Fertility Food: ಬೇಗ ಪ್ರೆಗ್ನೆಂಟ್ ಆಗ್ಬೇಕು ಅಂದ್ರೆ ಮಿಸ್ ಮಾಡದೇ ಈ ಆಹಾರಗಳನ್ನು ತಿನ್ನಿ
Food For Fertility: ತಮ್ಮದೇ ಆದ ಮಗುವನ್ನು ಹೊಂದುವ ಬಯಕೆ ಎಲ್ಲಾರಿಗೂ ಇರುತ್ತದೆ. ಅದಕ್ಕಾಗಿ ಪ್ರಯತ್ನಗಳನ್ನು ಸಹ ಮಾಡುತ್ತಾರೆ. ಆದರೆ, ತಕ್ಷಣವೇ ಗರ್ಭಿಣಿಯಾಗಲು ಸಹಾಯ ಮಾಡುವ ಕೆಲವು ರೀತಿಯ ಆಹಾರಗಳಿವೆ. ಅವುಗಳನ್ನು ಸೇವಿಸುವುದು ನಿಮಗೆ ಸಹಾಯ ಮಾಡುತ್ತದೆ. ಆ ಆಹಾರಗಳು ಯಾವುವು ಎಂಬುದು ಇಲ್ಲಿದೆ.
ಕೆಲವೊಮ್ಮೆ ಬಹಳ ಪ್ರಯತ್ನ ಮಾಡಿದರೂ ಸಹ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಆದರೆ ತಕ್ಷಣವೇ ಗರ್ಭಿಣಿಯಾಗಲು ಸಹಾಯ ಮಾಡುವ ಕೆಲವು ರೀತಿಯ ಆಹಾರಗಳಿವೆ. ಗಂಡು ಮತ್ತು ಹೆಣ್ಣು ಇಬ್ಬರೂ ಸರಿಯಾದ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ.
2/ 9
ನೀವು ಸೇವಿಸುವ ಆಹಾರದ ಆಧಾರದ ಮೇಲೆ, ನಿಮ್ಮ ಕರುಳಿನ ಆರೋಗ್ಯ, ರಕ್ತ ಪರಿಚಲನೆ, ಹಾರ್ಮೋನ್ ಸ್ರವಿಸುವಿಕೆಯು ನಿಯಮಿತವಾಗಿರುತ್ತದೆ. ಇತರ ದೈಹಿಕ ಆರೋಗ್ಯದ ಜೊತೆಗೆ, ನಿಮ್ಮ ಗರ್ಭಧರಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ.
3/ 9
ಸಾಲ್ಮನ್ ಸಾಲ್ಮನ್ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸಮೃದ್ಧವಾಗಿ ಹೊಂದಿದೆ. ಈ ಮೀನನ್ನು ಬುಲ್ ಕಾರ್ಪ್ ಎಂದೂ ಸಹ ಕರೆಯಲಾಗುತ್ತದೆ. ಈ ಮೀನುಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ, ಇದನ್ನು ಸೇವನೆ ಮಾಡುವುದರಿಂದ ಸಂತಾನೋತ್ಪತ್ತಿ ಆರೋಗ್ಯ ಸುಧಾರಿಸುತ್ತದೆ.
4/ 9
ಮಾಂಸ ನೀವು ನಾನ್ ವೆಜ್ ಪ್ರಿಯರಾಗಿದ್ದರೆ ಕೋಳಿ ಹಾಗೂ ಮೇಕೆ ಮಾಂಸ ತಿನ್ನುವುದರ ಬದಲಾಗಿ ಲಿವರ್, ಕಿಡ್ನಿ, ಮೆದುಳು, ಕರುಳು ಮುಂತಾದ ಅಂಗವನ್ನು ತಿನ್ನುವುದು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ, ಕಬ್ಬಿಣ ಹಾಗೂ ಸತು ಹೆಚ್ಚಿರುತ್ತದೆ.
5/ 9
ಮೀನು ಶೆಲ್ ಹೊಂದಿರುವ ಮೀನುಗಳನ್ನು ನೀವು ಈ ಸಮಯದಲ್ಲಿ ಸೇವಿಸಬೇಕು. ಏಡಿ, ಸೀಗಡಿ, ನಳ್ಳಿ ನಿಮ್ಮ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ
6/ 9
ಮೊಟ್ಟೆ ಮೊಟ್ಟೆಗಳಲ್ಲಿ ಪ್ರೊಟೀನ್ ಸಮೃದ್ಧವಾಗಿರುವುದರಿಂದ ಗರ್ಭಧರಿಸಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ 12 ಮತ್ತು ಇ ನಂತಹ ಪೋಷಕಾಂಶಗಳಿದ್ದು, ಇದರ ಹಳದಿ ಲೋಹದಲ್ಲಿರುವ ಪೋಷಕಾಂಶಗಳು ಸಹ ನಿಮಗೆ ಸಹಾಯ ಮಾಡುತ್ತದೆ.
7/ 9
ವಾಲ್ನಟ್ಸ್ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳನ್ನು ಈ ವಾಲ್ನಟ್ ಸಮೃದ್ಧವಾಗಿ ಹೊಂದಿದ್ದು, ಇದು ಹಾರ್ಮೋನ್ ವ್ಯತ್ಯಾಸವನ್ನು ನಿಯಂತ್ರಿಸಲು ಸಹಕಾರಿ. ಅಲ್ಲದೇ, ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಹಾಗೂ ಪುರುಷರ ವೀರ್ಯದ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ.
8/ 9
ಬೀನ್ಸ್ ಬೀನ್ಸ್ ಮತ್ತು ಮಸೂರದಂತಹ ಬೇಳೆ ಕಾಳುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿದ್ದು, ಇದು ಗರ್ಭಾಶಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ದಿನನಿತ್ಯ ನಿಮ್ಮ ಆಹಾರದಲ್ಲಿ ಸೇರಿಸುವುದು ಒಳ್ಳೆಯದು.
9/ 9
ಮೊಸರು ಮೊಸರು ಮತ್ತು ಬೆಣ್ಣೆಯಲ್ಲಿ ಕ್ಯಾಲ್ಸಿಯಂ, ಪ್ರೋಬಯಾಟಿಕ್, ವಿಟಮಿನ್ ಡಿ ಸಮೃದ್ಧವಾಗಿದ್ದು, ಗರ್ಭಾಶಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬೇಗ ಗರ್ಭಿಣಿಯಾಗಲು ಸಹಾಯ ಮಾಡುತ್ತದೆ.