ವಾಸ್ತವವಾಗಿ, ಅನೇಕ ಆಹಾರಗಳು ತುಂಬಾ ರುಚಿಕರವಾಗಿರುತ್ತದೆ. ನಾವು ಅದನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ. ಆದರೆ ಈ ಆಹಾರಗಳು ಸ್ಥೂಲಕಾಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಸದ್ಯ ನಾವು ಸಣ್ಣ ಆಗಬೇಕು ಅಂತ ಅಂದುಕೊಂಡಿದ್ದರೆ ಯಾವ ಆಹಾರಗಳನ್ನು ಬಿಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಆಲೂಗಡ್ಡೆ ಚಿಪ್ಸ್: ಆಲೂಗಡ್ಡೆ ಚಿಪ್ಸ್ ಇಷ್ಟಪಡುವವರು, ಇದನ್ನು ಬೆಳಗ್ಗೆಯಿಂದ ಸಂಜೆಯವರೆಗೂ ತಿಂಡಿಯಾಗಿ ತಿನ್ನುತ್ತಾರೆ. ಮನೆಯ ಪಾರ್ಟಿ, ಕಾರ್ಯಕ್ರಮವಿದ್ದಾಗ ಈ ಚಿಪ್ಸ್ ಅನ್ನು ನೀಡಲಾಗುತ್ತದೆ. ಆದರೆ ನಿಮಗೆ ತಿಳಿದಿದ್ಯಾ? ಇದರಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸೋಡಿಯಂ ಪ್ರಮಾಣವು ತುಂಬಾ ಇರುತ್ತದೆ. ಈ ಕಾರಣದಿಂದಾಗಿ, ಕೊಲೆಸ್ಟ್ರಾಲ್ ಅನ್ನು ಹೆಚ್ಚಾಗುವ ಅಪಾಯವಿದೆ.