Eye Care Tips: ಈ ಆಹಾರಗಳನ್ನು ತಿಂದ್ರೆ ಕಣ್ಣಿನ ಸಮಸ್ಯೆ ಬರಲ್ಲ
Foods For Eyesight: ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು, ಕಣ್ಣು ತೊಳೆಯುವುದು ಹೀಗೆ ಅನೇಕ ಟಿಪ್ಸ್ ಫಾಲೋ ಮಾಡಬೇಕು. ಅದರ ಜೊತೆಗೆ ಆಹಾರಗಳು ಸಹ ಬಹಳ ಮುಖ್ಯ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳು ಯಾವುವು ಎಂಬುದು ಇಲ್ಲಿದೆ.
ಡ್ರೈ ಫ್ರೂಟ್ಸ್: ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಹೊಂದಿರುವ ಈ ಡ್ರೈ ಫ್ರೂಟ್ಸ್ ಕಣ್ಣುಗಳ ಆರೋಗ್ಯಕ್ಕೆ ಬಹಳ ಉತ್ತಮ. ಬಾದಾಮಿ ಮತ್ತು ದ್ರಾಕ್ಷಿಯನ್ನು ನೆನೆಸಿ ತಿನ್ನಿ ಮತ್ತು ಇದಕ್ಕೆ ಯಾವುದೇ ರೀತಿಯೇ ಉಪ್ಪು ಹಾಕದೇ ತಿನ್ನುವುದು ಸಹ ಉತ್ತಮ.
2/ 8
ಬೆರ್ರಿ ಹಣ್ಣುಗಳು: ಮ್ಯಾಕ್ಯುಲರ್ ಡಿಜೆನರೇಶನ್ ಕಡಿಮೆ ಮಾಡಲು ವಿಟಮಿನ್ ಸಿ ಸಹಾಯ ಮಾಡುತ್ತದೆ. ಈ ಬೆರ್ರಿ ಹಣ್ಣನ್ನು ದಿನನಿತ್ಯದ ಆಹಾರದಲ್ಲಿ ಬೆರ್ರಿಹಣ್ಣುಗಳನ್ನು ಸೇರಿಸಿ ತಿನ್ನಿ. ಇದನ್ನು ನೀವು ಸಲಾಡ್ ಅಥವಾ ಸ್ಪೂಥಿ ಮಾಡುವಾಗ ಬಳಕೆ ಮಾಡಬಹುದು.
3/ 8
ಚಾಕೊಲೇಟ್: ರೆಟಿನಾಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಈ ಚಾಕೊಲೇಟ್ ಸಹಾಯ ಮಾಡುತ್ತದೆ. ಮುಖ್ಯವಾಗಿ ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್ಗಳನ್ನು ಸಮೃದ್ಧವಾಗಿ ಹೊಂದಿದ್ದು, ಕಣ್ಣುಗಳ ಆರೋಗ್ಯಕ್ಕೆ ಬಹಳ ಉತ್ತಮ.
4/ 8
ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಎ ಮತ್ತು ಸತು ಸಮೃದ್ಧವಾಗಿ ಇರುತ್ತದೆ. ಇದು ಕಣ್ಣುಗಳು ಆರೋಗ್ಯಕ್ಕೆ ಬಹಳ ಅಗತ್ಯವಾಗಿದ್ದು, ಕಾರ್ನಿಯಾವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
5/ 8
ಸೂರ್ಯಕಾಂತಿ ಬೀಜಗಳು: ಚಿಯಾ, ಸೆಣಬಿನ, ಅಗಸೆ, ಸೂರ್ಯಕಾಂತಿ, ಕುಂಬಳಕಾಯಿ, ಎಳ್ಳು, ಇತ್ಯಾದಿಗಳೆಲ್ಲವೂ ಸತು, ಒಮೆಗಾ-3 ಮತ್ತು ವಿಟಮಿನ್ ಇ ಅನ್ನು ಸಮೃದ್ಧವಾಗಿದ್ದು, ಪ್ರತಿದಿನ ಸ್ವಲ್ಪ ಇವುಗಳನ್ನು ಸೇವಿಸಿ.
6/ 8
ಸೊಪ್ಪು: ಈ ಸೊಪ್ಪುಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಇರುತ್ತದೆ. ಅಲ್ಲದೇ ಇದರಲ್ಲಿ ಕಣ್ಣಿಗೆ ಬೇಕಿರುವ ಬೀಟಾ-ಕ್ಯಾರೋಟಿನ್ನಲ್ಲಿಯೂ ಸಮೃದ್ಧವಾಗಿದೆ. ಇದು ಕಣ್ಣಿನ ಪೊರೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ.
7/ 8
ವಿಟಮಿನ್ ಸಿ ಹಣ್ಣುಗಳು: ಈ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಕಣ್ಣುಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ನಿಂಬೆಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ.
8/ 8
ಮೊಟ್ಟೆ: ಕಣ್ಣಿನಲ್ಲಿ ಆಗಾಗ ನೀರು ಬರುತ್ತಿದ್ದರೆ ಅಥವಾ ಒಣ ಕಣ್ಣಿನ ಸಮಸ್ಯೆ ಇದ್ದರೆ ನಿಮಗೆ ಮೊಟ್ಟೆ ಉತ್ತಮ. ಮೊಟ್ಟೆಯಲ್ಲಿ ಲುಟೀನ್ ಮತ್ತು ವಿಟಮಿನ್ ಎ ಇರುತ್ತದೆ, ಇದು ಕಣ್ಣುಗಳನ್ನು ರಕ್ಷಿಸುತ್ತದೆ.