Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

Stomach Pain : ಅಜವಾನವನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಕಹಿಯಾಗಿರುವುದರಿಂದ ಹೆಚ್ಚಾಗಿ ಬಳಸಲಾಗುವುದಿಲ್ಲ. ಆದರೀಗ ಇದರ ಬಗ್ಗೆ ಮನೆಗೆ ಮಾಹಿತಿ ದೊರೆತಿರುವುದರಿಂದ ನೀವು ಹೆಚ್ಚಾಗಿ ಬಳಸಿಕೊಳ್ಳಬಹುದು. ಮಕ್ಕಳಾಗಲಿ, ದೊಡ್ಡವರಾಗಲಿ.. ಹೊಟ್ಟೆ ನೋವು, ಬೇಧಿ ಸಮಸ್ಯೆಗಳಿಗೆ ಈ ಟಿಪ್ಸ್ ಪಾಲಿಸುವುದು ಉತ್ತಮ.

First published:

  • 18

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಹೊಟ್ಟೆನೋವು: ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಅನೇಕ ಬಾರಿ ಹೊಟ್ಟೆ ನೋವು ಎಂದು ಹೇಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ವಿವಿಧ ಮಾತ್ರೆಗಳನ್ನು ಕೊಡಬೇಡಿ. ಹೀಗೆ ಪದೇ ಪದೇ ಮಾತ್ರೆಗಳನ್ನು ನೀಡಿದರೆ ಅವರ ಹೊಟ್ಟೆಯಲ್ಲಿ ಸ್ವಾಭಾವಿಕವಾಗಿ ಇರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದು ದೀರ್ಘಕಾಲದ ಕಿಬ್ಬೊಟ್ಟೆಯ ನೋವಿನ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಹೊಟ್ಟೆ ನೋವನ್ನು ಕಡಿಮೆ ಮಾಡಲು ಬ್ಯಾಕ್ಟೀರಿಯಾಗಳು ಸಾಯದಂತೆ ತಡೆಯುವುದು ಮುಖ್ಯ. ಅದಕ್ಕೆ ಆಯುರ್ವೇದದಲ್ಲಿ ಒಳ್ಳೆಯ ಉಪಾಯವಿದೆ.

    MORE
    GALLERIES

  • 28

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ನೀವು ಅಜವಾನ (ajwain) ಎಂಬ ಹೆಸರನ್ನು ಕೇಳಿರಬಹುದು. ಇದು ನೋಡಲು ಜೀರಿಗೆ ಅಥವಾ ಇಂಗಿನಂತೆ ಕಾಣುತ್ತದೆ. ಆದರೆ ತುಂಬಾ ಚಿಕ್ಕದು. ಇದರ ವಾಸನೆ ಕಟುವಾಗಿರುತ್ತದೆ. ರುಚಿ ಸ್ವಲ್ಪ ಕಹಿಯಾಗಿರುತ್ತದೆ. ಅನೇಕ ಅಂಗಡಿಗಳಲ್ಲಿ ಅಜವಾನ ಪ್ಯಾಕೆಟ್ಗಳನ್ನು ಮಾರಾಟ ಮಾಡಲಾಗುತ್ತದೆ. ಈ ಪ್ಯಾಕೆಟ್ ಅನ್ನು ಖರೀದಿಸಿ ಮನೆಯಲ್ಲಿ ಬಾಟಲಿಯಲ್ಲಿ ಇಡಬಹುದು. ಇದರಿಂದ ಅವು ಬೇಗ ಹಾಳಾಗುವುದಿಲ್ಲ. ಇದು ವರ್ಷಪೂರ್ತಿ ಕೀಟ ಮುಕ್ತವಾಗಿ ಉಳಿಯುತ್ತದೆ. ಆದ್ದರಿಂದ ಸ್ವಲ್ಪ ಹೆಚ್ಚಾಗಿಯೇ ಖರೀದಿಸಬಹುದು. ಇದು ಹೊಟ್ಟೆ ನೋವಿಗೆ ಸರಿಯಾದ ಪರಿಹಾರವನ್ನು ನೀಡುತ್ತದೆ.

    MORE
    GALLERIES

  • 38

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಅಜವಾನವನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದು ಕಹಿಯಾಗಿರುವುದರಿಂದ ಹೆಚ್ಚಾಗಿ ಬಳಸಲಾಗುವುದಿಲ್ಲ. ಆದರೀಗ ಇದರ ಬಗ್ಗೆ ಮನೆಗೆ ಮಾಹಿತಿ ದೊರೆತಿರುವುದರಿಂದ ನೀವು ಹೆಚ್ಚಾಗಿ ಬಳಸಿಕೊಳ್ಳಬಹುದು. ಮಕ್ಕಳಾಗಲಿ, ದೊಡ್ಡವರಾಗಲಿ.. ಹೊಟ್ಟೆ ನೋವು, ಬೇಧಿ ಸಮಸ್ಯೆಗಳಿಗೆ ಈ ಟಿಪ್ಸ್ ಪಾಲಿಸುವುದು ಉತ್ತಮ.

