ಮಧುಮೇಹ ಈಗ ಮಹಾಮಾರಿಯಾಗಿ ಪರಿಣಮಿಸಿದೆ. ಬಹುತೇಕ ಪ್ರತಿಯೊಂದು ಕುಟುಂಬದಲ್ಲಿಯೂ ಒಬ್ಬರಿಗಾದರೂ ಮಧುಮೇಹವಿದ್ದೇ ಇರುತ್ತದೆ. ಮಧುಮೇಹವು ಪಾದಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ತಮ್ಮ ಪಾದಗಳಲ್ಲಿನ ನರಗಳು ದುರ್ಬಲಗೊಳ್ಳಬಹುದು. ಇದು ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರುತ್ತದೆ. ಕ್ರಮೇಣ, ಪಾದಗಳಲ್ಲಿನ ಎಲ್ಲಾ ಸಂವೇದನೆಗಳು ಕಣ್ಮರೆಯಾಗುತ್ತವೆ.
ಪಾದಗಳ ಆರೈಕೆ ಮಾಡುವುದೇಗೆ? ನಿಯಮಿತವಾಗಿ ನಿಮ್ಮ ಪಾದಗಳನ್ನು ತೊಳೆಯಿರಿ 2) ಪ್ರತಿದಿನ ನಿಮ್ಮ ಪಾದಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಏನಾದರೂ ಬದಲಾವಣೆಗಳಾಗಿದ್ಯಾ ಎಂದು ನೋಡಿಕೊಳ್ಳಿ! ಊತ ಅಥವಾ ಬಣ್ಣ ಬದಲಾವಣೆ 3) ಎಲ್ಲೆಂದರಲ್ಲಿ ಬರಿಗಾಲಿನಲ್ಲಿ ನಡೆಯಬೇಡಿ 4) ನಿಯಮಿತವಾಗಿ ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ದೊಡ್ಡ ಉಗುರುಗಳನ್ನು ಬೆಳೆಸಬೇಡಿ 5) ಸೂಕ್ತವಾದ ಶೂಗಳನ್ನು ಧರಿಸಿ. ಎತ್ತರದ ಹೀಲ್ಸ್ ಚಪ್ಪಲಿ ಹಾಕುವುದನ್ನು ನಿಲ್ಲಿಸಿ.