Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

ಪೀಲ್ ಆಫ್ ಮಾಸ್ಕ್ ಅನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಈ ಮನೆಮದ್ದು ಚರ್ಮಕ್ಕೆ ಸುರಕ್ಷಿತವಾಗಿದೆ. ಪೀಲ್ ಆಫ್ ಮಾಸ್ಕ್ ತ್ವಚೆಗೆ ತಾಜಾತನ ನೀಡುತ್ತದೆ. ಇದು ತ್ವಚೆಯು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ದುಡ್ಡು ಕೊಟ್ಟು ಪೀಲ್ ಆಫ್ ಮಾಸ್ಕ್ ಖರೀದಿ ಮಾಡುವ ಬದಲು ಮನೆಮದ್ದು ಬಳಸಿ.

First published:

  • 18

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಮುಖದ ಕಾಂತಿಗಾಗಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ತರಹದ ಪೀಲ್ ಆಫ್ ಮಾಸ್ಕ್ ಸಿಗುತ್ತವೆ. ಇವುಗಳು ಮುಖದ ಕೊಳೆ ತೆಗೆದು ಹಾಕಲು ಮತ್ತು ಕಪ್ಪು ಕಲೆ ಸಮಸ್ಯೆ ತೆಗೆದು ಹಾಕಲು ಸಹಾಯ ಮಾಡುತ್ತವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪೀಲ್ ಆಫ್ ಮಾಸ್ಕ್ ಗಳು ರಾಸಾಯನಿಕ ಪದಾರ್ಥ ಬಳಕೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಸ್ಕ್‌ ಗಳ ಬಳಕೆಯು ನಿಮಗೆ ಮೊಡವೆ ಸಮಸ್ಯೆ ಉಂಟು ಮಾಡಬಹುದು.

    MORE
    GALLERIES

  • 28

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಹಾಗಾಗಿ ನೀವು ಪೀಲ್ ಆಫ್ ಮಾಸ್ಕ್ ನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಈ ಮನೆಮದ್ದು ಚರ್ಮಕ್ಕೆ ಸುರಕ್ಷಿತವಾಗಿದೆ. ಪೀಲ್ ಆಫ್ ಮಾಸ್ಕ್ ತ್ವಚೆಗೆ ತಾಜಾತನ ನೀಡುತ್ತದೆ. ಇದು ತ್ವಚೆಯು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ದುಡ್ಡು ಕೊಟ್ಟು ಪೀಲ್ ಆಫ್ ಮಾಸ್ಕ್ ಖರೀದಿ ಮಾಡುವ ಬದಲು ಮನೆಮದ್ದು ಬಳಸಿ.

    MORE
    GALLERIES

  • 38

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಮನೆಯಲ್ಲಿ ನೀವು ನಿತ್ಯವೂ ಬಳಸುವ ಪದಾರ್ಥಗಳಿಂದ ಪೀಲ್ ಆಫ್ ಮಾಸ್ಕ್ ತಯಾರಿಸಬಹುದು. ಹಾಗಾದರೆ ಪೀಲ್ ಆಫ್ ಮಾಸ್ಕ್ ತಯಾರಿಸುವುದು ಹೇಗೆ ಎಂದು ತಿಳಿಯೋಣ. ಎಣ್ಣೆಯುಕ್ತ ಚರ್ಮಕ್ಕಾಗಿ ಚಾರ್ಕೋಲ್ ಪೀಲ್-ಆಫ್ ಮಾಸ್ಕ್ ಬಳಸುವುದು ಸೂಕ್ತ.

