ಎಲೆಕೋಸು, ಹೂಕೋಸು, ಕೋಸುಗಡ್ಡೆ. ಎಲೆಕೋಸು, ಹೂಕೋಸು, ಕೋಸುಗಡ್ಡೆ ಇತ್ಯಾದಿಗಳು ಈ ರೀತಿಯ ಕ್ರೂಸಿಫೆರಸ್ ತರಕಾರಿಗಳಲ್ಲಿ ಕಂಡುಬರುತ್ತವೆ. ಹೂಕೋಸುಗಳಲ್ಲಿ ಹುಳುಗಳನ್ನು ನೀವು ಗಮನಿಸಬಹುದು. ಸಾಮಾನ್ಯವಾಗಿ ನಾವು ಹೂಕೋಸು ಬಿಸಿ ನೀರಿಗೆ ಹಾಕಿದ ನಂತರ ಬಳಸುತ್ತೇವೆ. ಆದ್ದರಿಂದ, ಕ್ರೂಸಿಫೆರಸ್ ತರಕಾರಿಗಳನ್ನು ಬೇಯಿಸದೇ ತಿನ್ನಬಾರದು. ಅಲ್ಲದೇ ಈ ತರಕಾರಿಗಳನ್ನು ಬೇಯಿಸದೇ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಮೊಳಕೆ: ನಮ್ಮಲ್ಲಿ ಅನೇಕ ಮಂದಿ ಮೊಳಕೆ ಕಾಳನ್ನು ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಹಾಗೆ ತಿನ್ನುವುದು ತಪ್ಪು. ಏಕೆಂದರೆ ಮೊಳಕೆಯೊಡೆದ ಕಾಳುಗಳು ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಅಲ್ಲದೇ ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸದೇ ತಿಂದರೆ ಜೀರ್ಣವಾಗುವುದು ಕಷ್ಟವಾಗುತ್ತದೆ. ಆದರೆ ಮೊಳಕೆ ಕಾಳುಗಳನ್ನು ಬೇಯಿಸುವುದು ಅವುಗಳ ವಿಟಮಿನ್ ಸಿ ಅಂಶವನ್ನು ಕಡಿಮೆ ಮಾಡುತ್ತದೆಯೇ ಎಂದು ನೀವು ಕೇಳಬಹುದು. ಹಾಗಾಗಿ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವಾಗ ಅವುಗಳಿಗೆ ನಿಂಬೆರಸ, ಟೊಮೆಟೊ ಇತ್ಯಾದಿಗಳನ್ನು ಸೇರಿಸಿದರೆ ಪ್ರಯೋಜನಕಾರಿ ಆಗಿದೆ.