    MORE
    GALLERIES

  • 48

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಇದನ್ನು ಮಾಡಿ: ಮೊದಲು, 1 ಟೀ ಸ್ಪೂನ್ ಅಜವಾನವನ್ನು ಚೆನ್ನಾಗಿ ಫ್ರೈ ಮಾಡಿ. ಅದು ತಣ್ಣಗಾದ ನಂತರ ಕೈಗೆ ತೆಗೆದುಕೊಂಡು ಚಿಟಿಕೆ ಉಪ್ಪು ಹಾಕಿ, ಬಾಯಿಯೊಳಗೆ ಹಾಕಿಕೊಂಡು ನುಂಗಿಕೊಂಡು ನಂತರ ಬಿಸಿ ನೀರನ್ನು ಕುಡಿಯಿರಿ. ಇದು ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ. ಹೊಟ್ಟೆ ನೋವು ಕಡಿಮೆಯಾಗುತ್ತದೆ.

    MORE
    GALLERIES

  • 58

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಇನ್ನೊಂದು ಮಾರ್ಗವೆಂದರೆ ಅನ್ನದಲ್ಲಿ ಉಪ್ಪು ಮತ್ತು ಅಜವಾನ ಹಾಕಿಕೊಂಡು ತಿನ್ನಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಹೊಟ್ಟೆ ನೋವಿನಿಂದ ಉಂಟಾಗುವ ಮಂದತೆಯನ್ನು ಸಹ ನಿವಾರಿಸುತ್ತದೆ. ಅನ್ನದ ಜೊತೆಗೆ ಸೇವಿಸುವುದರಿಂದ ಶಕ್ತಿ ದೊರೆಯುತ್ತದೆ. ಇದೇನೂ ಹೊಸ ಟಿಪ್ಸ್ ಏನಲ್ಲ. ನಮ್ಮ ಹಿರಿಯರು ಇದನ್ನು ಮೊದಲು ಮಾಡುತ್ತಿದ್ದರು. ಔಷಧಿಗಳ ಬದಲಿಗೆ ಈ ಟಿಪ್ಸ್ಗಳೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

    MORE
    GALLERIES

  • 68

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಈ ಎಲ್ಲಾ ಹೊಟ್ಟೆಯ ಗಾಳಿಯನ್ನು ಹೊರಹಾಕುತ್ತದೆ. ಉಬ್ಬುವುದು ಮತ್ತು ಗ್ಯಾಸ್ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆ ನೋವು ಮತ್ತು ಭೇದಿಯಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಜವಾನ ಜೊತೆ ಉಪ್ಪನ್ನು ಮಿಶ್ರಣ ಮಾಡಿದರೆ ಅದು ಎಲ್ಲದ್ದಕ್ಕೂ ಕೂಡ ಸೆಟ್ ಆಗುತ್ತದೆ.

    MORE
    GALLERIES

  • 78

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    ಈ ಟಿಪ್ಸ್ಗಳನ್ನು ಫಾಲೋ ಮಾಡುವ ಮೂಲಕ, ಸಿಹಿಯಾದ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಇದರಿಂದ ಹೊಟ್ಟೆ ನೋವಿನ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಬಟಾಣಿ, ಮೊಟ್ಟೆ, ಬೀನ್ಸ್ ಮುಂತಾದ ಹೆಚ್ಚಿನ ಅನಿಲವನ್ನು ಉತ್ಪಾದಿಸುವ ಆಹಾರಗಳನ್ನು ಸಹ ಮಿತವಾಗಿ ಸೇವಿಸಬೇಕು. ಇದು ಕೂಡ ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು.

    MORE
    GALLERIES

  • 88

    Stomach Pain: ಹೊಟ್ಟೆ ನೋವಿಗೆ ಆಯುರ್ವೇದದ ಸಲಹೆ ಪಡೆಯಿರಿ; ಸಮಸ್ಯೆಯಿಂದ ಶೀಘ್ರ ಮುಕ್ತರಾಗಿ

    Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯವಾಗಿದೆ. ಇದು ಎಲ್ಲರಿಗೂ ಸಮಾನವಾಗಿ ಅನ್ವಯಿಸದಿರಬಹುದು. ಫಲಿತಾಂಶಗಳು ವ್ಯಕ್ತಿಯ ಆರೋಗ್ಯವನ್ನು ಅವಲಂಬಿಸಿರುತ್ತದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ಗಮನಿಸಿ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೊದಲು.. ಸಂಬಂಧಿತ ತಜ್ಞರಿಂದ ಸಲಹೆ ಪಡೆಯಿರಿ.

    MORE
    GALLERIES