ಬೇಸಿಗೆಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಮಾವಿನ ಹಣ್ಣಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಹಣ್ಣು ನೈಸರ್ಗಿಕವಾಗಿ ಹಣ್ಣಾಗಲು ಕೂಡ ಸಮಯ ಸಿಗುತ್ತಿಲ್ಲ. ಹಿಂದೆಲ್ಲಾ ರೈತರು ಮರದಲ್ಲಿರುವ ಮಾವನ್ನು ಕಿತ್ತು ಹಣ್ಣಾಗಲು ಪ್ರತ್ಯೇಕವಾಗಿ ಕೋಣೆಯಲ್ಲಿ ಇಡುತ್ತಿದ್ದರು. ಆದರೆ ಈಗ ಮಾವು ನೈಸರ್ಗಿಕವಾಗಿ ಹಣ್ಣಾಗಲು ಎಥಿಲೀನ್ ಎಂಬ ರಾಸಾಯನಿಕವನ್ನು ನೀಡಲಾಗುತ್ತಿದೆ. ಇದರಿಂದ ಮಾವು ಹಣ್ಣಾಗಲು ಪ್ರಾರಂಭವಾಗುತ್ತದೆ.