Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

Foods For Lunch: ಹೆಲ್ತ್ಸೈಟ್ ಪ್ರಕಾರ, ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಲ್ಲದ ಆಹಾರವನ್ನು ಸೇವಿಸುವುದು ಆರೋಗ್ಯಕರ ಜೀವನಕ್ಕೆ ಅವಶ್ಯಕವಾಗಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಕೆಲ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ. ಆಹಾರಗಳ ಲಿಸ್ಟ್ ಇಲ್ಲಿದೆ.

First published:

  • 18

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ನಾವು ತಿನ್ನುವ ಆಹಾರ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಿದರೆ, ನಮ್ಮ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ನಾವು ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ, ನಮ್ಮ ದೇಹ ಮತ್ತು ಮನಸ್ಸು ಅನಾರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    MORE
    GALLERIES

  • 28

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಇಂತಹ ಪರಿಸ್ಥಿತಿಯಲ್ಲಿ, ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ತಿನ್ನುವುದು ಮತ್ತು ಕುಡಿಯುವುದು ಉತ್ತಮ. ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಆರೋಗ್ಯಕರ ಜೀವನವನ್ನು ನಡೆಸಬಹುದು.

    MORE
    GALLERIES

  • 38

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಹೆಲ್ತ್‌ಸೈಟ್ ಪ್ರಕಾರ, ನಿಮ್ಮ ಆರೋಗ್ಯಕ್ಕೆ ಹಾನಿ ಮಾಡದ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ಜೀವನಕ್ಕೆ ಕಾರಣವಾಗಬಹುದು. ಹೆಚ್ಚಿನ ಜನರು ಪ್ರತಿದಿನ ಬೆಳಗ್ಗೆ ಮನೆಯಲ್ಲಿ ಉಪಹಾರವನ್ನು ತಿನ್ನುತ್ತಾರೆ, ಆದರೆ ಮಧ್ಯಾಹ್ನದ ಊಟಕ್ಕೆ ಹೊರಗಡೆ ಹೋಗುತ್ತಾರೆ. ಆ ಸಮಯದಲ್ಲಿ ಕೆಲ ಆಹಾರಗಳನ್ನು ಸೇವಿಸಬಾರದು.

    MORE
    GALLERIES

  • 48

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಕರಿದ ಆಹಾರಗಳು
    ಎಣ್ಣೆ ಮತ್ತು ಕರಿದ ಪದಾರ್ಥಗಳನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕರಿದ ಆಹಾರಗಳ ಬದಲಿಗೆ ಹಣ್ಣುಗಳು ಅಥವಾ ಇತರ ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಉತ್ತಮ.

    MORE
    GALLERIES

  • 58

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಸ್ಯಾಂಡ್‌ವಿಚ್‌ಗಳು
    ನೀವು ಸ್ಯಾಂಡ್‌ವಿಚ್‌ಗಳನ್ನು ಎಷ್ಟೇ ಆರೋಗ್ಯಕರ ಎಂದು ಸೇವಿಸಿದರೂ, ಅಂಗಡಿಯಲ್ಲಿ ಖರೀದಿಸಿದ ಸ್ಯಾಂಡ್‌ವಿಚ್‌ಗಳು ಆರೋಗ್ಯಕ್ಕೆ ಹಾನಿಕಾರಕ. ಟೊಮ್ಯಾಟೋ, ಎಲೆಕೋಸು ಇತ್ಯಾದಿಗಳಲ್ಲಿ ಬ್ಯಾಕ್ಟೀರಿಯಾ ಇರಬಹುದು ಎಂಬುದನ್ನು ನೆನಪಿನಲ್ಲಿಡಿ. ಇದು ನಿಮ್ಮ ಹೊಟ್ಟೆಗೆ ಹೋದರೆ, ನಿಮ್ಮ ಆರೋಗ್ಯ ಹದಗೆಡುತ್ತದೆ.

    MORE
    GALLERIES

  • 68

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಪರೋಟ
    ಮಧ್ಯಾಹ್ನ ಹಲವು ಬಾರಿ ಹೋಟೆಲ್ ನಲ್ಲಿ ಸಿಗುವ ಪರೋಟ, ಪಾಸ್ತಾ, ಬರ್ಗರ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಪಾಸ್ತಾ ಅಥವಾ ಪರೋಟಾದಲ್ಲಿ ಫೈಬರ್ ಇರುವುದಿಲ್ಲ ಮತ್ತು ಹಿಟ್ಟಿನಿಂದ ತಯಾರಿಸಿದ ಈ ಉತ್ಪನ್ನಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

    MORE
    GALLERIES

  • 78

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಬಜ್ಜಿ
    ಕೆಲವರು ಮಧ್ಯಾಹ್ನ ಹಸಿವಾದಾಗ ರಸ್ತೆ ಬದಿಯ ಆಲೂಗಡ್ಡೆ ಬಜ್ಜಿ, ಚಿಕನ್ ಬಜ್ಜಿ ತಿನ್ನುತ್ತಾರೆ. ಬಹುಶಃ ಹಳೆಯ ಎಣ್ಣೆಯಲ್ಲಿ ಇದನ್ನು ಫ್ರೈ ಮಾಡಲಾಗುತ್ತದೆ. ಇಂತಹ ಆಹಾರಗಳು ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಈ ಕಾರಣದಿಂದಾಗಿ, ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಉಂಟಾಗುತ್ತದೆ.

    MORE
    GALLERIES

  • 88

    Food Tips: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

    ಹಣ್ಣು ಮತ್ತು ತರಕಾರಿ ಜ್ಯೂಸ್
    ಮಧ್ಯಾಹ್ನದ ಊಟದ ಜೊತೆಗೆ ತರಕಾರಿ ಅಥವಾ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ಅದೂ ಅಲ್ಲದೆ ಹಣ್ಣಿನ ಜ್ಯೂಸ್ ಅಥವಾ ತರಕಾರಿ ಜ್ಯೂಸ್ ಆರೋಗ್ಯಕರವಲ್ಲ ಮತ್ತು ಸಕ್ಕರೆ, ಎಸೆನ್ಸ್ ನಂತಹ ಅನವಶ್ಯಕ ಪದಾರ್ಥಗಳು ಇರುವ ಕಾರಣ ಆರೋಗ್ಯ ಹಾಳಾಗುತ್ತದೆ.

    MORE
    GALLERIES