ಜೀವನದಲ್ಲಿ ಎಲ್ಲಾ ಸುಖ, ಸಂತೋಷ ಹಾಗೂ ಸಿರಿವಂತಿಕೆ ಹೊಂದಿರುವವರೇ ಹೆಚ್ಚು. ಸುಖಿಗಳು ಹಾಗೂ ಸಂತೋಷಿಗಳು ಎಂಬುದಾಗಿ ತಪ್ಪು ಕಲ್ಪನೆಯನ್ನು ಹೊಂದಿರುತ್ತೇವೆ. ಕನಸಿನ ಉದ್ಯೋಗ, ಖರ್ಚುಮಾಡುವ ಅನುಕೂಲ, ಬೇಕಾದ್ದನ್ನು ಪಡೆದುಕೊಳ್ಳುವ ಐಶ್ವರ್ಯವಂತರು ಹಾಗೂ ಅನುಕೂಲಸ್ಥರು ಮಾತ್ರವೇ ಹೆಚ್ಚು ಸಂತೋಷದಿಂದ ಇರುತ್ತಾರೆ ಎಂದು ಅಂದುಕೊಂಡಿರುತ್ತೇವೆ. ಆದರೆ ಸತ್ಯಾಂಶವೆಂದರೆ ಸಂತೋಷವೆಂಬುದು ಈ ಎಲ್ಲಾ ಸನ್ನಿವೇಶಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂಬುದಾಗಿದೆ.
ಸಂತಸದಿಂದ ಇರುವುದು ಎಂಬುದು ಒಂದು ಮನಸ್ಥಿತಿಯಾಗಿದೆ. ಯಾವುದೇ ಮನಸ್ಥಿತಿಯಂತೆ ನೀವು ಸಂತೋಷವಾಗಿರಬೇಕೆಂಬ ಅಭ್ಯಾಸವನ್ನು ಹೊಂದಿದ್ದರೆ ನೀವು ಇತರರಂತೆ ಖುಷಿಯಾಗಿ ಜೀವನದಲ್ಲಿ ಸಂತೋಷದಿಂದ ಇರಬಹುದಾಗಿದೆ. ಸಂತೋಷದಿಂದ ಇರುವವರು ಕೂಡ ಇದೇ ಅಭ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಂಡು ಖುಷಿ ಖುಷಿಯಿಂದ ಇರುತ್ತಾರೆ. ಹಾಗಿದ್ದರೆ ಆ ಅಭ್ಯಾಸಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಜೀವನದಲ್ಲಿ ಕೃತಜ್ಞರಾಗಿರುವುದು: ಯಾವುದೇ ವಿಷಯದಲ್ಲಿ ಕೃತಜ್ಞರಾಗಿರುವುದು ಹಾಗೂ ಇದ್ದುದರಲ್ಲಿ ತೃಪ್ತಿಪಡುವುದು ಸಂತೋಷದಿಂದ ಇರುವವರ ಒಂದು ಕ್ರಮವಾಗಿದೆ. ಜೀವನದಲ್ಲಿ ದುಃಖಗಳು ಬಂದಾಗಲೂ ಅದನ್ನು ಸಕಾರಾತ್ಮಕ ಸ್ವೀಕರಿಸುವವರೇ ಹೆಚ್ಚು. ಇಂತಹ ಜನರು ಪ್ರತಿಯೊಂದಕ್ಕೂ ಅಳುತ್ತಾ, ಪ್ರತಿಯೊಬ್ಬರನ್ನು ತೆಗಳುತ್ತಾ ಅಳುತ್ತಾ ಕೂರುವುದಿಲ್ಲ ಬದಲಿಗೆ ಜೀವನದಲ್ಲಿ ಏನಿದೆಯೋ ಅದಕ್ಕೆ ತೃಪ್ತರಾಗಿರುತ್ತಾರೆ ಹಾಗೂ ಆನಂದದಿಂದ ಇರುತ್ತಾರೆ.
ಋಣಾತ್ಮಕ ಅಂಶಗಳನ್ನು ದೂರಮಾಡುವುದು: ಸಂತೋಷದಿಂದ ಇರಬೇಕು ಎಂದರೆ ನೀವು ಯಾವಾಗಲೂ ಧನಾತ್ಮಕವಾಗಿ ಯೋಚಿಸುವವರಾಗಿರಬೇಕು. ನಿಮ್ಮ ಮೇಲೆ ನೀವು ಪ್ರೀತಿಬರುವಂತೆ ಮಾಡಬೇಕು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೀವು ಪ್ರೀತಿಸಬೇಕು. ಆರೋಗ್ಯಕರ ದಿನಚರಿಗಳನ್ನು ರೂಢಿಸಿಕೊಳ್ಳುವುದು, ಹಿತಮಿತ ಆಹಾರ ಸೇವನೆ, ವ್ಯಾಯಾಮ ಹೀಗೆ ನಕಾರಾತ್ಮಕ ಅಂಶಗಳನ್ನು ದೂರವಿರಿಸುವ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಸಂತೋಷದ ಕೀಲಿಕೈ ಎಂದೆನಿಸಿದೆ.