Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

Jamun fruit : ಏಪ್ರಿಕಾಟ್ ಆಥವಾ ನೇರಳೆ ಹಣ್ಣು ಅಪಾರ ಔಷಧೀಯ ಗುಣಗಳನ್ನು ಹೊಂದಿದಎ. ಈ ಹಣ್ಣು ಮಧುಮೇಹಿಗಳಿಗೆ ವಿಶೇಷವಾಗಿದ್ದು, ಹಲವು ಲಾಭಗಳನ್ನು ನೀಡುತ್ತದೆ.

First published:

  • 17

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    ಈ ಹಣ್ಣನ್ನು ಜಾಮೂನು ಅಥವಾ ನೇರಳೆ ಅಂತಾನೂ ಕರೆಯಲಾಗುತ್ತದೆ. ಇದು ಮಧುಮೇಹಿಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಸಿಗುವ ಹಣ್ಣು ಇದಾಗಿದ್ದು, ಹಲವು ಆರೋಗ್ಯಕರ ಲಾಭಗಳನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    ನೇರಳೆ ಹಣ್ಣಿನ ಸೇವನೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಣ್ಣು ಮಾತ್ರವಲ್ಲ ಇದರ ಎಲೆಗಳು, ಮರದ ತೊಗಟೆ, ಬೀಜಗಳಲ್ಲಿಯೂ ಔಷಧೀಯ ಗುಣಗಳು ಸಮೃದ್ಧವಾಗಿವೆ. ಇವುಗಳನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    1.ಮಧುಮೇಹ: ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಮಧುಮೇಹದ ಸಮಸ್ಯೆಯು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ. ನೇರಳೆ ಹಣ್ಣು ನೈಸರ್ಗಿಕವಾಗಿ ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ನೇರಳೆ ಹಣ್ಣು ಕಡಿಮೆ ಗ್ಲೈಸೆಮಿಕ್ ಅಂಶವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಉಂಟಾಗುವ ಅತಿಯಾದ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆಯನ್ನು ಸಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ಅನೇಕ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    2.ರೋಗನಿರೋಧಕ ಶಕ್ತಿ: ನೇರಳೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ರೆ ನೇರಳೆ ಹಣ್ಣು ಸೇವಿಸಿ. ಇದರಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಹೇರಳವಾಗಿದೆ. ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್​​ಗಳು ನೇರಳೆ ಹಣ್ಣಿನಲ್ಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    3.ಹೃದಯದ ಆರೋಗ್ಯ: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಹೃದಯವನ್ನು ಆರೋಗ್ಯವಾಗಿಡುವಲ್ಲಿ ನೇರಳೆ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಪೊಟ್ಯಾಷಿಯಮ್ ಸಮೃದ್ಧವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯವನ್ನು ಆರೋಗ್ಯಕರವಾಗಿರಿಸಲು ನಿಯಮಿತ ಪ್ರಮಾಣದಲ್ಲಿ ನೇರಳೆ ಹಣ್ಣು ಸೇವಿಸಬೇಕು. ಅಧಿಕ ರಕ್ತದೊತ್ತಡದಿಂದ ಉಂಟಾಗುವ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ನೇರಳೆ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಸಹಾಯ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    4.ಕೊಲೊನ್ ಕ್ಯಾನ್ಸರ್: ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ನೇರಳೆ ಹಣ್ಣುಗಳಲ್ಲಿಯೂ ಕಂಡುಬರುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ಸೈನಿಡಿನ್ ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Jamun fruit : 5 ಆರೋಗ್ಯಕರ ಲಾಭಗಳಿಗಾಗಿ ಈ ಹಣ್ಣು ಸೇವಿಸೋದನ್ನು ಮರೀಬೇಡಿ

    5.ಚರ್ಮದ ಆರೈಕೆ: ನೇರಳೆ ಹಣ್ಣಿನ ನಿಯಮಿತ ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಹಣ್ಣ ತಿನ್ನುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ಮೃದುವಾಗಲು ಪ್ರಾರಂಭಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಅನ್ನು ಹೊಂದಿರುತ್ತದೆ ಇದು ಚರ್ಮಕ್ಕೆ ಒಳ್ಳೆಯದು. ಇದು ಚರ್ಮದಲ್ಲಿ ಕಾಲಜನ್ ರಚನೆಗೆ ಸಹಾಯ ಮಾಡುತ್ತಾರೆ. ಇದರೊಂದಿಗೆ ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES