋವೆರಾ ಜೆಲ್ ಅನ್ನು ಹೇಗೆ ತಯಾರಿಸುವುದು? ಅದನ್ನು ಹೇಗೆ ಬಳಸುವುದು? ಇದೆಲ್ಲವನ್ನೂ ಇಲ್ಲಿ ನೋಡೋಣ. ಅಲೋವೆರಾ ಸೌಂದರ್ಯದ ನಿಧಿ. ತ್ವಚೆಯ ಆರೈಕೆಗೆ ಮತ್ತು ತ್ವಚೆಯ ಹಲವು ಸಮಸ್ಯೆಗೆ ಇದು ಪರಿಹಾರ ಒದಗಿಸುತ್ತದೆ.

    MORE
    GALLERIES

  • 48

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಅಲೋವೆರಾ ಜೆಲ್‌ನಲ್ಲಿ ಶೇಕಡಾ 95 ರಷ್ಟು ನೀರಿದೆ. ಇದು ಚರ್ಮಕ್ಕೆ ಉತ್ತಮ ಹೈಡ್ರೇಟಿಂಗ್ ಪ್ರಯೋಜನ ನೀಡುತ್ತದೆ. ಅದು ಚರ್ಮವನ್ನು ತೇವವಾಗಿರಿಸುತ್ತದೆ. ಜೊತೆಗೆ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಚರ್ಮದಲ್ಲಿನ ತುರಿಕೆ ಸಮಸ್ಯೆ ಕಡಿಮೆ ಮಾಡುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡಲು ಸಹಕಾರಿ.

    MORE
    GALLERIES

  • 58

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಚರ್ಮದಲ್ಲಿನ ಉರಿಯೂತ ಕಡಿಮೆ ಮಾಡಲು ಅಲೋವೆರಾ ಜೆಲ್ ಬಳಕೆ ಉತ್ತಮ ಆಯ್ಕೆಯಾಗಿದೆ. ಅಲೋವೆರಾದಲ್ಲಿ ಹಲವು ಪೋಷಕಾಂಶಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಕ್ರೋಮಿಯಂ, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ಸೇರಿದಂತೆ ಹಲವು ಅಂಶಗಳಿವೆ. ಇದು ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ.

    MORE
    GALLERIES

  • 68

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಅಲೋವೆರಾ ಜೆಲ್ ಅನ್ನು ಮನೆಯಲ್ಲಿಯೇ ಹೀಗೆ ತಯಾರಿಸಿ. ಚಾಕುವಿನಿಂದ ಮೊದಲು ಅಲೋವೆರಾ ಕತ್ತರಿಸಿಡಿ. ನಂತರ ಅದನ್ನು ಚೆನ್ನಾಗಿ ತೊಳೆಯಿರಿ. ಈಗ ಗಾಳಿಯಾಡದ ಕಂಟೇನರ್ ತೆಗೆದುಕೊಳ್ಳಿ. ತಾಜಾ ಅಲೋವೆರಾದ ಮೇಲಿನ ಪದರ ತೆಗೆದು ಹಾಕಿ ಜೆಲ್ ನ್ನು ಬ್ಲೆಂಡರ್ ಗೆ ಹಾಕಿಕೊಳ್ಳಿ. ಈಗ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ನಯವಾದ ಪೇಸ್ಟ್ ಸಿದ್ಧವಾಗುವವರೆಗೆ ರುಬ್ಬಿರಿ.

    MORE
    GALLERIES

  • 78

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಪೇಸ್ಟ್ ಸಿದ್ಧವಾದ ನಂತರ, ಅದರಲ್ಲಿ ವಿಟಮಿನ್ ಸಿ ಪೌಡರ್, ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ನಿಮಿಷ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈಗ ಅದನ್ನು ಚರ್ಮಕ್ಕೆ ಅನ್ವಯಿಸಿ. ಇದು ನಿಮಗೆ ನೈಸರ್ಗಿಕ ಮತ್ತು ಅದ್ಭುತ ಪ್ರಯೋಜನ ನೀಡುತ್ತದೆ. ತ್ವಚೆಯು ಸಾಫ್ಟ್ ಮತ್ತು ಕಲೆ ರಹಿತವಾಗುತ್ತದೆ.

    MORE
    GALLERIES

  • 88

    Aloe Vera: ಅಲೋವೆರಾ ಜೆಲ್ ತಯಾರಿಸೋದು ಹೇಗೆ? ಯಾರು ಇದನ್ನು ಬಳಸಬಾರದು?

    ಯಾರು ಈ ಅಲೋವೆರಾ ಜೆಲ್ ಬಳಸಬಾರದು? ಗರ್ಭಿಣಿಯರು ಅಲೋವೆರಾ ಜೆಲ್ ನ್ನು ಬಳಸಬಾರದು ಅಂತಾರೆ ತಜ್ಞರು. ಜೊತೆಗೆ ಹಾಲುಣಿಸುವ ಮಹಿಳೆಯರು ಅಲೋವೆರಾ ಜೆಲ್ ಬಳಕೆ ತಪ್ಪಿಸಬೇಕು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಲೋವೆರಾ ಜೆಲ್ ನ್ನು ಮೌಖಿಕವಾಗಿ ಬಳಸಬೇಕಾಗಿಲ್ಲ. ನೀವು ಚರ್ಮ ಸಂಬಂಧಿ ಸಮಸ್ಯೆ, ತುರಿಕೆ, ಅಲರ್ಜಿ ಸಮಸ್ಯೆಯಿದ್ದವರಾಗಿದ್ದರೆ ಅಲೋವೆರಾ ಜೆಲ್ ಅನ್ವಯಿಸಿದ ನಂತರ ಬೇಗ ತೊಳೆಯಿರಿ.

    MORE
    GALLERIES