Immunity Power: ಈ ಆಹಾರಗಳನ್ನು ತಿಂದ್ರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ
Foods For Immunity Power: ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಯಾವುದೇ ರೋಗಗಳು ನಮ್ಮನ್ನ ಕಾಡುವುದಿಲ್ಲ.ಚಳಿಗಾಲದಲ್ಲಿ ಇದು ಬಹಳ ಮುಖ್ಯವಾಗುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗಲು ಕೆಲ ಆಹಾರಗಳು ಸಹಾಯ ಮಾಡುತ್ತದೆ. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.
ಬ್ರೋಕೊಲಿ: ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಹೊಂದಿದ್ದು, ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ನಿಮ್ಮ ಸಲಾಡ್ಗಳನ್ನು ಸೇರಿಸಬಹುದು.
2/ 8
ಡ್ರೈ ಫ್ರೂಟ್ಸ್: ಇದರಲ್ಲಿರುವ ವಿಟಮಿನ್ ಇ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಸೋಂಕುಗಳು ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.
3/ 8
ಬೆಳ್ಳುಳ್ಳಿ: ವಿಟಮಿನ್ ಬಿ 1, ಬಿ 2, ಬಿ 3, ಬಿ 6 ಮತ್ತು ವಿಟಮಿನ್ ಸಿ ಅನ್ನು ಸಮೃದ್ಧವಾಗಿ ಹೊಂದಿರುವ ಈ ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಚಳಿಗಾಲದಲ್ಲಿ ತಪ್ಪದೇ ಬೆಳ್ಳುಳ್ಳಿ ಸೇವನೆ ಮಾಡಬೇಕು ಎನ್ನುತ್ತಾರೆ ತಜ್ಞರು.
4/ 8
ಮೊಟ್ಟೆ: ಇದರಲ್ಲಿ ವಿಟಮಿನ್ ಡಿ ಅಗತ್ಯ ಪ್ರಮಾಣದಲ್ಲಿ ಇರುತ್ತದೆ. ಇದನ್ನು ಸೇವಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು ಬರುವುದಿಲ್ಲ. ಅಲ್ಲದೇ, ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
5/ 8
ದೊಡ್ಡ ಮೆಣಸು: ಈ ದೊಡ್ಡ ಮೆಣಸಿನಲ್ಲಿ ಸಹ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಸುವುದು ಸಹಾಯ ಮಾಡುತ್ತದೆ.
6/ 8
ಡಾರ್ಕ್ ಚಾಕೊಲೇಟ್: ಥಿಯೋಬ್ರೋಮಿನ್ ಎಂಬ ಆ್ಯಂಟಿ ಆಕ್ಸಿಡೆಂಟ್ ಅನ್ನು ಈ ಡಾರ್ಕ್ ಚಾಕೊಲೇಟ್ ಹೊಂದಿರುತ್ತದೆ, ಇದು ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
7/ 8
ಬೆರ್ರಿ ಹಣ್ಣುಗಳು: ಈ ಬೆರ್ರಿ ಹಣ್ಣುಗಳು ಫ್ಲೇವನಾಯ್ಡ್ನಂತಹ ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಉಸಿರಾಟದ ಕಾಯಿಲೆಗಳು ಸೇರಿದಂತೆ ರೋಗನಿರೋಶಕ ಶಕ್ತಿ ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.
8/ 8
ಸಿಟ್ರಸ್ ಹಣ್ಣುಗಳು: ಕಿತ್ತಳೆ ಹಣ್ಣು, ನಿಂಬೆ ಸೇರಿದಂತೆ ಸಿಟ್ರಸ್ ಹೆಚ್ಚಿರುವ ಹಣ್ಣುಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ವಿಟಮಿನ್ ಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.