ಹಾಗಾಗಿ ನಾವು ನಮ್ಮ ಜೀವನದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು ಎಂದು ಪೌಷ್ಟಿಕಾಂಶ ತಜ್ಞರು ಸಲಹೆ ನೀಡುತ್ತಾರೆ. ನಮ್ಮಲ್ಲಿ ಅನೇಕ ಮಂದಿಗೆ ಸಿಹಿ ತಿಂಡಿಗಳು ಮತ್ತು ಫಾಸ್ಟ್ ಫುಡ್ಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ತಿಳಿದಿದ್ದರೂ, ಕೆಲವು ಆಹಾರಗಳು ಕೆಟ್ಟದ್ದು ಎಂದು ಗೊತ್ತಿದ್ದರೂ, ನಾವು ಅವುಗಳನ್ನು ತಿನ್ನುತ್ತೇವೆ. ಇದು ನಮ್ಮ ಜೀವನದಲ್ಲಿ ಮಾಡುವ ದೊಡ್ಡ ತಪ್ಪು ಎಂದು ಪೌಷ್ಟಿಕತಜ್ಞ ಮತ್ತು ಡಯಟ್ ಇನ್ಸೈಟ್ ಸಂಸ್ಥಾಪಕ ಅಮನ್ ಪುರಿ ಅಭಿಪ್ರಾಯ ತಿಳಿಸಿದ್ದಾರೆ. ಹಾಗಾದರೆ ಆರೋಗ್ಯಕರ ಜೀವನಕ್ಕಾಗಿ ತಿನ್ನಬಾರದ ಕೆಲವು ಆಹಾರಗಳಿವೆ. ಅವು ಯಾವುವು ಎಂದು ನೋಡೋಣ ಬನ್ನಿ.
ಪ್ಯಾಕೆಟ್ ಸ್ನ್ಯಾಕ್ಸ್ ಮತ್ತು ಕ್ರಂಬ್ಸ್: ಬಿಸ್ಕತ್ತುಗಳು, ಕುಕೀಸ್, ನಮ್ಕೀನ್(mixcher), ಸಿರಿಧಾನ್ಯಗಳು, ಮ್ಯೂಸ್ಲಿ, ಚಿಪ್ಸ್ ಬೇಕರಿಯಲ್ಲಿ ಸಿಗುವ ಇತ್ಯಾದಿ ತಿಂಡಿಗಳನ್ನು ತಯಾರಿಸಲು ಸಾಮಾನ್ಯವಾಗಿ ಬಹಳಷ್ಟು ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಎಣ್ಣೆಗಳನ್ನು ಬಳಸಲಾಗುತ್ತದೆ. ಹಾಗಾಗಿ ಇದನ್ನು ನಾವು ದಿನನಿತ್ಯದ ಆಹಾರದಲ್ಲಿ ಜೊತೆಗೆ ಸೇವಿಸಿದಾಗ ಅನಗತ್ಯ ಕ್ಯಾಲೋರಿಗಳು ದೇಹಕ್ಕೆ ಸೇರುತ್ತವೆ ಮತ್ತು ಬೊಜ್ಜು ಕೂಡ ಒಂದೆಡೆ ಹೆಚ್ಚಾಗುತ್ತದೆ.
ಸಂಸ್ಕರಿಸಿದ ಮಾಂಸ ಮತ್ತು ಮಾಂಸದ ಉತ್ಪನ್ನಗಳು: ನಾವು ಹೆಚ್ಚು ಸಂಸ್ಕರಿಸಿದ ಮಾಂಸವನ್ನು ಸೇವಿಸಿದಾಗ, ನಮಗೆ ಅನೇಕ ಆರೋಗ್ಯ ಪರಿಣಾಮಗಳು ಉಂಟಾಗುತ್ತವೆ. ವಿಶೇಷವಾಗಿ ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ ನೈಟ್ರೇಟ್ ಮತ್ತು ನೈಟ್ರೈಟ್ಗಳು ಅಧಿಕವಾಗಿರುತ್ತವೆ. ನಾವು ಅವುಗಳನ್ನು ಸೇವಿಸಿದಾಗ ಅವು ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ.