ಬೆಣ್ಣೆಯನ್ನು ಬೇರ್ಪಡಿಸಿ: ತುಪ್ಪ ಮಾಡಲು ಬೆಣ್ಣೆಯನ್ನು ಮೊದಲು ತೆಗೆಯಬೇಕು. ಹಾಗಾಗಿ ರೆಫ್ರಿಜರೇಟರ್ನಿಂದ ಮೊಸರು ಹಾಕಿದ ಕೆನೆ ಹೆಪ್ಪಾಗಲು 2 ರಿಂದ 3 ಗಂಟೆಗಳ ಕಾಲ ನಾರ್ಮಲ್ ಉಷ್ಣಾಂಶದಲ್ಲಿಡಬೇಕು. ನಂತರ ಮಿಕ್ಸರ್ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹಾಗೆ ರುಬ್ಬಿದಾಗ ಬೆಣ್ಣೆ ಬೇರ್ಪಟ್ಟು ಗಟ್ಟಿಯಾಗುತ್ತದೆ. ನಂತರ ದೊಡ್ಡ ಉಂಡೆ ಆಗುವವರೆಗೂ ಬೆಣ್ಣೆಯನ್ನು ಚೆನ್ನಾಗಿ ರುಬ್ಬಿಕೊಳ್ಳಿ.