Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬಂದಾಗ, ನಾವು ತಕ್ಷಣ ಕಾಫಿ ಅಥವಾ ಟೀಯನ್ನು ನೀಡುತ್ತೇವೆ. ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ದಿನಕ್ಕೆ 2 ಅಥವಾ 3 ಬಾರಿ ಕಾಫಿ ಅಥವಾ ಟೀ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಈ ಎರಡೂ ಪಾನೀಯಗಳು ಆಮ್ಲೀಯವಾಗಿವೆ.

First published:

  • 17

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಟೀ ಮತ್ತು ಕಾಫಿ ಹೆಚ್ಚಿನ ಭಾರತೀಯರ ನೆಚ್ಚಿನ ಪಾನೀಯಗಳಾಗಿವೆ. ಬೆಳಗ್ಗೆ ಎದ್ದ ಮೇಲೆ ಇವುಗಳಲ್ಲಿ ಯಾವುದಾದರೂ ಒಂದನ್ನು ಕುಡಿಯುವುದರಿಂದ ಅವರ ದಿನವು ಆರಂಭವಾಗುತ್ತದೆ. ಅದೇ ರೀತಿ ನಾವು ಟೆನ್ಷನ್ ಮತ್ತು ಒತ್ತಡದಲ್ಲಿದ್ದಾಗಲೆಲ್ಲ ಟೀ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತೇವೆ.

    MORE
    GALLERIES

  • 27

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬಂದಾಗ, ನಾವು ತಕ್ಷಣ ಕಾಫಿ ಅಥವಾ ಟೀಯನ್ನು ನೀಡುತ್ತೇವೆ. ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ದಿನಕ್ಕೆ 2 ಅಥವಾ 3 ಬಾರಿ ಕಾಫಿ ಅಥವಾ ಟೀ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಈ ಎರಡೂ ಪಾನೀಯಗಳು ಆಮ್ಲೀಯವಾಗಿವೆ. ಅನೇಕ ಮಂದಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಇವೆರಡೂ ಗ್ಯಾಸ್ಟ್ರಿಕ್ಟ್ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು. ಹಾಗಾಗಿ ಹೆಚ್ಚು ಟೀ ಅಥವಾ ಕಾಫಿ ಕುಡಿಯುವುದು ನಮ್ಮ ಆರೋಗ್ಯಕ್ಕೆ ಹಾನಿಕರ.

    MORE
    GALLERIES

  • 37

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಕೆಲವು ಮಂದಿ ಅಸಿಟಿಕ್ ಗುಣವನ್ನು ಕಡಿಮೆ ಮಾಡಲು ಚಹಾ ಅಥವಾ ಕಾಫಿ ಕುಡಿಯುವ ಮುನ್ನ ಸ್ವಲ್ಪ ನೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಗಳ ಮುಖ್ಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ.ಪ್ರಿಯಾಂಕಾ ರೋಹಟ್ಕಿ ಈ ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 47

