ಮಾವಿನ ಹಣ್ಣನ್ನು ತಿಂಗಳುಗಟ್ಟಲೆ ಶೇಖರಿಸಿಡಬೇಕೆಂದರೆ, ಅದರ ತಿರುಳನ್ನು ತೆಗೆದು ಮಿಕ್ಸಿಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಗಾಜಿನ ಬಾಟಲಿ ಅಥವಾ ಪಾತ್ರೆಯಲ್ಲಿ ತುಂಬಿ ಫ್ರಿಜ್ ನಲ್ಲಿಡಬೇಕು. ಮಳೆಗಾಲದಲ್ಲೂ ಇದನ್ನು ಬಳಸಬಹುದು. ಮ್ಯಾಂಗೋ ಶೇಕ್, ಶ್ರೀಖಂಡ್, ಐಸ್ ಕ್ರೀಂ ಮಾಡಲು ಇದನ್ನು ಬಳಸಬಹುದು.