High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಜಿಟಿ, ಜಿಟಿ ಮಳೆಯಾಗುತ್ತಿದೆ. ಈ ಕೂಲ್ ವೆದರ್ಗೆ ಮನೆಯಲ್ಲಿ ಬಿಸಿ, ಬಿಸಿಯಾಗಿ ಟೇಸ್ಟಿ ಪಾಲಕ್ ಅಲೂ ಕಟ್ಲೆಟ್ ಮಾಡಿ ಮನೆಮಂದಿಯಲ್ಲಾ ಕುಳಿತು ಸವಿಯಿರಿ. ಅಷ್ಟಕ್ಕೂ ಪಾಲಕ್ ಕಟ್ಲೆಟ್ ಮಾಡುವುದೇಗೆ ಅಂತೀರಾ? ನಿಮಗಾಗಿ ಇಲ್ಲಿದೆ ನೋಡಿ ಈ ರೆಸಿಪಿ.

First published:

  • 18

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಅನೇಕ ಮಂದಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕಟ್ಲೆಟ್ ಕೂಡ ಒಂದು. ಅದರಲ್ಲಿಯೂ ಎಲ್ಲರಿಗೂ ತಿಳಿದಿರುವಂತೆ ಪಾಲಕ್ ಸೊಪ್ಪು ಆರೋಗ್ಯಕರವಾಗಿರುವುದರ ಜೊತೆಗೆ ಪೌಷ್ಟಿಕಾಂಶದಿಂದ ಕೂಡಿದೆ. ಇನ್ನೂ ಪಾಲಕ್ ಸೊಪ್ಪು, ಆಲೂಗಡ್ಡೆ ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ಮಾಡುವ ಕಟ್ಲೆಟ್ ಮಕ್ಕಳಿಂದ ಹಿಡಿದು ದೊಡ್ಡವರರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.

    MORE
    GALLERIES

  • 28

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಸದ್ಯ ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಜಿಟಿ, ಜಿಟಿ ಮಳೆಯಾಗುತ್ತಿದೆ. ಈ ಕೂಲ್ ವೆದರ್ಗೆ ಮನೆಯಲ್ಲಿ ಬಿಸಿ, ಬಿಸಿಯಾಗಿ ಟೇಸ್ಟಿ ಪಾಲಕ್ ಅಲೂ ಕಟ್ಲೆಟ್ ಮಾಡಿ ಮನೆಮಂದಿಯಲ್ಲಾ ಕುಳಿತು ಸವಿಯಿರಿ. ಅಷ್ಟಕ್ಕೂ ಪಾಲಕ್ ಕಟ್ಲೆಟ್ ಮಾಡುವುದೇಗೆ ಅಂತೀರಾ? ನಿಮಗಾಗಿ ಇಲ್ಲಿದೆ ನೋಡಿ ಈ ರೆಸಿಪಿ.

    MORE
    GALLERIES

  • 38

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಪಾಲಕ್ ಆಲೂ ಕಟ್ಲೆಟ್ ಮಾಡಲು ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ – 2, ಗ್ರೀನ್ ಪಾಲಕ್ ಸೊಪ್ಪು - 1 ಕಪ್, ಈರುಳ್ಳಿ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಜೀರಿಗೆ - 1/4 ಚಮಚ, ಗರಂ ಮಸಾಲಾ - 1 ಚಮಚ, ಅರಿಶಿನ ಪುಡಿ - ಒಂದು ಚಿಟಿಕೆ, ಅಕ್ಕಿ ಹಿಟ್ಟು - 1 ಚಮಚ, ಮೆಣಸಿನ ಪುಡಿ - 1 ಚಮಚ, ಉಪ್ಪು, ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು.

    MORE
    GALLERIES

  • 48

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಪಾಲಕ್ ಆಲೂ ಕಟ್ಲೆಟ್ ಮಾಡುವ ವಿಧಾನ: ಮೊದಲು, ಆಲೂಗಡ್ಡೆಯನ್ನು ತೆಗೆದುಕೊಂಡು ಪಾತ್ರೆಯಲ್ಲಿ ನೀರಿನೊಂದಿಗೆ ಕುದಿಸಿ. ನಂತರ ಅವುಗಳನ್ನು ಸಿಪ್ಪೆಯನ್ನು ತೆಗೆಯಿರಿ. ನಂತರ ಅದನ್ನು ಪಕ್ಕಕ್ಕೆ ಇಡಿ.

    MORE
    GALLERIES

  • 58

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಈ ಮಧ್ಯೆ, ಈರುಳ್ಳಿ ಮತ್ತು ಪಾಲಕ್ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ ನುಣ್ಣಗೆ ಕತ್ತರಿಸಿಟ್ಟು ಕೊಳ್ಳಿ. ಜೊತೆಗೆ ಕಟ್ಲೆಟ್ ತಯಾರಿಸಲು ಬೇಕಾದ ಇತರ ಪದಾರ್ಥಗಳನ್ನು ಇಟ್ಟುಕೊಳ್ಳಿ. ಈಗ ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.

    MORE
    GALLERIES

  • 68

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಅದಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಪಾಲಕ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಗರಂ ಮಸಾಲ, ಅರಿಶಿನ ಪುಡಿ, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಟ್ಲೆಟ್ ಮಿಶ್ರಣವನ್ನು ಮಾಡಿ.

    MORE
    GALLERIES

  • 78

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಅಷ್ಟರಲ್ಲಿ ಕಟ್ಲೆಟ್ಗಳನ್ನು ಹುರಿಯಲು ದೊಡ್ಡ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಕಾಯುತ್ತಿದ್ದಂತೆ ತಯಾರಾದ ಕಟ್ಲೆಟ್ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ಮಾಡಿಕೊಂಡು ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

    MORE
    GALLERIES

  • 88

    High Protein Snacks: ಬೆಂಗಳೂರಿಗರೇ, ಕೂಲ್​ ಆಗಿರುವ ವೆದರ್​ಗೆ ಬಿಸಿ, ಬಿಸಿ ಪಾಲಕ್​ ಆಲೂ ಕಟ್ಲೇಟ್​ ಮಾಡಿ ತಿನ್ನಿ!

    ಈ ರುಚಿಕರವಾದ ಸ್ಪಿನಾಚ್-ರೋಲ್ ಕಟ್ಲೆಟ್ ಅನ್ನು ನಿಮಗೆ ಇಷ್ಟವಾಗುವ ನೆಚ್ಚಿನ ಚಟ್ನಿ ಮತ್ತು ಸಾಸ್ನೊಂದಿಗೆ ಪ್ಲೇಟ್ನಲ್ಲಿ ಬಡಿಸಿಕೊಂಡು ಸವಿಯಿರಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)್​

    MORE
    GALLERIES