ಈ ಫೋಟೋ ನೋಡಿದರೆ ಇವು ಅಣಬೆಗಳು ಎಂದು ನಿಮಗೆ ಅರ್ಥವಾಗುತ್ತದೆ. ಆದರೆ.. ಇವುಗಳಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅಪರೂಪದ ಮತ್ತು ರುಚಿಕರವಾಗಿರುವ ಈ ಅಣಬೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.. ಭಾರತದಲ್ಲಿ ಈ ಅಣಬೆಗಳಿಗೆ ಪ್ರತಿ ಕೆ.ಜಿ.ಗೆ ರೂ.10,000ದಿಂದ ರೂ.30,000 ರೂಪಾಯಿ ಇದೆ. ಇದರ ಬೆಲೆ ಅವುಗಳನ್ನು ಪ್ಯಾಕ್ ಮಾಡುವ ಮತ್ತು ಮಾರಾಟ ಮಾಡುವ ಕಂಪನಿಯ ಬ್ರಾಂಡ್ ಮೇಲೆ ಅವಲಂಬಿಸಿರುತ್ತದೆ. ಈ ಅಣಬೆ ಬೆಲೆ ಏಕೆ ದುಬಾರಿ? ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ (image credit - twitter - @sidhshuk)
ಇವು ನಮ್ಮ ಭಾರತದಲ್ಲಿಯೂ ಬೆಳೆಯುತ್ತಿವೆ. ಉತ್ತರಾಖಂಡದ ಕೋನಿಫರ್ ಕಾಡುಗಳು, ಕಾಂಗ್ರಾ ಕಣಿವೆ, ಮನಾಲಿ, ಹಿಮಾಚಲ ಪ್ರದೇಶ,ಉತ್ತರಾಂಚಲ ಹಾಗೂ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತವೆ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಅವು ನೈಸರ್ಗಿಕವಾಗಿ ಬೆಳೆಯುತ್ತವೆ. ಸ್ಥಳೀಯರು ಅವುಗಳನ್ನು ಸಂಗ್ರಹಿಸಿ ಅಮೆರಿಕಾ ಮತ್ತು ಯುರೋಪ್ ಸೇರಿದಂತೆ ವಿಶ್ವದ ದೇಶಗಳಿಗೆ ರಫ್ತು ಮಾಡುತ್ತಾರೆ. . (image credit - twitter - @O_arra_)