    MORE
    GALLERIES

  • 48

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಚಾರ್ಕೋಲ್ ಪೀಲ್-ಆಫ್ ಮಾಸ್ಕ್ ಚರ್ಮಕ್ಕೆ ತುಂಬಾ ಉತ್ತಮ ಆಯ್ಕೆ ಆಗಿದೆ. ಇದು ಹೆಚ್ಚುವರಿ ಎಣ್ಣೆ ಮತ್ತು ಕಲ್ಮಶ ಹೀರಿಕೊಳ್ಳುತ್ತದೆ. ಇದು ಎಣ್ಣೆಯುಕ್ತ ಚರ್ಮ ಹೊಂದಿರುವವರ ತ್ವಚೆಯ ಸಮಸ್ಯೆ ತೆಗೆದು ಹಾಕುತ್ತದೆ. ಚಾರ್ಕೋಲ್ ಪೀಲ್-ಆಫ್ ಮಾಸ್ಕ್ ತಯಾರಿಸಲು,

    MORE
    GALLERIES

  • 58

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಚಾರ್ಕೋಲ್ ಪೌಡರ್ 1 ಟೀಸ್ಪೂನ್, ಬೆಂಟೋನೈಟ್ ಮಣ್ಣು 1 ಚಮಚ, ಜೆಲಾಟಿನ್ 1 ಟೀಸ್ಪೂನ್, ನೀರು ಬೇಕು. ಮೊದಲು ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಚಾರ್ಕೋಲ್ ಪುಡಿ, ಒಂದು ಚಮಚ ಬೆಂಟೋನೈಟ್ ಜೇಡಿಮಣ್ಣು ಮತ್ತು ಒಂದು ಚಮಚ ಜೆಲಾಟಿನ್ ಮಿಶ್ರಣ ಮಾಡಿ. ನಯವಾದ ಪೇಸ್ಟ್ ತಯಾರಿಸಿ.

    MORE
    GALLERIES

  • 68

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಪೇಸ್ಟ್ ನ್ನು ಮುಖಕ್ಕೆ ಹಚ್ಚಿರಿ. 20 ನಿಮಿಷ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ವಯಸ್ಸಾಗುವಿಕೆ ವಿರೋಧಿ ಮತ್ತು ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸಲು ಕಾಫಿ ಪೀಲ್-ಆಫ್ ಮಾಸ್ಕ್ ತಯಾರಿಸಿ. ಕಾಫಿ ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದೆ. ಇದು ಅಕಾಲಿಕ ವಯಸ್ಸಾಗುವಿಕೆ ಲಕ್ಷಣ ಕಡಿಮೆ ಮಾಡುತ್ತದೆ.

    MORE
    GALLERIES

  • 78

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ಉರಿಯೂತ ಕಡಿಮೆ ಮಾಡುತ್ತದೆ. ಚರ್ಮ ಹೊಳೆಯುವಂತೆ ಮಾಡುತ್ತದೆ. ಕಾಫಿ ಪುಡಿ ಒಂದು ಚಮಚ, ಜೆಲಾಟಿನ್ 1 ಟೀಸ್ಪೂನ್, ಜೇನುತುಪ್ಪ ಒಂದು ಚಮಚ, ನೀರು ಬೇಕು. ಮೊದಲು ಚಮಚ ಕಾಫಿ ಪುಡಿ, 1 ಚಮಚ ರುಚಿ ರಹಿತ ಜೆಲಾಟಿನ್ ಮತ್ತು 1 ಚಮಚ ಜೇನುತುಪ್ಪ ಸಣ್ಣ ಬಟ್ಟಲಿನಲ್ಲಿ ಹಾಕಿ.

    MORE
    GALLERIES

  • 88

    Skin Care: ಮುಖದ ಕಾಂತಿಗೆ ಪೀಲ್ ಆಫ್ ಮಾಸ್ಕ್​ಗಳನ್ನು ಮನೆಯಲ್ಲೇ ಹೀಗೆ ತಯಾರಿಸಿ

    ನಂತರ ಒಂದು ಚಮಚ ನೀರು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ನಯವಾದ ಪೇಸ್ಟ್ ತಯಾರಿಸಿ. ಪೇಸ್ಟ್ ನ್ನು ಮುಖದ ಮೇಲೆ ಸಂಪೂರ್ಣವಾಗಿ ಹಚ್ಚಿರಿ. 20 ನಿಮಿಷ ಹಾಗೆಯೇ ಒಣಗಲು ಬಿಡಿ. ನಂತರ ಸಮಪೂರ್ಣವಾಗಿ ತೆಗೆದು ಹಾಕಿ. ಇದು ತ್ವಚೆಗೆ ತಾಜಾತನ ನೀಡುತ್ತದೆ.

    MORE
    GALLERIES