Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

ಬೇಸಿಗೆಯಲ್ಲಿ ನೀವು ಈರುಳ್ಳಿ ಹಾಕಿ ಮಾಡಿದ ಜೋಳದ ರೊಟ್ಟಿ ತಿಂದರೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೋಳ ಮತ್ತು ಈರುಳ್ಳಿ ರೊಟ್ಟಿಯನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿದರೆ ಇದು ನಿಮ್ಮನ್ನು ಇಡೀ ದಿನ ಶಕ್ತಿಯುತವಾಗಿಸುತ್ತದೆ. ಫೈಬರ್ ಸಮೃದ್ಧ ಜೋಳದ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

First published:

  • 17

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಬೇಸಿಗೆಯಲ್ಲಿ ನೀವು ಈರುಳ್ಳಿ ಹಾಕಿ ಮಾಡಿದ ಜೋಳದ ರೊಟ್ಟಿ ತಿಂದರೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೋಳ ಮತ್ತು ಈರುಳ್ಳಿ ರೊಟ್ಟಿಯನ್ನು ಬೆಳಗಿನ ಉಪಹಾರದಲ್ಲಿ ಸೇರಿಸಿದರೆ ಇದು ನಿಮ್ಮನ್ನು ಇಡೀ ದಿನ ಶಕ್ತಿಯುತವಾಗಿಸುತ್ತದೆ. ಫೈಬರ್ ಸಮೃದ್ಧ ಜೋಳದ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    MORE
    GALLERIES

  • 27

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಜೊತೆಗೆ ಈರುಳ್ಳಿ ತಂಪಾಗಿಸುವ ಗುಣ ಹೊಂದಿದೆ. ಇದು ಹೊಟ್ಟೆಯ ಶಾಖವನ್ನು ಶಾಂತಗೊಳಿಸುತ್ತದೆ. ಜೋಳ-ಈರುಳ್ಳಿ ರೊಟ್ಟಿ ತಿಂದರೆ ಇದು ತೂಕ ಇಳಿಕೆಗೂ ಸಹಕಾರಿ. ಬೇಸಿಗೆಯಲ್ಲಿ ನಿಮ್ಮ ಆಹಾರದಲ್ಲಿ ಜೋಳ ಮತ್ತು ಈರುಳ್ಳಿ ರೊಟ್ಟಿ ಸೇರಿಸಿ.

    MORE
    GALLERIES

  • 37

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಜೋಳ ಮತ್ತು ಈರುಳ್ಳಿ ರೊಟ್ಟಿ ಮಾಡುವುದು ಸುಲಭ. ಸ್ವಲ್ಪ ಸಮಯದಲ್ಲೇ ಇದನ್ನು ನೀವು ತಯಾರಿಸಬಹುದು. ಬನ್ನಿ ಜೋಳ-ಈರುಳ್ಳಿ ರೊಟ್ಟಿ ಮಾಡುವ ಸುಲಭ ವಿಧಾನದ ಬಗ್ಗೆ ಇಲ್ಲಿ ತಿಳಿಯೋಣ.

    MORE
    GALLERIES

  • 47

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಜೋಳ-ಈರುಳ್ಳಿ ರೊಟ್ಟಿಗೆ ಬೇಕಾಗುವ ಸಾಮಾಗ್ರಿಗಳು ಹೀಗಿವೆ. ಜೋಳದ ಹಿಟ್ಟು - 1 ಕಪ್, ನುಣ್ಣಗೆ ಕತ್ತರಿಸಿದ ಈರುಳ್ಳಿ, 1/2 ಕಪ್ ಹಸಿರು ಮೆಣಸಿನಕಾಯಿ ಪೇಸ್ಟ್, 1/4 ಟೀಸ್ಪೂನ್, ಎಣ್ಣೆ, ಉಪ್ಪು ಬೇಕು. ಜೋಳ-ಈರುಳ್ಳಿ ರೊಟ್ಟಿ ಮಾಡುವ ವಿಧಾನ ಹೀಗಿದೆ.

    MORE
    GALLERIES

  • 57

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಜೋಳ-ಈರುಳ್ಳಿ ರೊಟ್ಟಿ ಮಾಡಲು, ಮೊದಲು ಈರುಳ್ಳಿ ತೆಗೆದುಕೊಂಡು ಅವುಗಳನ್ನು ಸಣ್ಣದಾಗಿ ಕತ್ತರಿಸಿ. ನಂತರ ಹಸಿರು ಮೆಣಸಿನಕಾಯಿಯಯನ್ನು ತವೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹುರಿದು, ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಈಗ ಆಳವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ಜೋಳದ ಹಿಟ್ಟು ಮತ್ತು ಸಣ್ಣದಾಗಿ ಕೊಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    MORE
    GALLERIES

  • 67

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ಇದಕ್ಕೆ ಈರುಳ್ಳಿ ಪೇಸ್ಟ್, ಎಣ್ಣೆ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ. ಸಣ್ಣ ಉಂಡೆ ಮಾಡಿ. ಮಧ್ಯಮ ಉರಿಯಲ್ಲಿ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ರೆಡಿ ಮಾಡಿಟ್ಟಿದ್ದ ಉಂಡೆಯಿಂದ ಈಗ ರೊಟ್ಟಿ ತಯಾರಿಸಿ. ತವೆ ಮೇಲೆ ಸ್ವಲ್ಪ ಎಣ್ಣೆ ಹಾಕಿ, ರೊಟ್ಟಿ ಹಾಕಿ, ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ.

    MORE
    GALLERIES

  • 77

    Morning Breakfast: ಹೊಸ ರುಚಿ ಕೇಳುವ ಮಕ್ಕಳಿಗೆ ಮಾಡಿಕೊಡಿ ಈರುಳ್ಳಿ ರೊಟ್ಟಿ

    ರೊಟ್ಟಿಯು ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ. ಈರುಳ್ಳಿ ಹೆಚ್ಚು ಹಾಕಿದರೆ, ಚೆನ್ನಾಗಿ ಬೇಯಿಸಿ. ಇದು ರುಚಿಯನ್ನು ಹೆಚ್ಚಿಸುತ್ತದೆ. ನಂತರ ರೊಟ್ಟಿಯನ್ನು ಸರ್ವ್ ಮಾಡಿ. ನೀವು ಇದನ್ನು ಕೊಬ್ಬರಿ ಚಟ್ನಿ, ನಿಮ್ಮಿಷ್ಟದ ಪಲ್ಯದ ಜೊತೆ ತಿನ್ನಬಹುದು.

    MORE
    GALLERIES