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಅಷ್ಟಕ್ಕೂ ಟೀ, ಕಾಫಿ ತೆಗೆದುಕೊಳ್ಳುವ ಮುನ್ನ ನೀರು ಕುಡಿದರೆ ಅಪಾಯ ಕಡಿಮೆಯಾಗುತ್ತದೆಯೇ? ಡಾ.ಪ್ರಿಯಾಂಕಾ ರೋಹಟ್ಕಿ ಚಹಾದ ಆಮ್ಲೀಯ ಗುಣದ ಬಗ್ಗೆ ಮಾತನಾಡುತ್ತಾರೆ. ಅಂದರೆ ಈ ಪಾನೀಯವನ್ನು ಕುಡಿಯುವಾಗ ಅದು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ಟ್ವನ್ನು ಸೃಷ್ಟಿಸುತ್ತದೆ. ಹಾಗೆಯೇ ಚಹಾ ಮತ್ತು ಕಾಫಿ ಎರಡೂ ಹೊಟ್ಟೆಯ ಆಮ್ಲವನ್ನು ಉತ್ಪತ್ತಿ ಮಾಡುತ್ತವೆ. ಚಹಾದ pH ಮೌಲ್ಯವು 6 ಮತ್ತು ಕಾಫಿಯ pH ಮೌಲ್ಯವು 5 ಆಗಿದೆ. ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಅಥವಾ ಹುಣ್ಣುಗಳಂತಹ ಕೆಲವು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಆದರೆ ಚಹಾ ಕುಡಿಯುವ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಅದರ ಆಮ್ಲೀಯ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಚಹಾ ಕುಡಿಯುವ ಮೊದಲು ನೀರು ಕುಡಿಯುವುದರಿಂದ ಕರುಳಿನಲ್ಲಿ ಪದರ ಉಂಟಾಗುತ್ತದೆ. ಈ ಪದರವು ಚಹಾ ಕುಡಿಯುವ ಆಮ್ಲೀಯ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

    MORE
    GALLERIES

  • 57

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಚಹಾದ ದುಷ್ಪರಿಣಾಮಗಳು: ಟ್ಯಾನಿನ್ ಚಹಾ ಮತ್ತು ಕಾಫಿಯಲ್ಲಿ ಕಂಡುಬರುತ್ತದೆ. ಇದರಿಂದ ಈ ಎರಡೂ ಪಾನೀಯಗಳ ರುಚಿ ಕಹಿಯಾಗುತ್ತದೆ. ಈ ವಸ್ತುವಿನ ಉಪಸ್ಥಿತಿಯಿಂದಾಗಿ ಚಹಾ ಅಥವಾ ಕಾಫಿ ಕುಡಿಯುವಾಗ ಸೌಮ್ಯವಾದ ಮಾದಕತೆಯನ್ನು ಅನುಭವಿಸುತ್ತಾರೆ. ಟ್ಯಾನಿನ್ ಸಹ ಕರುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ವಾಕರಿಕೆ, ವಾಂತಿ, ಹೊಟ್ಟೆನೋವಿನಂತಹ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.

    MORE
    GALLERIES

  • 67

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಅಲ್ಲದೆ ಚಹಾವು ಬಾಯಿಯ ಮತ್ತು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಎಲ್ಲಾ ನಕಾರಾತ್ಮಕ ಪರಿಣಾಮಗಳು ನಾವು ಒಂದು ದಿನದಲ್ಲಿ ಎಷ್ಟು ಚಹಾವನ್ನು ಕುಡಿಯುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಚಹಾ ಕುಡಿಯುವ ಮುನ್ನ ನೀರು ಕುಡಿಯುವುದರಿಂದ ದೇಹದ PH ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    MORE
    GALLERIES

  • 77

    Healthy Drinks: ಚಹಾ ಅಥವಾ ಕಾಫಿ ಕುಡಿಯೋ ಮುಂಚೆ ನೀರು ಕುಡಿಯುವುದು ಒಳ್ಳೆಯದಾ? ಈ ಬಗ್ಗೆ ತಜ್ಞರು ಹೇಳುವುದೇನು?

    ಅಲ್ಲದೆ ನೀರು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸುತ್ತದೆ. ಏಕೆಂದರೆ ನೀರು ಕುಡಿಯುವುದರಿಂದ ಬಾಯಿಯಲ್ಲಿ ಪದರವನ್ನು ಸೃಷ್ಟಿಸುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀವು ಚಹಾ ಅಥವಾ ಕಾಫಿ ಕುಡಿಯುವ ಸುಮಾರು 15 ನಿಮಿಷಗಳ ಮುನ್ನ ನೀರನ್ನು ಕುಡಿದರೆ, ಅದು ಈ ಪಾನೀಯಗಳಲ್ಲಿನ ಆಮ್ಲವನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದ್ದಾರೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES