ಪಾಲಕ್ ಮತ್ತು ಮೊಟ್ಟೆ ಎರಡರಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿದೆ. ಹಾಗಾಗಿ ವೈದ್ಯರು ನಿಮ್ಮ ದೈನಂದಿನ ಆಹಾರದಲ್ಲಿ ಪಾಲಕ್ ಮತ್ತು ಮೊಟ್ಟೆ ಸೇವಿಸಲು ಶಿಫಾರಸು ಮಾಡುತ್ತಾರೆ. ಎರಡು ಪೌಷ್ಟಿಕಾಂಶ ಹೊಂದಿರುವ ಪದಾರ್ಥಗಳಾಗಿದ್ದು, ಇದನ್ನು ಬಳಸಿಕೊಂಡು ಮನೆಯಲ್ಲಿ ರುಚಿಕರವಾದ ಗ್ರೇವಿಯನ್ನು ತಯಾರಿಸಬಹುದು. ಅದು ಹೇಗೆ ಅಂತೀರಾ? ನಾವಿಂದು ನಿಮಗೆ ಪಲಾಕ್ ಎಗ್ ಕರಿ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ ನೋಡಿ.
ರುಬ್ಬಿದ ಪಾಲಕ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ. ಮಸಾಲೆಗಳು ವಾಸನೆ ಬರಲು ಆರಂಭಿಸಿದಾಗ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷಗಳ ಕಾಲ ಹುರಿಯಿರಿ. ಕೊನೆಗೆ, ಬೇಯಿಸಿದ ಮೊಟ್ಟೆಗಳನ್ನು ಎರಡು ತುಂಡುಗಳಾಗಿ ಕತ್ತರಿಸಿ ಒಟ್ಟಿಗೆ ಬೆರೆಸಿ ಮತ್ತು ಒಲೆಯಿಂದ ಇಳಿಸಿ. ಆಗ ರುಚಿಕರವಾದ 'ಪಾಲಕ್ ಎಗ್ ಕರಿ' ಸವಿಯಲು ಸಿದ್ಧ. ಇದನ್ನು ಅನ್ನ ಮತ್ತು ಚಪಾತಿಯೊಂದಿಗೆ ತಿನ್ನಬಹುದು.